Horoscope Today: ದಿನ ಭವಿಷ್ಯ ಫೆಬ್ರವರಿ 21- ಲಕ್ಷ್ಮಿದೇವಿಯ ಕೃಪೆಯಿಂದ ಈ ರಾಶಿಗೆ ಐಷಾರಾಮಿ ಲೈಫ್
ಒಬ್ಬರ ಜಾತಕದಲ್ಲಿ ಗ್ರಹದ ಸ್ಥಾನ ಬಲವಾಗಿದ್ದರೆ ಆ ರಾಶಿಯ ಜನರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಆದರೆ ಜಾತಕದಲ್ಲಿ ಗ್ರಹದ ಸ್ಥಾನ ಉತ್ತಮವಾಗಿಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಫೆಬ್ರವರಿ 21 ಶುಕ್ರವಾರ ಕೆಲವು ರಾಶಿಗಳಿಗೆ ಶುಭ ದಿನವಾಗಿದೆ. ಜಾತಕದಲ್ಲಿ ಗ್ರಹಗಳ ಉತ್ತಮ ಸ್ಥಾನದಿಂದಾಗಿ ವೃತ್ತಿ, ಹಣ ಮತ್ತು ಸಂಬಂಧಗಳಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ಅಗಾಧ ಪ್ರಗತಿಯ ಸಾಧ್ಯತೆಗಳಿವೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ.
ಮೇಷ ರಾಶಿ
ಈ ದಿನ ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ. ನೀವು ವೃತ್ತಿಜೀವನದಲ್ಲಿ ಬದಲಾವಣೆ ಬಯಸಿದರೆ ನಿಮಗೆ ಉತ್ತಮ ಅವಕಾಶ ಸಿಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಕೆಲಸದ ಕಾರಣ ಪ್ರಯಾಣ ಮಾಡಬೇಕಾಗಬಹುದು. ವ್ಯಾಪಾರ ಮಾಡುವ ಜನರು ಸಹ ದೊಡ್ಡ ಲಾಭವನ್ನು ಪಡೆಯುತ್ತಾರೆ.

ವೃಷಭ ರಾಶಿ
ಫೆಬ್ರವರಿ 21 ವೃಷಭ ರಾಶಿಯವರಿಗೆ ಹೊಸ ಉದಯವಾಗಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಪೂರ್ಣಗೊಳ್ಳುವುದು. ಕುಟುಂಬದಲ್ಲಿ ಸಂತೋಷ ಹೆಚ್ಚಾಗುವುದು. ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುವಿರಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುವ ಸಮಯ ಇದಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ಶನಿ ನಿಮ್ಮನ್ನು ಆಶೀರ್ವದಿಸುವನು. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಶಿಕ್ಷಣದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ನೀವು ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ದಿನ ಬೆಳಿಗ್ಗೆ ಹಸುವಿಗೆ ಹಸಿರು ಮೇವು ನೀಡಿ ಅಗತ್ಯ ಇರುವವರಿಗೆ ಆಹಾರ ನೀಡುವುದು ತುಂಬಾ ಲಾಭದಾಯಕವಾಗಿದೆ.
ಕರ್ಕಾಟಕ ರಾಶಿ
ಈ ದಿನ ಕರ್ಕಾಟಕ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತವೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ನಿಮ್ಮ ಆತ್ಮೀಯರಿಂದ ಮೆಚ್ಚುಗೆಯನ್ನು ಪಡೆಯುವಿರಿ. ನಿಮ್ಮ ಎಲ್ಲಾ ಸಮಸ್ಯೆಗಳ ನಿವಾರಣೆಯ ಶಕ್ತಿಯಾಗಿ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮೊಂದಿಗೆ ಇರುತ್ತದೆ. ಬೆಳಿಗ್ಗೆ ಧನಲಕ್ಷ್ಮೀಯ ಮಂತ್ರವನ್ನು ಪಠಿಸಿ. ಹಸಿದವರಿಗೆ ಆಹಾರವನ್ನು ನೀಡಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ತುಂಬಾ ಶುಭವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ ಮತ್ತು ವ್ಯವಹಾರದಲ್ಲಿ ಲಾಭ ದೊರೆಯುವುದು. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಯಶಸ್ಸು ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮನ್ನು ಮೆಚ್ಚುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಅದ್ಭುತವಾಗಿದೆ. ಅವರು ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಬಹುನಿರೀಕ್ಷಿತ ಕೆಲಸವು ಪೂರ್ಣಗೊಳ್ಳುತ್ತದೆ. ನಿಮ್ಮ ಗುರುವಿನಿಂದ ನಿಮಗೆ ಬೆಂಬಲ ಸಿಗುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆ ಇರಲಿದೆ. ಬೆಳಿಗ್ಗೆ ಲಕ್ಷ್ಮೀ ದೇವಿಯ ಮಂತ್ರವನ್ನು ಪಠಿಸಿ.
