Venus Transit 2024: ಚಿತ್ರಾ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಈ ರಾಶಿಗೆ ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ, ಸಮೃದ್ಧಿ, ಸಂತೋಷ, ಕಲೆ ಮತ್ತು ಸಂಗೀತದ ಅಂಶವೆಂದು ಪರಿಗಣಿಸಲಾಗಿದೆ. ಒಬ್ಬರ ಜಾತಕದಲ್ಲಿ ಈ ಶುಕ್ರನು ಪ್ರಬಲ ಸ್ಥಾನದಲ್ಲಿದ್ದರೆ ಅಂಥಹ ವ್ಯಕ್ತಿಯು ಸಮೃದ್ಧ, ಸಂತೋಷ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾನೆ.

ಈ ಶುಕ್ರ ಗ್ರಹ ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಯನ್ನು ಮಾತ್ರವಲ್ಲದೆ ನಕ್ಷತ್ರವನ್ನೂ ಬದಲಾಯಿಸುತ್ತದೆ. ಹಾಗೆ ಬದಲಾದಾಗ ಅದರ ಪರಿಣಾಮ ಎಲ್ಲ ರಾಶಿಯವರಲ್ಲೂ ಕಾಣಿಸುತ್ತದೆ. ಹೀಗೆ ಶುಕ್ರ ಸೆಪ್ಟೆಂಬರ್ 13 ರಂದು ಚಿತ್ರಾ ನಕ್ಷತ್ರವನ್ನು ಪ್ರವೇಶಿಸಿತು. ಅದು ಈ ನಕ್ಷತ್ರದಲ್ಲಿ ಸೆಪ್ಟೆಂಬರ್ 24 ರವರೆಗೆ ಇರುತ್ತದೆ.

ಜ್ಯೋತಿಷ್ಯದಲ್ಲಿ ಚಿತ್ರಾ ನಕ್ಷತ್ರ 14ನೇ ನಕ್ಷತ್ರ ಮತ್ತು ಅದರ ಅಧಿಪತಿ ಮಂಗಳ ಗ್ರಹವಾಗಿದೆ. ಈ ಚಿತ್ರಾ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, ಕೆಲವು ರಾಶಿಯವರಿಗೆ ಅದೃಷ್ಟವಿರುತ್ತದೆ. ಈಗ ಶುಕ್ರನು ಚಿತ್ರಾ ನಕ್ಷತ್ರದಲ್ಲಿ ಇರುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ತಿಳಿಯೋಣ.

astrology venus transit in chitra nakshatra on september 2024 these zodiac signs will be lucky in kannada

ಕರ್ಕ ರಾಶಿ

ಕರ್ಕ ರಾಶಿಯವರು ಶುಕ್ರನ ಸಂಚಾರದಿಂದ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಗಳಿಸುವರು. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ವಿವಾಹಿತರು ಸಂಗಾತಿಯ ಸಹಾಯದಿಂದ ಶ್ರೀಮಂತರಾಗುವ ಅವಕಾಶ ಪಡೆಯುತ್ತಾರೆ.

ಹಣಕಾಸಿನ ಸ್ಥಿತಿಯು ಸಾಮಾನ್ಯಕ್ಕಿಂತ ಬಲವಾಗಿರುತ್ತದೆ. ಜೀವನ ತೃಪ್ತಿಕರವಾಗಿರುತ್ತದೆ. ಸರ್ಕಾರಿ ನೌಕರರಿಗೆ ಅಧಿಕ ಯಶಸ್ಸು ಸಿಗಲಿದೆ. ಉನ್ನತ ಅಧಿಕಾರಿಗಳೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಗುರಿಯನ್ನು ನೀವು ಸುಲಭವಾಗಿ ತಲುಪುತ್ತೀರಿ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶ ಸಿಗಲಿದೆ. ಜೀವನ ಸುಖಮಯವಾಗಿರುತ್ತದೆ.

astrology venus transit in chitra nakshatra on september 2024 these zodiac signs will be lucky in kannada

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಶುಕ್ರ ಸಂಚಾರದಿಂದ ಜೀವನ ತುಂಬಾ ಸಂತೋಷಕರವಾಗಿರುತ್ತದೆ. ಬಹಳ ದಿನಗಳಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭ ಸಿಗಲಿದೆ. ವ್ಯಾಪಾರದಲ್ಲಿ ಅದೃಷ್ಟ ನಿಮ್ಮ ಪರವಾಗಿ ಇಲಿದೆ. ಯಶಸ್ಸು ಮತ್ತು ಲಾಭ ನಿಮ್ಮ ಕಡೆ ಇರುತ್ತದೆ.

ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಉದ್ಯೋಗ ದೊರೆಯಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಜೀವನದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತವೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.

astrology venus transit in chitra nakshatra on september 2024 these zodiac signs will be lucky in kannada

ಕುಂಭ ರಾಶಿ

ಕುಂಭ ರಾಶಿಯವರಿಗೆ ಶುಕ್ರ ಸಂಚಾರದಿಂದ ವೃತ್ತಿ ಜೀವನದಲ್ಲಿ ಹೆಚ್ಚಿನ ಲಾಭಗಳು ಸಿಗುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದ್ದು ಯಶಸ್ಸು ಕೈಹಿಡಿಯಲಿದೆ. ಜೀವನ ತೃಪ್ತಿಕರವಾಗಿರುತ್ತದೆ. ಮದುವೆ ಮತ್ತು ಪ್ರೇಮ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಅಧಿಕ ಲಾಭ ದೊರೆಯಲಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+