Bhadra Mahapurusha Yoga: ರಾಜಯೋಗದಿಂದ ಹೆಚ್ಚಲಿದೆ ಈ 4 ರಾಶಿಯವರ ಸಂಪತ್ತು, ಆರ್ಥಿಕ ಪ್ರಗತಿ

ಜ್ಯೋತಿಷ್ಯದಲ್ಲಿ ಬುಧನನ್ನು ಬುದ್ಧಿಕಾರಕ ಎಂದು ಕರೆಯಲಾಗುತ್ತದೆ. ಬುಧ ತೀಕ್ಷ್ಣವಾದ ಬುದ್ಧಿಶಕ್ತಿ, ನೆನಪಿನ ಶಕ್ತಿ ಮತ್ತು ತಾರ್ಕಿಕ ಚಿಂತನೆಗೆ ಕಾರಣಕರ್ತ. ಮಾತು, ತರ್ಕ, ಬರವಣಿಗೆ ಮತ್ತು ಇನ್ನೊಬ್ಬರೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎನ್ನುವುದಕ್ಕೆ ಬುಧನೇ ಅಧಿಪತಿ. ಹಾಗಾಗಿ ಬುಧನ ಸಂಚಾರ ಮತ್ತು ಜಾತಕದಲ್ಲಿ ಆತನ ಸ್ಥಾನ ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ.

ಇದೀಗ ಬುಧನು ತನ್ನದೇ ಅಧಿಪತ್ಯದ ಮಿಥುನ ರಾಶಿ ಅಥವಾ ಉಚ್ಛ್ರಾಯ ರಾಶಿ ಕನ್ಯಾದಲ್ಲಿ ಇರುವಾಗ ಮತ್ತು ಜಾತಕದ ಕೇಂದ್ರ ಮನೆಗಳಲ್ಲಿ, ಅಂದರೆ 1, 4, 7 ಅಥವಾ 10 ನೇ ಮನೆಯಲ್ಲಿ ನೆಲೆಗೊಂಡಾಗ, ಭದ್ರ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಪ್ರಸ್ತುತ, ಈ ಶುಭ ಯೋಗವು ಕನ್ಯಾರಾಶಿಯಲ್ಲಿ ರೂಪುಗೊಂಡಿದೆ.

Bhadra Mahapurusha Yoga dp

ಜ್ಯೋತಿಷ್ಯದ ಪ್ರಕಾರ, ಈ ಯೋಗದ ರಚನೆಯು ಕನ್ಯಾರಾಶಿ ಸೇರಿದಂತೆ ನಾಲ್ಕು ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಸುವರ್ಣ ಅವಕಾಶಗಳನ್ನು ಪಡೆಯುತ್ತಾರೆ. ಅವರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುವುದು. ಅವರು ವ್ಯವಹಾರದಲ್ಲಿಯೂ ಅದ್ಭುತ ಯಶಸ್ಸನ್ನು ಸಾಧಿಸುವರು. ವಿಶೇಷವೆಂದರೆ ಈ ಸಮಯದಲ್ಲಿ, ಬುಧಾದಿತ್ಯ ಯೋಗವು ಕೂಡಾ ಕನ್ಯಾರಾಶಿಯಲ್ಲಿಯೇ ರೂಪುಗೊಳ್ಳುತ್ತಿದೆ. ಹಾಗಾಗಿ ಈ ಸಮಯವು ಯಾವ ರಾಶಿಯವರಿಗೆ ಅತ್ಯುತ್ತಮವಾಗಿರುತ್ತದೆ ಎನ್ನುವುದನ್ನು ನೋಡೋಣ.

