ಭಾದ್ರಪದ ಮಾಸದ ವಾರದ ಪಂಚಾಂಗ : ಅಕ್ಟೋಬರ್ 4ರಿಂದ 10

ಭಾದ್ರಪದ ಮಾಸದ ಅಕ್ಟೋಬರ್ 04ರಿಂದ 10ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Bhadrapada masa - Oct 04 to 10 : Rahu Kala, Gulika Kala, Yamaganda Kala

ಅ.4. ರವಿವಾರ : ಮೃಗಶಿರಾ ನಕ್ಷತ್ರ. ಜಾಗತಿಕ ಜಾನುವಾರು ಕಲ್ಯಾಣ ದಿನ. ದೂರ ಪ್ರಯಾಣದಿಂದ ಯಶಸ್ಸು. [ಮೃಗಶಿರಾ ನಕ್ಷತ್ರವಿರುವ ವ್ಯಕ್ತಿಗಳ ಗುಣವಿಶೇಷ]

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಅ.5. ಸೋಮವಾರ : ಆರಿದ್ರಾ. ಕಚೇರಿ ಮತ್ತು ನ್ಯಾಯಾಲಯಗಳ ಕೆಲಸ ಕಾರ್ಯಗಳಿಗೆ ಸೂಕ್ತ. ದೂರ ಪ್ರಯಾಣದಿಂದ ನಷ್ಟ. [ಆರಿದ್ರಾ ನಕ್ಷತ್ರದವರೇ, ಸಂಶಯ ಬಿಡಿ ಸ್ವಾಮಿ]

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಅ.6. ಮಂಗಳವಾರ : ಪುನರ್ವಸು. ಹೂಡಿದ ಹಣಕಾಸಿನ ವ್ಯವಹಾರಕ್ಕೆ ಸೂಕ್ತ (ಷೇರು ವ್ಯವಹಾರ). ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಅ.7. ಬುಧವಾರ : ಪುಷ್ಯಾ. ದೂರ ಪ್ರಯಾಣದಿಂದ ಶುಭಯೋಗ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಅ.8. ಗುರುವಾರ : ಆಶ್ಲೇಷಾ. ಏಕಾದಶಿ. ದೂರ ಪ್ರಯಾಣದಿಂದ ಸುಖ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಅ.9. ಶುಕ್ರವಾರ : ಮಘಾ. ಜಾಗತಿಕ ಅಂಚೆ ದಿನ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಅ.10. ಶನಿವಾರ : ಪೂರ್ವಾ ಫಾಲ್ಗುಣಿ. ಎರಡನೇ ಶನಿವಾರ. ಭಾರತ ಅಂಚೆ ದಿನ. ಜಾಗತಿಕ ಮಾನಸಿಕ ಆರೋಗ್ಯ ದಿನ. ಶನಿ ಪ್ರದೋಷ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.

ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಲೇಸು.

ಈ ವಾರದ ಗ್ರಹಗತಿ : ಮಿಥುನ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಸಿಂಹ: ಶುಕ್ರ+ಮಂಗಳ+ಗುರು. ಕನ್ಯಾ: ರವಿ+ಬುಧ+ರಾಹು. ವೃಶ್ಚಿಕ: ನೀಚಶನಿ. ಮೀನ: ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+