ತುಲಾ ರಾಶಿ
ಈ ದಿನ ತುಲಾ ರಾಶಿಯವರಿಗೆ ಮಿಶ್ರ ಫಲ ಸಿಗಲಿದೆ. ವೈವಾಹಿಕ ಸಮಸ್ಯೆ ಬಗೆಹರಿಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಕೊಂಚ ನೋವಾಗಬಹುದು. ಧಾರ್ಮಿಕ ವಿಷಯಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಲಿದೆ. ಬೆಳಿಗ್ಗೆ ಹಸಿದವರಿಗೆ ಊಟ ಹಾಕಿ, ಬಡವನಿಗೆ ಬಿಳಿ ಬಟ್ಟೆ ದಾನ ಮಾಡಿ. ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಉತ್ತಮವಾಗಿರುವುದಿಲ್ಲ. ಕೆಲಸದ ಸ್ಥಳದಲ್ಲಿ ಅಡೆತಡೆಗಳು ಎದುರಾಗುತ್ತವೆ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಬೆಳಿಗ್ಗೆ ಲಕ್ಷ್ಮೀದೇವಿಯ ಮಂತ್ರವನ್ನು ಪಠಿಸಿ, ಬೆಳಗ್ಗೆ ಹಿರಿಯರ ಪಾದಗಳನ್ನು ಮುಟ್ಟಿ ಮನೆಯಿಂದ ಹೊರಡಿ. ಇದರಿಂದ ನಿಮ್ಮ ಮೇಲಿನ ಕೆಟ್ಟ ದೃಷ್ಟಿ ದೂರವಾಗುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಫೆಬ್ರವರಿ 21 ತುಂಬಾ ಅದೃಷ್ಟದಾಯಕವಾಗಿರುತ್ತದೆ. ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರಲಿದೆ. ಎಲ್ಲೋ ಸಿಲುಕಿಕೊಮಡ ಹಣ ನಿಮ್ಮ ಕೈ ಸೇರಲಿದೆ. ಹಣವನ್ನು ಗಳಿಸುವ ಅವಕಾಶವನ್ನು ಮರಳಿ ಪಡೆಯಬಹುದು. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿಯೂ ಸಂತೋಷ ಹೆಚ್ಚಾಗುವುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಉತ್ತಮವಾಗಿಲ್ಲ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಎಲ್ಲಾ ಕೆಲಸಗಳನ್ನು ಮೇಲಾಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಎಲ್ಲಾ ಹಣಕಾಸಿನ ಸಮಸ್ಯೆಗಳಿಂದ ದೂರವಾಗಲು ಇಂದು ಲಕ್ಷ್ಮೀದೇವಿಯನ್ನು ಪೂಜಿಸಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಮಿಶ್ರವಾಗಿದೆ. ಈ ಹಿಂದೆ ಕೆಲಸದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲು ಕಷ್ಟವಾಗಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಇರುತ್ತದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ತುಂಬಾ ಶುಭವಾಗಿರುತ್ತದೆ. ಪ್ರೀತಿ ಮತ್ತು ಸಂಬಂಧಗಳು ಬಲಗೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಈ ದಿನವು ನಿಮಗೆ ತುಂಬಾ ಒಳ್ಳೆಯದಾಗಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications