ಭಾದ್ರಪದ-ಅಶ್ವಿನ ಮಾಸದ ವಾರದ ಪಂಚಾಂಗ: ಅ.11ರಿಂದ 17
ಭಾದ್ರಪದ-ಅಶ್ವಿನ ಮಾಸದ ಅಕ್ಟೋಬರ್ 11ರಿಂದ 10ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಅ.11. ರವಿವಾರ : ಉತ್ತರಾಫಾಲ್ಗುಣಿ ನಕ್ಷತ್ರ. ಚಿತ್ತ ಮಳೆ ಆರಂಭ. ದೂರ ಪ್ರಯಾಣದಿಂದ ಮನಸ್ಸಿ ಖುಷಿ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಅ.12. ಸೋಮವಾರ : ಹಸ್ತಾ ಮಹಾನವಮಿ, ಸರ್ವಪಿತೃ ಅಮವಾಸ್ಯೆ (12 ನೇ ತಾರೀಖು ಸೋಮವಾರ ಬೆಳಗಿನ 3ಕ್ಕೆ ಅಮವಾಸ್ಯೆ ಆರಂಭ. 13 ಮಂಗಳವಾರ ಬೆಳಗಿನ 6-30ಕ್ಕೆ ಮುಕ್ತಾಯ). ಸರಕಾರಿ ರಜೆ. ಜಾಗತಿಕ ನೇತ್ರ ದಿನ. ಭಾದ್ರಪದ ಮಾಸ ಮುಕ್ತಾಯ. ದೂರ ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಅ.13. ಮಂಗಳವಾರ : ಚಿತ್ತಾ. ಅಶ್ವಿನ ಮಾಸ ಆರಂಭ. ದಸರಾ ಘಟ ಸ್ಥಾಪನೆಯ ದಿನ. ನವರಾತ್ರಿ ಆರಂಭ. ಮನೆ ಕೆಲಸ ಆರಂಭಿಸಲು ಸೂಕ್ತ. ದೂರ ಪ್ರಯಾಣದಿಂದ ಹಣಕಾಸಿನ ಮುಗ್ಗಟ್ಟು ಹೆಚ್ಚಳ. [ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಆಚರಿಸುವ ಬಗೆ]
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಅ.14. ಬುಧವಾರ : ಸ್ವಾತಿ. ಅಂತಾರಾಷ್ಟ್ರೀಯ ಮಾಪನ ದಿನ. ಹೊಸ ಮನೆ ಗೃಹ ಪ್ರವೇಶಕ್ಕೆ ಮತ್ತು ನೂತನ ವಾಹನ ಕೊಳ್ಳಲು ಶುಭಕರ. ದೂರ ಪ್ರಯಾಣದಿಂದ ಮನಸ್ಸಿಗೆ ಬೇಸರ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಅ.15. ಗುರುವಾರ : ಸ್ವಾತಿ. ದೂರ ಪ್ರಯಾಣದಿಂದ ಕುಟುಂಬಕ್ಕೆ ಲಾಭ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಅ.16. ಶುಕ್ರವಾರ : ವಿಶಾಖಾ. ಜಾಗತಿಕ ಅರವಳಿಕೆ ಮತ್ತು ಆಹಾರ ದಿನ. ಹೊಸ ಬಟ್ಟೆ ಖರೀದಿಸಲು ಸೂಕ್ತ. ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಅ.17. ಶನಿವಾರ : ಅನುರಾಧಾ. ದೂರ ಪ್ರಯಾಣದಿಂದ ಆನಂದ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಈ ವಾರದ ಅಮವಾಸ್ಯೆಯ ನಂತರ ಅ.27 ರ ಸೀಗಿ ಹುಣ್ಣಿಮೆಯವರೆಗೂ ಶುಭಕರ. ಈ ವಾರ ಹೊಸಮನೆಗೆ ಸಂಬಂಧಪಟ್ಟ ಎಲ್ಲ ಕೆಲಸ ಕಾರ್ಯ ಮಾಡಿಕೊಳ್ಳುವುದು ಉತ್ತಮ.
ಈ ವಾರದ ಗ್ರಹಗತಿ : ಸಿಂಹ : ಶುಕ್ರ+ಮಂಗಳ+ಗುರು. ಕನ್ಯಾ : ರಾಹು+ಬುಧ+ರವಿ+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ) ವೃಶ್ಚಿಕ: ನೀಚಶನಿ. ಮೀನ: ಕೇತು.












Click it and Unblock the Notifications