ಅದೃಷ್ಟ ಪಡೆಯುವ ರಾಶಿಗಳು :

ಕನ್ಯಾ ರಾಶಿ (Virgo) ಆರ್ಥಿಕ ಲಾಭ

ಈ ಗ್ರಹಗಳ ಸಂಯೋಜನೆಯು ನಿಮಗೆ ಅತ್ಯಂತ ಶುಭಕರವಾಗಿರುವುದು. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರುವುದು. ನಿಮ್ಮ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ವಿಯಾಗುವಿರಿ. ಕೈ ಹಾಕಿದ ಕೆಲಸದಲ್ಲಿ ಜಯ ಸಿಗುವುದು. ಹೊಸ ಕೆಲಸ ಆರಂಭಿಸಬಹುದು. ಅಥವಾ ಹೊಸ ಕೆಲಸಕ್ಕೆ ಸೇರಿಕೊಳ್ಳುವುದಕ್ಕೂ ಇದು ಸೂಕ್ತ ಸಮಯ. ನಿಮ್ಮ ಬುದ್ಧಿವಂತಿಕೆಯಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸುವಿರಿ. ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಲಾಭಗಳಾಗುವುದು. ಈ ಸಮಯದಲ್ಲಿ ವ್ಯವಹಾರದಲ್ಲಿ ಕೂಡಾ ಅಪಾರ ಯಶಸ್ಸನ್ನು ಸಾಧಿಸುವ ಸಾಧ್ಯತೆಗಳಿವೆ.

ಕರ್ಕಾಟಕ (Cancer): ಹಠಾತ್ ಆರ್ಥಿಕ ಲಾಭದ ಸಾಧ್ಯತೆ

ಈ ಸಂಯೋಜನೆಯು ನಿಮಗೂ ಅತ್ಯಂತ ಲಾಭದಾಯಕವಾಗಿರುವುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವೇ ಸಿಗುವುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬರುವುದು. ಈ ಸಮಯದಲ್ಲಿ ಆಸ್ತಿ ಖರೀದಿಸುವ ಬಗ್ಗೆ ಯೋಚಿಸಬಹುದು. ಆಸ್ತಿಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕುಟುಂಬ ಜೀವನವು ಸಂತೋಷ ಮತ್ತು ಶಾಂತಿಯಿಂದ ತುಂಬಿರುವುದು. ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ನಿಮಗೆ ಅರಿವಿಲ್ಲದ ಮೂಲಗಳಿಂದಲೂ ಹಣ ಬರುವುದು.

ಮಕರ ರಾಶಿ (Capricorn) - ವೃತ್ತಿಜೀವನದಲ್ಲಿ ಪ್ರಗತಿ

ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯಾಗುವುದು. ಹೊಸ ಉದ್ಯೋಗಕ್ಕೆ ಸೇರುವ ಅವಕಾಶ ಇರುವುದು. ಅಥವಾ ಹಳೆ ಕೆಲಸದಲ್ಲಿಯೇ ಬಡ್ತಿ ಸಿಗುವ ಸಾಧ್ಯತೆ ಇದೆ. ಈ ಸಮಯ ಉದ್ಯಮಿಗಳಿಗೆ ವರದಾನವಾಗಲಿದೆ. ಈ ಸಮಯದಲ್ಲಿ ಹೊಸ ಒಪ್ಪಂದಗಳು ಹೆಚ್ಚು ಲಾಭವನ್ನು ತಂದು ಕೊಡಬಹುದು. ಹೊಸ ವ್ಯವಹಾರ ಶುರು ಮಾಡುವುದಕ್ಕೆ ಇದು ಸರಿಯಾದ ಸಮಯ. ಹೂಡಿಕೆಗಳಿಂದ ಉತ್ತಮ ಲಾಭವಾಗುವುದು.

ಮೀನ ರಾಶಿ (Pisces): ಆರ್ಥಿಕ ಸ್ಥಿತಿ ಸದೃಢ

ಈ ರಾಶಿಯಲ್ಲಿ ಜನಿಸಿದವರು ವೃತ್ತಿಜೀವನದಲ್ಲಿ ಗಮನಾರ್ಹ ಲಾಭವನ್ನು ನಿರೀಕ್ಷಿಸಬಹುದು. ಪಾಲುದಾರಿಕೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುವುದು. ವೈವಾಹಿಕ ಜೀವನವು ಸಂತೋಷವಾಗಿರುವುದು. ನಿಮ್ಮ ಸಂಗಾತಿಯ ಹೆಸರಿನಲ್ಲಿ ಮಾಡಿದ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವುದು. ಬಾಕಿ ಇರುವ ಯೋಜನೆಗಳು ಪೂರ್ಣಗೊಳ್ಳುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+