Chaturgraha Yoga: ಮಕರ ರಾಶಿಯಲ್ಲಿ ಚತುರ್ಗ್ರಹ ಯೋಗ: ಈ 3 ರಾಶಿಯವರ ಹತ್ತಿರಕ್ಕೂ ಸುಳಿಯದು ಹಣದ ಸಮಸ್ಯೆ
ಸೌರವ್ಯೂಹದಲ್ಲಿ ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳು ಸಂಚಾರದ ವೇಳೆ ರಾಶಿಯವನ್ನು ಬದಲಾಯಿಸುತ್ತದೆ. ಹೀಗೆ ಗ್ರಹಗಳು ಕೆಲವೊಮ್ಮೆ ಸಂಚಾರಿಸುವಾಗ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳಲ್ಲಿ ಇಂತಹ ರಚನೆಯ ಯೋಗಗಳ ಪ್ರಭಾವವನ್ನು ಕಾಣಬಹುದು.
ವೈದಿಕ ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯಲ್ಲಿ ಚತುರ್ಗ್ರಹ ಯೋಗ ರೂಪುಗೊಳ್ಳುತ್ತದೆ. ಈ ಯೋಗದ ಸಮಯದಲ್ಲಿ ಸೂರ್ಯ, ಬುಧ, ಮಂಗಳ ಮತ್ತು ಶುಕ್ರರು ಮಕರ ರಾಶಿಯಲ್ಲಿ ಒಟ್ಟಿಗೆ ಪ್ರಯಾಣಿಸುತ್ತಾರೆ. ಅಂದಹಾಗೆ ಈ ಚತುರ್ಗ್ರಹ ಯೋಗ ಫೆಬ್ರವರಿ 12 ರಿಂದ ಮಕರ ರಾಶಿಯಲ್ಲಿ ರೂಪುಗೊಳ್ಳಲಿದೆ. ಏಕೆಂದರೆ ಫೆಬ್ರವರಿ 12ರಂದು ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ಈ ಚತುರ್ಗ್ರಹ ಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಕೆಲವು ರಾಶಿಯವರು ಅದೃಷ್ಟದ ಕೃಪೆಯಿಂದ ಬಹಳಷ್ಟು ಹಣವನ್ನು ಪಡೆಯುತ್ತಾರೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮಕರ ರಾಶಿ
ಚತುರ್ಗ್ರಹ ಯೋಗವು ಮಕರ ರಾಶೀಯವರಿಗೆ ಶುಭ ಫಲಿತಾಂಶವನ್ನು ನೀಡುತ್ತದೆ. ಚತುರ್ಗ್ರಹ ಯೋಗ ಮಕರ ರಾಶಿಯ ಮೊದಲ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದ ಮಕರ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.
ಹೂಡಿಕೆಯಿಂದ ಸಾಕಷ್ಟು ಲಾಭ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವಿರಿ. ಕಛೇರಿಯಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ ಉದ್ಯೋಗಿಗಳು ಬಡ್ತಿ ಪಡೆಯುವ ಸಾಧ್ಯತೆಯಿದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ಜಂಟಿ ಉದ್ಯಮಗಳನ್ನು ಮಾಡುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ತುಲಾ ರಾಶಿ
ಚತುರ್ಗ್ರಹ ಯೋಗದಿಂದ ತುಲಾ ರಾಶಿಯವರಿಗೆ ಮಂಗಳಕರ ದಿನಗಳು ಆರಂಭವಾಗಲಿವೆ. ಚತುರ್ಗ್ರಹ ಯೋಗ ತುಲಾ ರಾಶಿಯ 7ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಹೀಗಾಗಿ ಈ ಯೋಗದ ಅವಧಿಯಲ್ಲಿ ನೀವು ಕೆಲಸದಲ್ಲಿ ಉತ್ಸಾಹದಲ್ಲಿರುತ್ತೀರಿ.
ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಉಪಯುಕ್ತವಾಗಿರಲಿವೆ. ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರಯಾಣಿಸಲು ಅವಕಾಶವಿರುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ
ಚತುರ್ಗ್ರಹ ಯೋಗ ಕನ್ಯಾ ರಾಶಿಯವರಿಗೆ ಶುಭ ತರಲಿದೆ. ಇದು ಕನ್ಯಾರಾಶಿಯ 6 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಹೀಗಾಗಿ ಈ ರಾಶಿಚಕ್ರದ ಉದ್ಯಮಿಗಳು ಅಧಿಕ ಲಾಭ ಗಳಿಸುವ ಸಾಧ್ಯತೆಯಿದೆ.
ವ್ಯಾಪಾರಸ್ಥರು ಅನಿರೀಕ್ಷಿತ ಲಾಭ ಮತ್ತು ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತಾರೆ. ಸಿಕ್ಕಿಬಿದ್ದ ಹಣ ಕೈಗೆ ಬರುತ್ತದೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಅದೃಷ್ಟ ತರಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications