Chanakya Niti: ಹೆಣ್ಣು ಮಗುವಿನ ತಂದೆ ಈ ಕೆಲಸಗಳನ್ನು ಮಾಡಲೇ ಬಾರದು, ಇದು ಪಶ್ಚಾತಾಪಕ್ಕೆ ದಾರಿಯಾದೀತು
Chanakya Niti: ಆಚಾರ್ಯ ಚಾಣಕ್ಯನನ್ನು ಕೌಟಿಲ್ಯ ಎಂದೂ ಕರೆಯುತ್ತಾರೆ. ಚಾಣಾಕ್ಯ ತನ್ನ ನೀತಿಯಲ್ಲಿ ಜೀವನದ ಪ್ರತಿಯೊಂದು ಅಂಶವನ್ನು ಸಮತೋಲನಗೊಳಿಸಲು ಬೇಕಾಗಿರುವ ಆಳವಾದ ಮತ್ತು ಪ್ರಾಯೋಗಿಕ ತತ್ವಗಳನ್ನು ಕೊಟ್ಟಿದ್ದಾರೆ. ಅವರ ನೀತಿ ಇಂದಿಗೂ ಪ್ರಸ್ತುತ. ಈ ತತ್ವಗಳು ಸಾಮಾಜಿಕ ಮತ್ತು ರಾಜಕೀಯ ಜೀವನಕ್ಕೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲ, ಕುಟುಂಬ ಸಂಬಂಧಗಳನ್ನು ಗಟ್ಟಿ ಮಾಡುವುದರಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ.
ಈ ತತ್ವಗಳಲ್ಲಿ, ಚಾಣಕ್ಯನು ತಂದೆ ಮತ್ತು ಮಗಳ ಸಂಬಂಧ ಹೇಗಿರಬೇಕು ಎನ್ನುವುದನ್ನು ಕೂಡಾ ಹೇಳಿದ್ಧಾನೆ. ತಂದೆ ಮಗಳ ಸಂಬಂಧದಲ್ಲಿ ತಂದೆಯು ಕೆಲವು ಕೆಲಸಗಳನ್ನು ಮಾಡಲೇ ಬಾರದು ಎಂದು ಹೇಳಿದ್ದಾನೆ. ಚಾಣಾಕ್ಯನ ನೀತಿಯನ್ನು ಅನುಸರಿಸದಿರುವುದು ಮಗಳ ಭವಿಷ್ಯ ಮತ್ತು ಕುಟುಂಬದ ಘನತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಚಾಣಕ್ಯ ನೀತಿಯನ್ನು ಆಧರಿಸಿ, ತಂದೆ ತನ್ನ ಮಗಳೊಂದಿಗೆ ಎಂದಿಗೂ ಮಾಡಬಾರದಂಥಹ ಆರು ಕೆಲಸಗಳನ್ನು ಇಲ್ಲಿ ಹೇಳಲಾಗಿದೆ.

Chanakya Niti: ಮಗಳ ಆಸೆಗಳನ್ನು ಅಗೌರವಿಸುವುದು
ತಂದೆ ಯಾವತ್ತೂ ಮಗಳ ಇಚ್ಛೆಗೆ ಅಗೌರವ ತೋರಿಸಬಾರದು. ಮಗಳ ಭಾವನೆಗಳು, ಕನಸುಗಳು ಮತ್ತು ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ತಂದೆಯ ಮೊದಲ ಕರ್ತವ್ಯ. ಆಕೆಯ ಶಿಕ್ಷಣ, ವೃತ್ತಿ ಅಥವಾ ಮದುವೆಯಂತಹ ಪ್ರಮುಖ ನಿರ್ಧಾರಗಳ ಬಗ್ಗೆ ಆಕೆಯ ಅಭಿಪ್ರಾಯಗಳನ್ನು ಕೇಳಲೇ ಬೇಕು. ಮಗಳ ಇಷ್ಟಕ್ಕೆ ವಿರುದ್ದವಾಗಿ ಶಿಕ್ಷಣ, ವೃತ್ತಿ ಅಥವಾ ಮದುವೆಯ ನಿರ್ಧಾರವನ್ನು ತೆಗೆದುಕೊಂಡರೆ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಬಹುದು. ಚಾಣಕ್ಯನ ಪ್ರಕಾರ, ಒಂದು ವೇಳೆ ತಂದೆ ಮಗಳ ಇಷ್ಟಕ್ಕೆ ವಿರುದ್ದವಾಗಿ ನಡೆದುಕೊಂಡರೆ ಮಗಳ ಆತ್ಮವಿಶ್ವಾಸ ಕುಗ್ಗಬಹುದು. ತನ್ನ ನಿರ್ಧಾರದ ಬಗ್ಗೆ ತಂದೆ ನಂತರ ವಿಷಾದಿಸಬೇಕಾಗಬಹುದು.
