Venus Transit 2024: ಕುಂಭ ರಾಶಿಯಲ್ಲಿ ಶುಕ್ರ ಸಂಕ್ರಮಣ: ಶುಕ್ರನ ದೆಸೆಯಿಂದ ಈ ರಾಶಿಗೆ ಸಂಪತ್ತು, ಸಂತೋಷ, ಸಮೃದ್ಧಿ

ಗ್ರಹಗಳು ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸಿದಂತೆಲ್ಲಾ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರಲಿದೆ. ಶುಕ್ರ ಸಂಪತ್ತು-ವೈಭವ, ಸಂತೋಷ-ಸಮೃದ್ಧಿ ಮತ್ತು ಪ್ರೀತಿ-ಆಕರ್ಷಣೆಗೆ ಕಾರಣವಾದ ಗ್ರಹವಾಗಿದೆ. ಶುಕ್ರನ ಆಶೀರ್ವಾದ ಪಡೆಯುವ ವ್ಯಕ್ತಿ ಎಂದಿಗೂ ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ. ಶುಕ್ರ ತನ್ನ ರಾಶಿಯನ್ನು ಕಾಲಕಾಲಕ್ಕೆ ಬದಲಾಯಿಸುತ್ತಲೇ ಇರುತ್ತಾನೆ.

ಶುಕ್ರ ಗ್ರಹ ಡಿಸೆಂಬರ್ 2ರ ನಂತರದ ಮುಂದಿನ ರಾಶಿಚಕ್ರ ಬದಲಾವಣೆಯನ್ನು ಡಿಸೆಂಬರ್ 28ರ ಶನಿವಾರದಂದು ಮಾಡಲಿದೆ. 2025ರ ಮೊದಲು ಶುಕ್ರನು ಶನಿಯ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ಕುಂಭ ರಾಶಿಯನ್ನು ಡಿಸೆಂಬರ್ 28ರ ಶನಿವಾರದಂದು ರಾತ್ರಿ 11.48 ಕ್ಕೆ ಪ್ರವೇಶಿಸಲಿದೆ. ಇದು 5 ರಾಶಿಗಳ ಮೇಲೆ ಶುಭ ಪರಿಣಾಮಗಳನ್ನು ಬೀರುತ್ತದೆ. ಹಾಗಾದರೆ ಆ ರಾಶಿಯವರು ಯಾರೆಂದು ಈಗ ತಿಳಿಯೋಣ.

ಶುಕ್ರ ಶನಿ ಸಂಯೋಗದಿಂದ 5 ರಾಶಿಯವರಿಗೆ ಧನಲಾಭ!

Astrology venus transit in aquarius on december 28 this zodiac sign will get wealth happiness prosperity

ಮೇಷ ರಾಶಿ

ಶುಕ್ರ-ಶನಿ ಸಂಯೋಗದಿಂದ ಮೇಷ ರಾಶಿಯವರಿಗೆ ಸಾಕಷ್ಟು ಪ್ರಯೋಜನವಿದೆ. ಮೇಷ ರಾಶಿಯವರ ಸಂಪತ್ತು ಹೆಚ್ಚಾದಂತೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೆ ಅವು ಬಗೆಹರಿಯಲಿವೆ. ಸಂಬಂಧಗಳು ಮೊದಲಿಗಿಂತ ಬಲವಾಗಿರುತ್ತವೆ.

ದೀರ್ಘಕಾಲದಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳಲ್ಲಿ ನೀವು ಯಶಸ್ಸನ್ನು ಕಾಣುವಿರಿ. ನೀವು ವಿಶೇಷವಾಗಿ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಅನಾವಶ್ಯಕ ವಿಷಯಗಳಲ್ಲಿ ತಲೆ ಹಾಕುವುದನ್ನು ತಪ್ಪಿಸಿದರೆ ಒಳ್ಳೆಯದು. ಮುಂದಿನ ವರ್ಷ ಹಲವಾರು ಗುರಿಗಳನ್ನು ಇಟ್ಟುಕೊಂಡಿರಿ. ಸಂಗಾಂತಿಯೊಂದಿಗಿನ ಸಂಬಂಧ ಮೊದಲಿಗಿಂತ ಗಟ್ಟಿಯಾಗುತ್ತವೆ.

