Trigraha Yoga 2025: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ 2025: ಈ ರಾಶಿಗೆ ಗಂಡಾಂತರ

ಗ್ರಹಗಳ ಚಲನೆಯ ವಿಷಯದಲ್ಲಿ ಹೊಸ ವರ್ಷ ಬಹಳ ವಿಶೇಷವಾಗಿದೆ. ಈ ಅವಧಿಯಲ್ಲಿ ಮೂರು ಪ್ರಮುಖ ಪ್ರಭಾವಶಾಲಿ ಗ್ರಹಗಳ ರಾಶಿ ಬದಲಾವಣೆ ನಡೆಯುತ್ತಿದ್ದು, ಇದು 12 ರಾಶಿಗಳ ಜನರ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಫೆಬ್ರವರಿ ತಿಂಗಳಲ್ಲಿ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರುತ್ತದೆ. ಇದರಿಂದಾಗಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ.

ತ್ರಿಗ್ರಹ ಯೋಗದಿಂದಾಗಿ 12 ರಾಶಿಗಳ ಜೀವನದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಆದರೆ 12 ರಾಶಿಗಳಲ್ಲಿ ಯಾವುದೇ ಮೂರು ರಾಶಿಗಳಿಗೆ ಸೇರಿದ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು. ಹಾಗಾದರೆ ತ್ರಿಗ್ರಹ ಯೋಗ ಯಾವ ಸಮಯದಲ್ಲಿ ರೂಪುಗೊಳ್ಳುತ್ತದೆ ಮತ್ತು ಯಾವ ಮೂರು ರಾಶಿಗಳ ಮೇಲೆ ಅದರ ನಕಾರಾತ್ಮಕ ಪರಿಣಾಮಗಳು ಬೀರುವ ಸಾಧ್ಯತೆಯಿದೆ ಎಂಬುದನ್ನು ಈಗ ತಿಳಿಯೋಣ.

ತ್ರಿಗ್ರಹ ಯೋಗ ಸೃಷ್ಟಿಯಾಗುವ ಸಮಯ ಮತ್ತು ದಿನಾಂಕ

ಫೆಬ್ರವರಿ 27ರಂದು ರಾತ್ರಿ 11:46ಕ್ಕೆ ಬುಧ ದೇವ ಮೀನ ರಾಶಿಗೆ ಸಾಗುತ್ತಾನೆ. ಮೇ 7 ರವರೆಗೆ ಈ ರಾಶಿಯಲ್ಲಿ ಬುಧ ಇರುತ್ತಾನೆ. ಮಾರ್ಚ್ 14ರಂದು ಸಂಜೆ 6:58ಕ್ಕೆ, ಸೂರ್ಯ ದೇದೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಏಪ್ರಿಲ್ 14ರಂದು ಬೆಳಿಗ್ಗೆ 03:30 ರವರೆಗೆ ಈ ರಾಶಿಯಲ್ಲಿ ಇರುತ್ತದೆ. ಜೊತೆಗೆ ಶನಿದೇವನು ಮಾರ್ಚ್ 29ರಂದು ರಾತ್ರಿ 11:01ಕ್ಕೆ ಮೀನ ರಾಶಿಗೆ ಸಾಗುತ್ತಾನೆ. ಹೀಗಾಗಿ ಮಾರ್ಚ್ 29ರಂದು ಸೂರ್ಯ, ಬುಧ ಮತ್ತು ಶನಿ ದೇವರು ಮೀನ ರಾಶಿಯಲ್ಲಿ ಒಟ್ಟಿಗೆ ಸಾಗುತ್ತಾರೆ. ಇದು ತ್ರಿಗ್ರಹ ಯೋಗವನ್ನು ಸೃಷ್ಟಿಸುತ್ತದೆ.

astrology trigraha yoga formed by sun mercury saturn 2025 danger for this zodiac sign

ವೃಷಭ ರಾಶಿ

ತ್ರಿಗ್ರಹ ಯೋಗ ವೃಷಭ ರಾಶಿಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಭವಿಷ್ಯಕ್ಕಾಗಿ ಮಾಡಿದ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ, ಇದರಿಂದಾಗಿ ಉದ್ಯಮಿಗಳು ಚಿಂತಿತರಾಗುತ್ತಾರೆ.

