Trigrahi Yoga 2025: ತ್ರಿಗ್ರಹಿ ಯೋಗ- ಈ ರಾಶಿಗಳಿಗೆ ಸುವರ್ಣ ಸಮಯ

ಒಂಬತ್ತು ಗ್ರಹಗಳಲ್ಲಿ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ನೆಲೆಗೊಂಡಾಗ ತ್ರಿಗ್ರಹ ಯೋಗ ರೂಪಗೊಳ್ಳುತ್ತದೆ. ಈ ಯೋಗ ಮುಂಬರುವ ದಿನಗಳಲ್ಲಿ ರೂಪುಗೊಳ್ಳುತ್ತಿದ್ದು, ಮೀನದಲ್ಲಿ 3 ಗ್ರಹಗಳು ಒಟ್ಟಿಗೆ ನೆಲೆಗೊಳ್ಳಲಿವೆ. ಬುಧ, ಸೂರ್ಯ ಮತ್ತು ಶನಿ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸೇರುವುದರಿಂದ ತ್ರಿಗ್ರಹಿ ಯೋಗ ರೂಪಗೊಳ್ಳುತ್ತದೆ.

ತ್ರಿಗ್ರಹ ಯೋಗ ರೂಪಗೊಳ್ಳುವ ದಿನಾಂಕ

ಬುಧ ಗ್ರಹ ಫೆಬ್ರವರಿ 27 ಗುರುವಾರ ಮೀನ ರಾಶಿಯಲ್ಲಿ ಸಾಗುತ್ತದೆ. ಮೇ 7, 2025 ರವರೆಗೆ ಈ ರಾಶಿಯಲ್ಲಿ ಬುಧ ಇರುತ್ತದೆ. ಸೂರ್ಯನು ಮಾರ್ಚ್ 14, 2025 ರಂದು ಸಂಜೆ 6:58 ಕ್ಕೆ ಮೀನ ರಾಶಿಯಲ್ಲಿ ಪ್ರವೇಶಿಸುತ್ತಾನೆ. ಇದಾದ ನಂತರ ಮಾರ್ಚ್ 29, 2025 ರಂದು ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶನಿಯ ಸಂಯೋಗವಾಗಿ ತ್ರಿಗ್ರಹಿ ಯೋಗ ರೂಪುಗೊಳ್ಳುತ್ತದೆ.

Astrology trigrahi yoga 2025 golden time begins for these zodiac signs

ವೃಷಭ ರಾಶಿ

ತ್ರಿಗ್ರಹಿ ಯೋಗದಿಂದ ವೃಷಭ ರಾಶಿಯವರಿಗೆ ಶುಭ ಫಲ ಸಿಗಲಿದೆ. ವೃಷಭ ರಾಶಿಯ ಜನರ ಅದೃಷ್ಟ ಬೆಳಗಲಿದೆ. ತ್ರಿಗ್ರಹ ಯೋಗದ ರಚನೆಯಿಂದಾಗಿ ಉದ್ಯೋಗ, ವ್ಯವಹಾರ ಮತ್ತು ಕುಟುಂಬದ ವಿಷಯದಲ್ಲಿ ಪ್ರಯೋಜನವಾಗಲಿದೆ. ಅರ್ಧಕ್ಕೆ ನಿಂತು ಹೋದ ಕೆಲಸ ಪೂರ್ಣಗೊಳ್ಳುತ್ತವೆ. ಮನೆ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಪ್ರಗತಿಯನ್ನು ಕಾಣುವಿರಿ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.

Astrology trigrahi yoga 2025 golden time begins for these zodiac signs

ಸಿಂಹ ರಾಶಿ

ತ್ರಿಗ್ರಹಿ ಯೋಗದ ರಚನೆಯಿಂದಾಗಿ ಸಿಂಹ ರಾಶಿಯ ಜನರು ಕೇವಲ ಪ್ರಯೋಜನಗಳನ್ನು ಪಡೆಯುತ್ತಾರೆ. ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುವುದು. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಇದು ಒಳ್ಳೆಯ ಸಮಯ.

Astrology trigrahi yoga 2025 golden time begins for these zodiac signs

ಧನು ರಾಶಿ

ಧನು ರಾಶಿಯವರಿಗೆ ತ್ರಿಗ್ರಹಿ ಯೋಗ ಪ್ರಯೋಜನಕಾರಿಯಾಗಿದೆ. ಜೀವನದಲ್ಲಿ ನಿರಂತರವಾಗಿ ಕಾಡುವ ಸಮಸ್ಯೆಗಳು ದೂರವಾಗುತ್ತವೆ. ನೀವು ಬಯಸಿದ ಕೆಲಸ ಸಿಗಬಹುದು. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಆಸ್ತಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು ದೊರೆಯುವುದು. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿದ್ದು, ಅದು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.

Astrology trigrahi yoga 2025 golden time begins for these zodiac signs

ಕುಂಭ ರಾಶಿ

ಕುಂಭ ರಾಶಿಯವರಿಗೆ ತ್ರಿಗ್ರಹಿ ಯೋಗ ತುಂಬಾ ಒಳ್ಳೆಯ ಫಲ ನೀಡುತ್ತದೆ. ಸೂರ್ಯ, ಬುಧ ಮತ್ತು ಶನಿಯ ಅನುಗ್ರಹದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಕೆಲವು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ನೀವು ಸಾಲದಿಂದ ಮುಕ್ತರಾಗಬಹುದು. ಸಾಲವಾಗಿ ನೀಡಿದ ಯಾವುದೇ ಹಣವನ್ನು ಮರುಪಡೆಯಬಹುದು. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಪ್ರಗತಿಯನ್ನು ಕಾಣುವಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+