ಬುಧಾದಿತ್ಯ ರಾಜಯೋಗದಿಂದ ಬೆಳಗುವುದು ಈ ರಾಶಿಯವರ ಅದೃಷ್ಟ: ತಿಂಗಳು ಪೂರ್ತಿ ಇರುವುದು ಮಹಾಲಕ್ಷ್ಮೀ ಕೃಪೆ
ನಾಳೆ ಅಂದರೆ ಆಗಸ್ಟ್ 22ಕ್ಕೆ ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಸೂರ್ಯ ಮತ್ತು ಕೇತು ಈಗಾಗಲೇ ಇದೇ ರಾಶಿಯಲ್ಲಿದ್ದಾರೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗವು ಬುಧಾದಿತ್ಯ ಯೋಗವನ್ನು ಸೃಷ್ಟಿಸುತ್ತದೆ. ಬುಧಾದಿತ್ಯ ಯೋಗದಿಂದಾಗಿ ಕೆಲವು ರಾಶಿಯವರ ಅದೃಷ್ಟ ಬೆಳಗುವುದು.
ಮೇಷ ರಾಶಿ (Aries)
ಹಣಕಾಸಿನ ಲಾಭವಾಗುವುದು. ಮಕ್ಕಳು ಸಾಧನೆ ಸಂತೋಷ ತರುವುದು. ಆದರೂ ಯಾವ ವಿಚಾರದಲ್ಲಿಯೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನೆಗೆಟಿವ್ ವಿಚಾರಗಳನ್ನೇ ಮಾತನಾಡುವವರಿಂದ ದೂರವಿರಿ. ಹೊಸ ಕೆಲಸಕ್ಕೆ ಕೈ ಹಾಕುವಿರಿ.

ವೃಷಭ ರಾಶಿ (Taurus)
ಶಾಂತಿ ಮತ್ತು ಸಂತೋಷ ಹೆಚ್ಚುವುದು. ಭವಿಷ್ಯಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರ ತೆಗೆದುಕೊಳ್ಳುವಿರಿ. ವೃತ್ತಿಜೀವನದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಸಕಾರಾತ್ಮಕ ಫಲ ಸಿಗುವುದು. ಗೌರವ ಹೆಚ್ಚಾಗುವುದು.
ಮಿಥುನ ರಾಶಿ (Gemini)
ಕೆಲಸದಲ್ಲಿ ಹೊಸ ಉತ್ಸಾಹ ಇರುವುದು. ಕಠಿಣ ಪರಿಶ್ರಮದಿಂದ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯವಾಗುವುದು. ವ್ಯವಹಾರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದು ಒಳ್ಳೆಯ ಸಮಯ. ಸರ್ಕಾರಿ ಕೆಲಸಗಳು ಪ್ರಗತಿ ಸಾಧಿಸಬಹುದು.
ಕರ್ಕಾಟಕ ರಾಶಿ (Cancer)
ಗೌರವ ಹೆಚ್ಚಾಗುವುದು. ಹಣಕಾಸಿನ ವಿಷಯಗಳಲ್ಲಿ ಯಶಸ್ಸು ಸಿಗುವುದು. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆಯಿದೆ. ನಿಮ್ಮ ಕೈ ಸೇರದೆ ಉಳಿದುಕೊಂಡಿರುವ ಹಣ ವಾಪಸ್ ಸಿಗುವುದು. ಕುಟುಂಬದ ಸಂತೋಷ ಹೆಚ್ಚಾಗುವುದು. ಭಾವನೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ.
ಸಿಂಹ ರಾಶಿ:
ಕೆಲಸದಲ್ಲಿನ ಗೊಂದಲಗಳಿಗೆ ಪರಿಹಾರ ಸಿಗಬಹುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು. ಆರ್ಥಿಕ ಲಾಭ ಗಳಿಸುವುದಕ್ಕೆ ಅವಕಾಶ ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕುಟುಂಬದ ಬೆಂಬಲವೂ ಇರುವುದು. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.
