Daily Horoscope Aug 27: ಇಂದು 2 ಶುಭ ಯೋಗ; ಈ 4 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
Daily Horoscope Aug 27: ಆಗಸ್ಟ್ 27ರ ಗುರುವಾರ ಭದ್ರ ಮತ್ತು ಪಂಚಕ ಯೋಗ ಇರುವುದು. ಇಂದು ಬೆಳಿಗ್ಗೆ 9.08ರವರೆಗೆ ಶುಕ್ಲ ಪಕ್ಷ ಚತುರ್ದಶಿ ತಿಥಿ ಇರುವುದು. ನಂತರ ಶುಕ್ಲ ಪಕ್ಷ ಹುಣ್ಣಿಮೆ ತಿಥಿ ಶುರುವಾಗುವುದು. ಇಂದು ಧನಿಷ್ಠ ನಕ್ಷತ್ರ ಇರುವುದು. ಇಂದಿನ ಗ್ರಹ ನಕ್ಷತ್ರವನ್ನು ಆಧರಿಸಿ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ ನೋಡೋಣ.
ಮೇಷ ರಾಶಿ (Aries)
ಕೆಲಸದಲ್ಲಿ ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗುವುದು. ಉದ್ಯಮಿಗಳು ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಹಣ ಉಳಿತಾಯ ಮಾಡುವತ್ತ ಗಮನ ಕೊಡುವಿರಿ. ನೀವು ಮಾಡುವ ಕೆಲಸಕ್ಕೆ ಸಂಗಾತಿಯ ಬೆಂಬಲ ಸಿಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರುವುದು.
ವೃಷಭ ರಾಶಿ (Taurus)
ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣದ ವಿಚಾರದಲ್ಲಿ ಇವತ್ತು ಎಚ್ಚರಿಕೆ ಅಗತ್ಯ. ಮನೆ ಅಥವಾ ಭೂಮಿಯನ್ನು ಖರೀದಿಸುವ ಬಗ್ಗೆ ಯೋಚಿಸಬಹುದು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಅವಿವಾಹಿತರಿಗೆ ಮದುವೆ ಮಾತುಕತೆ ನಡೆಯುವುದು.

ಮಿಥುನ ರಾಶಿ (Gemini)
ನಿಮ್ಮ ಪಾಲಿಗೆ ಸಕಾರಾತ್ಮಕ ದಿನವಾಗಿರುವುದು. ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗುವುದು. ಕುಟುಂಬ ಜೀವನವು ಸಂತೋಷದಿಂದ ಕೂಡಿರುವುದು. ದೆ. ಮಗುವಿನ ಉನ್ನತ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಿರಿ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು.
ಕರ್ಕಾಟಕ ರಾಶಿ (Cancer)
ಮನಸ್ಸಿನ ಆಸೆ ಈಡೇರುವ ದಿನ. ಇಡೀ ದಿನ ಸಂತಸದಿಂದ ಇರುವಿರಿ. ಕುಟುಂಬದ ಕೆಲವು ಶುಭ ಕಾರ್ಯಕ್ರಮಗಳಿಗೆ ಹಣವನ್ನು ಖರ್ಚು ಮಾಡಬೇಕಾಗಬಹುದು. ಆದಾಯದ ಮೂಲಗಳು ಹೆಚ್ಚಾಗುವುದು. ನೀವು ಮಾಡಬೇಕೆಂದಿರುವ ಕೆಲಸಗಳಿಗೆ ಅಡೆತಡೆ ಎದುರಾಗುವುದು.
ಸಿಂಹ ರಾಶಿ (Leo)
ಇಂದು ನಿಮ್ಮ ಪಾಲಿಗೆ ಅದೃಷ್ಟದ ದಿನವಾಗಿರಲಿದೆ. ಹೊಸ ಕೆಲಸಕ್ಕೆ ಕೈ ಹಾಕುವಿರಿ. ನೀವು ಮಾಡುವ ಕೆಲಸಕ್ಕೆ ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ಪ್ರೀತಿಪಾತ್ರರ ನಡುವೆ ಇದ್ದ ಮನಸ್ತಾಪ ಕೊನೆಯಾಗುವುದು.
