ಏನಿದು ಬ್ರೇಕಿಂಗ್ ನ್ಯೂಸ್? ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ!
Recommended Video

ಕರ್ನಾಟಕದ ಎಲ್ಲರಿಗೂ ನಮಸ್ಕಾರ. ನಿಮಗೊಂದು ಭವಿಷ್ಯ ತಿಳಿಸುವುದಿತ್ತು. ಈ ಹಿಂದೆ ಅಂದರೆ ಈ ವರ್ಷದ ಫೆಬ್ರವರಿಯಲ್ಲಿ ಭವಿಷ್ಯ ನುಡಿದಿದ್ದೆ. ಈ ಸಲ ಮುಖ್ಯಮಂತ್ರಿ ಆಗುವುದಿದ್ದರೆ ಅದು ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ. ಒಂದು ವೇಳೆ ಅವರು ಸಿಎಂ ಆಗದಿದ್ದರೆ, ಅವರು ಸೂಚಿಸಿದ ವ್ಯಕ್ತಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದ್ದೆ.
ಅದು ಟಾರೋ ಕಾರ್ಡ್ ರೀಡಿಂಗ್ ಮೂಲಕ ಹೇಳಿದ್ದ ಭವಿಷ್ಯ. ಅದೀಗ ನಿಜವಾಗಿದೆ. ಮತ್ತು ಅವರು ಮುಖ್ಯಮಂತ್ರಿ ಆಗುವುದು ಖಾತ್ರಿ ಆದ ನಂತರ ಹಲವಾರು ಕರೆಗಳು ನನಗೆ ಬರುತ್ತಿವೆ. ನಾನು ಹೇಳಿದ್ದೆಲ್ಲ ನಿಜವಾಗಿದೆ ಎಂದರ್ಥವಲ್ಲ. ಕೆಲವು ಬೇರೆ ಫಲಿತಾಂಶ ಬಂದಿದೆ. ಹೌದು, ನಾನು ದೇವರಲ್ಲ. ಟಾರೋ ಕಾರ್ಡ್ ರೀಡಿಂಗ್ ಬಗ್ಗೆ ನಂಬಿಕೆ ಇಟ್ಟುಕೊಂಡ ವಿನಮ್ರ ವಿದ್ಯಾರ್ಥಿ.

ಆ ದೇವರು ನಾಲಗೆ ಮೇಲೆ ನಿಂತು ನುಡಿಸಿದ್ದನ್ನು ನಿಮಗೆ ತಿಳಿಸುವ ಸಂವಹನಕಾರ. ಇದೀಗ ಕರ್ನಾಟಕ ವಿಧಾನಸಭೆಗೆ ಸಂಬಂಧಿಸಿದಂತೆ ಮತ್ತೊಂದು ಭವಿಷ್ಯವು ಗೋಚರಿಸತೊಡಗಿದೆ. ಮುಂದಿನ ವರ್ಷದ ಜನವರಿ ಅಥವಾ ಫೆಬ್ರವರಿಯಲ್ಲಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ಗೋಚರಿಸತೊಡಗಿವೆ.
ಅವರು ಅದು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ಯಾವ ಮಾರ್ಗದ ಮೂಲಕ ಸಿಎಂ ಸ್ಥಾನದಲ್ಲಿ ಕೂರುತ್ತಾರೆ? ಇವೆಲ್ಲ ನನಗೆ ಗೊತ್ತಿಲ್ಲ. ಆದರೆ ಮುಂದಿನ ವರ್ಷದ ಜನವರಿ- ಫೆಬ್ರವರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕೂರುವ ಅದೃಷ್ಟ ಕಾಣಿಸತೊಡಗಿದೆ.












Click it and Unblock the Notifications