ಕನ್ಯಾ ರಾಶಿ (Virgo)
ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ವಿದೇಶ ಪ್ರಯಾಣದ ಯೋಗವಿದೆ. ಆದಾಯ ಹೆಚ್ಚಿಸಿಕೊಳ್ಳಲು ಹೊಸ ಅವಕಾಶ ಸಿಗುವುದು. ಖರ್ಚು ಕೂಡಾ ಹೆಚ್ಚಾಗಬಹುದು. ಬಜೆಟ್ ಬಗ್ಗೆ ಎಚ್ಚರಿಕೆಯಿಂದ ಇರಿ.
ತುಲಾ ರಾಶಿ (Libra)
ಆತ್ಮವಿಶ್ವಾಸ ಹೆಚ್ಚಾಗುವುದು. ಆದಾಯ ಹೆಚ್ಚಿಸಿಕೊಳ್ಳಲು ಸಮಯ ಅನುಕೂಲಕರವಾಗಿರುವುದು. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆಯಿದೆ. ಇದ್ದಕ್ಕಿದ್ದಂತೆಯೇ ಹಣದ ಲಾಭವಾಗುವುದು. ಕೆಲಸ ಬದಲಾಯಿಸಬೇಕು ಅಂದುಕೊಂಡವರಿಗೂ ಸಮಯ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ (Scorpio)
ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗುವುದು. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿಯಾಗುವುದು. ಸಾಲ ಕೊಟ್ಟ ಹಣ ವಾಪಸ್ ಬರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.
ಧನು ರಾಶಿ (Sagitarius)
ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಬಹುದು. ಅದೃಷ್ಟ ನಿಮ್ಮ ಜೊತೆಗಿರುವುದು. ದೇವರ ಕೆಲಸದಲ್ಲಿ ಭಾಗಿಯಾಗುವಿರಿ. ಬೇರೆ ಕೆಲಸದ ಬಗ್ಗೆ ಯೋಚಿಸುತ್ತಿದ್ದರೆ ಸಮಯ ಸೂಕ್ತವಾಗಿದೆ. ಹೊಸ ವ್ಯವಹಾರವನ್ನು ಆರಂಭಿಸಬಹುದು.
ಮಕರ ರಾಶಿ (Capricorn)
ಉನ್ನತ ಶಿಕ್ಷಣ ಮಾಡುವವರಿಗೆ ಇದು ಉತ್ತಮ ಸಮಸಯವಾಗಿರುವುದು. ವಿದೇಶಗಳಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುವುದು. ವೃತ್ತಿ ಮತ್ತು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆ ಅಗತ್ಯ. ಆರೋಗ್ಯದ ಬಗ್ಗೆ ಗಮನ ಕೊಡಿ.
ಕುಂಭ ರಾಶಿ (Aquarius)
ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸಿಗೆ ಅವಕಾಶಗಳು ಸಿಗುವುದು. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗುವುದು. ಆರ್ಥಿಕವಾಗಿ, ಈ ಸಮಯ ನಿಮಗೆ ಅನುಕೂಲಕರವಾಗಿರುವುದು. ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಮನಸ್ತಾಪ ತಂದುಕೊಳ್ಳದಿದ್ದರೆ ಒಳ್ಳೆಯದು. .
ಮೀನ ರಾಶಿ (Pisces)
ಬುಧನು ಮೀನ ರಾಶಿಯ ಆರನೇ ಮನೆಯಲ್ಲಿದ್ದಾನೆ. ಸ್ಪರ್ಧಾತ್ಮಕ ಯಶಸ್ಸಿನ ಜೊತೆಗೆ ಆದಾಯ ಹೆಚ್ಚಾಗುವುದು. ಕೆಲಸದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆ ಮತ್ತು ತಿಳುವಳಿಕೆಯಿಂದ ಇರಬೇಕಾಗುವುದು. ಉದ್ಯೋಗದಲ್ಲಿರುವವರು ಮೇಲಧಿಕಾರಿಗಳೊಂದಿಗೆ ವಾದಕ್ಕೆ ಇಳಿಯಬೇಡಿ. ಪಾಲುದಾರಿಕೆಯಲ್ಲಿ ಬ್ಯುಸಿನೆಸ್ ಮಾಡುತ್ತಿದ್ದರೆ ಎಚ್ಚರ ಇರಲಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.


Click it and Unblock the Notifications