ಮಗಳ ಮೇಲೆ ಅನಗತ್ಯ ನಿಯಂತ್ರಣ
ನತಿಸನಾದತಿ ಕನ್ಯಾ ಪಿತಾ ಯಃ ಸ್ವೇಚ್ಛಾಯ ಚರೇತ್ ಎಂದು ಚಾಣಕ್ಯ ನೀತಿ ಹೇಳುತ್ತದೆ. ಇದರರ್ಥ ತಂದೆ ತನ್ನ ಮಗಳ ಮೇಲೆ ಅತಿಯಾದ ನಿಯಂತ್ರಣವನ್ನು ಹಾಕಬಾರದು. ತನ್ನ ಮಗಳನ್ನು ಸ್ವತಂತ್ರವಾಗಿ ಬಿಡಬೇಕು. ಆಕೆಗೆ ಸ್ವಾವಲಂಬನೆಯನ್ನು ಕಲಿಸಬೇಕು. ಸ್ನೇಹಿತರನ್ನು ಭೇಟಿಯಾಗುವುದು, ತನಗೆ ಬೇಕಾದ ವೃತ್ತಿಯನ್ನು ಆಯ್ಕೆ ಮಾಡುವಂತಹ ನಿರ್ಧಾರವನ್ನು ಆಕೆಗೆಯೇ ಬಿಡಬೇಕು. ಮಾತ್ರವಲ್ಲ ಆಕೆಯ ನಿರ್ಧಾರದ ಮೇಲೆ ನಂಬಿಕೆ ಇಡಬೇಕು. ಮಗಳ ಎಲ್ಲಾ ಕೆಲಸಗಳಿಗೆ ಅಡ್ಡ ಬರುತ್ತಲೇ ಹೋದರೆ ಅವಳ ವ್ಯಕ್ತಿತ್ವವನ್ನೇ ನಾಶ ಮಾಡಿದ ಹಾಗೆ ಆಗಬಹುದು.
ಪಿತಾ ಧರ್ಮಃ ಸ್ವಯಂ ರಕ್ಷಾತ್ ಕನ್ಯಾ ದೃಷ್ಟ್ಯ ಪ್ರಭಾವತಿ ಎಂದು ಕೂಡಾ ಚಾಣಕ್ಯ ನೀತಿ ಹೇಳುತ್ತದೆ. ಒಬ್ಬ ತಂದೆಯ ನಡವಳಿಕೆ ಮಗಳು ತನ್ನನ್ನು ಅನುಸರಿಸುವಂತೆ ಇರಬೇಕು. ತಂದೆ ಮಗಳ ಮೊದಲ ಹಿರೋ. ಮಗಳ ಮುಂದೆ ಅನೈತಿಕ ಕೃತ್ಯಗಳಲ್ಲಿ ತೊಡಗುವುದು ಅಥವಾ ಅಗೌರವದಿಂದ ವರ್ತಿಸುವುದು ಅವಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇದು ಕುಟುಂಬದ ಘನತೆಯನ್ನು ಮುರಿಯಬಹುದು. ಮಾತ್ರವಲ್ಲ, ಮಗಳು ತನ್ನ ತಂದೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಮಗಳ ಮುಂದೆ ಈ ರೀತಿ ನಡೆದುಕೊಂಡರೆ ಮುಂದೊಂದು ದಿನ ತಂದೆ ಮುಜುಗರ ಪಡಬೇಕಾಗಬಹುದು.
