Pishach Yoga 2025: ಶನಿ-ರಾಹು ಸಂಯೋಗದಿಂದ ಪಿಶಾಚಿ ಯೋಗ: ಈ ರಾಶಿಗಳಿಗೆ ಅಪಾಯ ಫಿಕ್ಸ್!

ನವಗ್ರಹಗಳಲ್ಲಿ ಶನಿಯನ್ನು ಕರ್ಮದ ಫಲ ನೀಡುವ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ, ರಾಹು, ಕೇತು ಈ ಗ್ರಹಗಳ ಆಶೀರ್ವಾದ ಒಬ್ಬ ವ್ಯಕ್ತಿಯ ಮೇಲಿದ್ದರೆ ಆ ವ್ಯಕ್ತಿ ಕೆಟ್ಟದನ್ನು ಮಾಡಲು ಹಿಂಜರಿಯುತ್ತಾನೆ. ಒಂದು ವೇಳೆ ಜಾತಕದಲ್ಲಿ ಈ ಗ್ರಹಗಳ ಸ್ಥಾನ ಬಲವಾಗಿ ಇಲ್ಲದೇ ಇದ್ದರೆ ಅಂಥವರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಹೌದು... ಶನಿ ಮತ್ತು ರಾಹು ಈ ಎರಡೂ ಗ್ರಹಗಳ ಆಶೀರ್ವಾದ ಇದ್ದರೆ ಒಬ್ಬ ವ್ಯಕ್ತಿ ರಾತ್ರೋ ರಾತ್ರಿ ಖ್ಯಾತಿ, ಹೆಸರು, ಅಭಿವೃದ್ಧಿ ಹೊಂದಬಹುದು. ಆದರೆ ಅವುಗಳ ದುಷ್ಪರಿಣಾಮಗಳಿಂದ ಒಬ್ಬ ವ್ಯಕ್ತಿಯು ಬಡವನಾಗಿರುವ ಉದಾಹರಣೆಗಳು ಸಾಕಷ್ಟಿವೆ. ಅಲ್ಲದೆ ಈ ಗ್ರಹಗಳ ಕೆಟ್ಟ ದೃಷ್ಟಿಯಿಂದಾಗಿ ದೈಹಿಕ ಮತ್ತು ಮಾನಸಿಕ ಸ್ಥಿತಿ ಎರಡೂ ಹದಗೆಡಬಹುದು. ಕೆಲಸದಲ್ಲಿ ನಷ್ಟ ಮತ್ತು ಬುದ್ಧಿವಂತಿಕೆಯಲ್ಲಿ ದೌರ್ಬಲ್ಯ ಉಂಟಾಗುವ ಸಾಧ್ಯತೆ ಇದೆ. ರಾಹುವಿನ ಕೆಟ್ಟ ಪ್ರಭಾವ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.

Astrology shani-rahu conjunction 2025 create pishach yoga- these 3 zodiac signs are in danger

ಅಂದಹಾಗೆ ವೈದಿಕ ಜ್ಯೋತಿಷ್ಯದ ಪ್ರಕಾರ ರಾಹು ಮತ್ತು ಶನಿಯ ಸಂಯೋಜನೆಯು ಅತ್ಯಂತ ವಿನಾಶಕಾರಿಯಾದ ರಕ್ತಪಿಶಾಚಿ ಯೋಗವನ್ನು ಸೃಷ್ಟಿಸುತ್ತದೆ. ಇದು ಕೆಲ ರಾಶಿಯವರ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಯೋಗ 2025ರಲ್ಲಿ ರೂಪುಗೊಳ್ಳಲಿದೆ. ಶನಿ ಮತ್ತು ರಾಹುವಿನ ಸಂಯೋಗದಿಂದ 3 ರಾಶಿಗಳು ಕೆಟ್ಟ ಸಮಯವನ್ನು ಅನುಭವಿಸುತ್ತಾರೆ.

ಶನಿ ಸಂಕ್ರಮಣ 2025

2025ರಲ್ಲಿ ಫಲಿತಾಂಶಗಳನ್ನು ನೀಡುವ ಶನಿ ಗ್ರಹ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಶನಿಯು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಮಾರ್ಚ್ 29, 2025 ರಂದು ರಾತ್ರಿ 10:07ಕ್ಕೆ ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ರಕ್ತಪಿಶಾಚಿ ಯೋಗ ರೂಪುಗೊಳ್ಳುತ್ತದೆ. ಇಲ್ಲಿ ಶನಿ ಮತ್ತು ರಾಹುವಿನ ಸಂಯೋಗದಿಂದ ವಿನಾಶಕಾರಿ ಪಿಶಾಚಿ ಯೋಗ ರೂಪಗೊಳ್ಳುತ್ತದೆ. ಇದು ತುಂಬಾ ಕೆಟ್ಟ ಯೋಗವಾಗಿದೆ.