Astrology venus transit in aquarius on december 28 this zodiac sign will get wealth happiness prosperity

ಮಿಥುನ ರಾಶಿ

ಸಂಪತ್ತು ಮತ್ತು ಸಮೃದ್ಧಿಯ ಗ್ರಹವಾದ ಶುಕ್ರ ಮಿಥುನ ರಾಶಿಯವರಿಗೆ ದಯೆ ತೋರಲಿದೆ. ಶನಿದೇವನ ವಿಶೇಷ ಆಶೀರ್ವಾದ ಈ ಸಮಯದಲ್ಲಿ ಇರುವುದರಿಂದ ನಿಮ್ಮ ಆಸೆಗಳು ಈಡೇರುತ್ತವೆ. ಶುಕ್ರ ಮತ್ತು ಶನಿಯ ಸಂಯೋಗದಿಂದ ಸಂಪತ್ತು ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ನಿಮ್ಮನ್ನು ಸಂತೋಷದಿಂದ ಇಡುತ್ತದೆ. ಉದ್ಯೋಗಿಗಳು ಮತ್ತು ವ್ಯಾಪಾರಸ್ಥರು ಕೆಲಸದಲ್ಲಿ ಗುರುತಿಸಿಕೊಳ್ಳುತ್ತಾರೆ.

Astrology venus transit in aquarius on december 28 this zodiac sign will get wealth happiness prosperity

ಮಕರ ರಾಶಿ

ಶುಕ್ರ ಮತ್ತು ಶನಿಯ ಸಂಯೋಗ ಮಕರ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಹೊಸ ವರ್ಷಕ್ಕೂ ಮೊದಲು ನೀವು ಒಳ್ಳೆಯ ಸುದ್ದಿ ಕೇಳಬಹುದು. ವಿದೇಶಕ್ಕೆ ಹೋಗಲು ಯೋಜನೆ ರೂಪಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ಹೆಚ್ಚಾಗುತ್ತದೆ. ನೀವು ಯಾವುದೇ ಜಗಳಗಳಿಂದ ದೂರವಿದ್ದರೆ ಈ ಸಮಯದಲ್ಲಿ ತುಂಬಾ ಒಳ್ಳೆಯದು.

Astrology venus transit in aquarius on december 28 this zodiac sign will get wealth happiness prosperity

ಕುಂಭ ರಾಶಿ

ಕುಂಭ ರಾಶಿಯ ಜನರು ಶುಕ್ರನ ಸಂಚಾರದಿಂದ ಆರ್ಥಿಕ ಲಾಭ ಪಡೆಯಲಿದ್ದಾರೆ. ಈ ರಾಶಿಚಕ್ರದ ಜನರ ಮೇಲೆ ಶುಕ್ರ ಮತ್ತು ಶನಿ ಶುಭ ಪರಿಣಾಮಗಳನ್ನು ಕಾಣಬಹುದು. ಕುಂಭ ರಾಶಿಯವರ ಎಲ್ಲಾ ಕೆಲಸಗಳು ಯಶಸ್ವಿಯಾಗಿ ನೆರವೇರುತ್ತವೆ. ಹಣಕ್ಕೆ ಸಂಬಂಧಿಸಿದ ಪ್ರಯೋಜನಗಳು ಹೆಚ್ಚು. ಆತ್ಮವಿಶ್ವಾಸದಿಂದ ಕೆಲಸ ಮಾಡುವಿರಿ. ಸಂಬಂಧಗಳು ಆಳವಾಗಿ ಬಲಗೊಳ್ಳುತ್ತವೆ. ಸಂಬಂಧದಲ್ಲಿ ಮಧುರತೆ ಕೂಡಿರಲಿದೆ. ಈ ಸಮಯದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಆನಂದಿಸಲು ಸಾಧ್ಯವಾಗುತ್ತದೆ.

Astrology venus transit in aquarius on december 28 this zodiac sign will get wealth happiness prosperity

ಮೀನ ರಾಶಿ

ಮೀನ ರಾಶಿಯವರಿಗೆ ಶುಕ್ರ ಮತ್ತು ಶನಿಯ ಸಂಯೋಗ ಫಲಪ್ರದವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ಆತಂಕ ಬೇಡ. ವಾಹನ ಖರೀದಿಗೆ ಅವಕಾಶ ಸಿಗಲಿದೆ. ಕೆಲಸದಲ್ಲಿನ ನಿಮ್ಮ ಗೌರವ ಹೆಚ್ಚಾಗುತ್ತದೆ. ಸಂಪತ್ತು ಮತ್ತು ಆಸ್ತಿಗೆ ಸಂಬಂಧಿಸಿದ ಪ್ರಯೋಜನಗಳು ಹೆಚ್ಚಾಗಲಿವೆ. ಪ್ರೀತಿಯ ಜೀವನ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿ ನಡುವೆ ಪ್ರೀತಿ ಬಲಗೊಳ್ಳುತ್ತದೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+