ಮಗಳ ಮದುವೆಯಲ್ಲಿ ಆತುರ ಅಥವಾ ನಿರ್ಲಕ್ಷ್ಯ
ಕನ್ಯಾ ದಾನಂ ವಿಚಾರಂ ಸ್ಯಾತ್ ನ ತ್ವರಾಯ ನ ಚಲಸ್ಯೇ ಅಂದರೆ ಮಗಳ ಮದುವೆಯನ್ನು ಆತುರದಿಂದ, ಅಜಾಗರೂಕತೆಯಿಂದ ನಿರ್ಧಾರ ಮಾಡಬಾರದು. ಮದುವೆಯಲ್ಲಿ ಆಕೆಯ ಮುಂದಿನ ಇಡೀ ಜೀವನವೇ ನಿಂತಿರುತ್ತದೆ. ತಂದೆ ತನ್ನ ಮಗಳಿಗೆ ಸೂಕ್ತವಾದ ಜೋಡಿಯನ್ನು ಆಯ್ಕೆಮಾಡುವಾಗ ಭಾರೀ ಎಚ್ಚರಿಕೆ ವಹಿಸಬೇಕು. ಆಕೆಯ ಶಿಕ್ಷಣ, ಮೌಲ್ಯಗಳು ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಸಾಮಾಜಿಕ ಒತ್ತಡ ಅಥವಾ ಆತುರಕ್ಕೆ ಬಿದ್ದು ಮಗಳಿಗೆ ಯಾರನ್ನೋ ತಂದು ಜೋಡಿ ಮಾಡಿ ಬಿಡಬಾರದು. ಇದು ಮಗಳ ಜೀವನವನ್ನೇ ನರಕವಾಗಿಸಿ ಬಿಡಬಹುದು. ಚಾಣಕ್ಯನ ಪ್ರಕಾರ, ಇದು ತಂದೆ ತನ್ನ ಜೀವನದಲ್ಲಿ ಮಾಡುವ ಅತಿ ದೊಡ್ಡ ತಪ್ಪಾಗಿರಬಹುದು.
ಮಗಳ ಸುರಕ್ಷತೆಯ ಬಗ್ಗೆ ಗಮನ ಕೊಡದಿರುವುದು
ಕನ್ಯಾ ರಕ್ಷಾ ಪಿತಾ ಧರ್ಮಃ, ಯತ್ರ ನ ಸ್ಯಾತ್ ತತ್ರ ದೋಷಃ - ಮಗಳನ್ನು ರಕ್ಷಿಸುವುದು ತಂದೆಯ ಪರಮ ಕರ್ತವ್ಯ. ಅದೆಂತಾ ಪರಿಸ್ಥಿತಿ ಎದುರಾದರೂ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲೇ ಬಾರದು. ತನ್ನ ಮಗಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುರಕ್ಷತೆಯೇ ತಂದೆಯ ಮೊದಲ ಆದ್ಯತೆಯಾಗಿರಬೇಕು. ಅವಳ ಶಿಕ್ಷಣ, ಸಾಮಾಜಿಕ ಪರಿಸರ ಅಥವಾ ಭಾವನಾತ್ಮಕ ಅಗತ್ಯಗಳೇ ಆಗಿರಲಿ, ತಂದೆ ಯಾವಾಗಲೂ ಎಚ್ಚರದಿಂದ ಇರಬೇಕು. ಚಾಣಕ್ಯನ ಪ್ರಕಾರ, ಮಗಳ ಸುರಕ್ಷತೆಯಲ್ಲಿ ತಂದೆ ತೋರುವ ನಿರ್ಲಕ್ಷ್ಯವು ಮಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಬಹುದು.


Click it and Unblock the Notifications