ಕನ್ಯಾ ರಾಶಿ (Virgo)
ವ್ಯಾಪಾರ ವ್ಯವಹಾರದಲ್ಲಿ ಪ್ರಗತಿಯಾಗುವುದು. ಕೌಟುಂಬಿಕ ಸಮಸ್ಗೆ ಪರಿಹಾರ ಸಿಗುವುದು. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಹೆಚ್ಚಾಗುವುದು. ವ್ಯವಹಾರವನ್ನು ವಿಸ್ತರಿಸಲು ಅವಕಾಶ ಸಿಗುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.
ತುಲಾ ರಾಶಿ (Libra)
ಇಂದು ನಿಮ್ಮ ಪಾಲಿಗೆ ಸಂತೋಷದಾಯಕ ದಿನವಾಗಿರುವುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ಕೆಲಸದಲ್ಲಿ ನಿಮಗೆ ವಹಿಸಲಾದ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸುವಿರಿ. ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುವುದು. ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರುವುದು.
ವೃಶ್ಚಿಕ ರಾಶಿ (AScorpio)
ಹೊಸ ಕೆಲಸಕ್ಕೆ ಕೈ ಹಾಕುವಾಗ ಸ್ಪಷ್ಟತೆ ಇರಲಿ. ಮಕ್ಕಳು ಉತ್ತಮ ಸಾಧನೆ ಮಾಡುವರು. ಹಳೆ ಯೋಜನೆಯನ್ನು ಪೂರ್ಣಗೊಳಿಸುವಿರಿ. ನಿಮ್ಮ ವ್ಯವಹಾರವು ಪ್ರಗತಿ ಕಾಣಲಿದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.
ಧನು ರಾಶಿ (Sagitarius)
ಆರ್ಥಿಕ ಸ್ಥಿತಿ ಇಂದು ಸುಧಾರಿಸುವುದು. ಪ್ರಮುಖ ಕಂಪನಿಯಿಂದ ಕೆಲಸಕ್ಕೆ ಆಫರ್ ಬರಬಹುದು. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಮಕ್ಕಳ ಸಾಧನೆ ಸಂತಸ ತರುವುದು. ಮನೆಯಲ್ಲಿ ಸಂತಸ ನೆಲೆಯಾಗುವುದು.
ಮಕರ ರಾಶಿ (Capricorn)
ನಿಮಗೆ ಉತ್ತಮ ದಿನವಾಗಿರುವುದು. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ದೊಡ್ಡಮಟ್ಟದಲ್ಲಿ ಹಣಕಾಸಿನ ಲಾಭವಾಗುವುದು. ಕೆಲಸ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು.
ಕುಂಭ ರಾಶಿ (Aquarius)
ಉತ್ಸಾಹದಿಂದಲೇ ಇಂದಿನ ದಿನ ಆರಂಭವಾಗುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಎಲ್ಲರ ಮೆಚ್ಚುಗೆ ಸಿಗುವುದು. ನಿಮ್ಮ ಕೆಲಸಕ್ಕೆ ವಿಶೇಷ ಮನ್ನಣೆ ಸಿಗುವುದು. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವಿರಿ.
ಮೀನ ರಾಶಿ (Pisces)
ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವಿರಿ. ವಿದ್ಯಾರ್ಥಿಗಳು ಹೊಸ ಯಶಸ್ಸು ಸಿಗುವುದು. ವೈವಾಹಿಕ ಜೀವನವು ಸುಂದರವಾಗಿರುವುದು. ನೀವು ಮಾಡುವ ಉತ್ತಮ ಕೆಲಸಗಳಿಂದ ನಿಮ್ಮ ಗೌರವ ಹೆಚ್ಚಾಗುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.


Click it and Unblock the Notifications