ಇತ್ತೀಚೆಗೆ ಕೆಲಸ ಸಿಕ್ಕ ಜನರು ತಮ್ಮ ಬಾಸ್ ಜೊತೆ ಜಗಳವಾಡಬಹುದು. ಅವರು ನಿಮ್ಮನ್ನು ನಿಮ್ಮ ಕೆಲಸದಿಂದ ತೆಗೆದುಹಾಕಬಹುದು. ವಿವಾಹಿತ ದಂಪತಿಗಳ ನಡುವೆ ತಪ್ಪು ತಿಳುವಳಿಕೆ ಹೆಚ್ಚಾಗುತ್ತದೆ.

astrology trigraha yoga formed by sun mercury saturn 2025 danger for this zodiac sign

ಕುಂಭ ರಾಶಿ

ವೃಷಭ ರಾಶಿಯ ಹೊರತಾಗಿ ಕುಂಭ ರಾಶಿಯ ಜನರು ಸಹ ತ್ರಿಗ್ರಹ ಯೋಗದ ಅಶುಭ ಪರಿಣಾಮದಿಂದ ಬಳಲುತ್ತಾರೆ. ಉದ್ಯಮಿಗಳ ಆರ್ಥಿಕ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಡಬಹುದು ಎಂಬ ಕಾರಣದಿಂದ ಅವರ ಚಿಂತೆ ಹೆಚ್ಚಾಗುತ್ತದೆ.

ಹಳೆಯ ಹೂಡಿಕೆಗಳಿಂದ ಅಂಗಡಿಯವರು ಲಾಭದ ಬದಲು ನಷ್ಟ ಅನುಭವಿಸಬಹುದು. ಉದ್ಯೋಗಿಗಳಿಗೆ ತಮ್ಮ ವೃತ್ತಿಜೀವನದಲ್ಲಿ ಬಡ್ತಿ ಅಥವಾ ಹೊಸ ಉದ್ಯೋಗಾವಕಾಶಗಳು ಸಿಗುವುದಿಲ್ಲ. ಇದರಿಂದಾಗಿ ಅವರು ಮುಂದಿನ ದಿನಗಳಲ್ಲಿ ಸ್ವಲ್ಪ ಚಿಂತಿತರಾಗುತ್ತಾರೆ.

astrology trigraha yoga formed by sun mercury saturn 2025 danger for this zodiac sign

ಮೀನ ರಾಶಿ

ತ್ರಿಗ್ರಹ ಯೋಗದಿಂದಾಗಿ ಮುಂದಿನ ದಿನಗಳಲ್ಲಿ ಮೀನ ರಾಶಿಯವರ ಒತ್ತಡ ಹೆಚ್ಚಾಗಬಹುದು. ವ್ಯವಹಾರದಲ್ಲಿ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಸಂಗಾತಿ ಮತ್ತು ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಮನೆಯ ಹಿರಿಯ ನಾಗರಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮೀನ ರಾಶಿಯ ಉದ್ಯೋಗಿಗಳ ಜಾತಕದಲ್ಲಿ ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಯಿಲ್ಲ.

ಹೀಗಾಗಿ ಈ ಸಮಯದಲ್ಲಿ ವಾದಗಳಿಂದ ದೂರವಿರಿ. ತಾಳ್ಮೆಯಿಂದ ಇರುವುದು ತುಂಬಾ ಮುಖ್ಯ. ಕುಟುಂಬಸ್ಥರೊಂದಿಗೆ ಮನಸ್ತಾಪ ಬೇಡ. ಯಾವುದೇ ಜಗಳ, ಹಿನ್ನಡೆ ಬಗ್ಗೆ ಯೋಚನೆ ಮಾಡುವುದು ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ಹೀಗಾಗಿ ಆರೋಗ್ಯದ ಬಗ್ಗೆ ಗಮನವಿರಲಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+