Astrology shani-rahu conjunction 2025 create pishach yoga- these 3 zodiac signs are in danger

ಕನ್ಯಾರಾಶಿ

ಕನ್ಯಾ ರಾಶಿಯವರಿಗೆ ಪಿಶಾಚಿ ಯೋಗ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಶನಿ ಮತ್ತು ರಾಹುವಿನ ಸಂಯೋಗದಿಂದ ಉಂಟಾಗುವ ಪಿಶಾಚಿ ಯೋಗ ಕನ್ಯಾ ರಾಶಿಯವರಿಗೆ ಪ್ರಯೋಜನಕಾರಿಯಾಗುವುದಿಲ್ಲ. ಆರ್ಥಿಕ ನಷ್ಟ ಮತ್ತು ಸಾಲ ಹೆಚ್ಚಾಗಬಹುದು. ಸಮಯ ವ್ಯರ್ಥ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಸಮಾಜದಲ್ಲಿ ಗೌರವ ಕಡಿಮೆಯಾಗಲಿದೆ. ನಿಮ್ಮ ಮೇಲೆ ಏನಾದರೂ ಆರೋಪವೂ ಬರಬಹುದು. ಹಣದ ಖರ್ಚು ಹೆಚ್ಚಾಗಲಿದ್ದು, ಸಂಗಾತಿ ನಡುವೆ ಮನಸ್ತಾಪಗಳು ಹೆಚ್ಚಾಗಬಹುದು.

Astrology shani-rahu conjunction 2025 create pishach yoga- these 3 zodiac signs are in danger

ಮಕರ ರಾಶಿ

ಮಕರ ರಾಶಿಯವರಿಗೆ ಪಿಶಾಚಿ ಯೋಗ ತುಂಬಾ ಸಮಸ್ಯೆಗಳನ್ನು ತಂದೊಡ್ಡಲಿದೆ. ಹೀಗಾಗಿ ವಿನಾಶಕಾರಿ ಪಿಶಾಚಿ ಯೋಗದ ವೇಲೆ ಜಾಗರೂಕರಾಗಿರುವುದು ತುಂಬಾ ಮುಖ್ಯ. ನಿಮ್ಮ ಕೆಲಸ ಪೂರ್ಣಗೊಳ್ಳುವ ಮೊದಲು ಹಾಳಾಗುತ್ತವೆ. ವ್ಯಾಪಾರ ಮತ್ತು ಪರಸ್ಪರ ಜಗಳಗಳಲ್ಲಿ ನಷ್ಟಗಳು ಹೆಚ್ಚಾಗುತ್ತವೆ. ಉದ್ಯೋಗಿಗಳಿಗೂ ಸಮಯ ಚೆನ್ನಾಗಿರುವುದಿಲ್ಲ. ಪ್ರಗತಿಯತ್ತ ಹೆಜ್ಜೆಗಳನ್ನು ಇಡಲು ಸಾಧ್ಯವಾಗುವುದಿಲ್ಲ. ಕಾಮಗಾರಿ ಪೂರ್ಣಗೊಳ್ಳದೇ ನಿಲ್ಲುತ್ತದೆ. ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತವೆ. ಜೀವನದಲ್ಲಿ ಪ್ರಕ್ಷುಬ್ಧತೆ ಇರುತ್ತದೆ.

Astrology shani-rahu conjunction 2025 create pishach yoga- these 3 zodiac signs are in danger

ಮೀನ ರಾಶಿ

ಮೀನ ರಾಶಿಯವರಿಗೆ ಶನಿ ಮತ್ತು ರಾಹುವಿನ ಸಂಯೋಗ ಪ್ರಯೋಜನಕಾರಿಯಾಗಿರುವುದಿಲ್ಲ. ಪ್ರತಿ ಹಂತದಲ್ಲೂ ನಿಮಗೆ ಸವಾಲುಗಳಿರುತ್ತವೆ. ವೈವಾಹಿಕ ಜೀವನದಲ್ಲಿ ತೊಂದರೆಗಳು ಮತ್ತು ಮನೆಯಲ್ಲಿ ಅಪಶ್ರುತಿ ಇರುತ್ತದೆ. ನಿಮ್ಮ ಮನಸ್ಸನ್ನು ಒತ್ತಡದಿಂದ ದೂರವಿಡುವುದು ಮತ್ತು ನಿಮ್ಮ ಕೆಲಸದಲ್ಲಿ ತಾಳ್ಮೆಯಿಂದಿರುವುದು ನಿಮಗೆ ಮುಖ್ಯವಾಗಿದೆ.

ಶನಿ ಮತ್ತು ರಾಹುವಿನ ಪರಿಹಾರಗಳು ನಿಮಗೆ ಪ್ರಯೋಜನಕಾರಿಯಾಗುತ್ತವೆ. ಈ ಸಮಯದಲ್ಲಿ ಪಾಲುದಾರಿಕೆಯಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಸಂಬಂಧಗಳು ಹದಗೆಡಬಹುದು. ಈ ವೇಲೆ ಆತ್ಮವಿಶ್ವಾಸ ದುರ್ಬಲವಾಗಬಹುದು. ಪಿಶಾಚಿ ಯೋಗದ ಸಮಯದಲ್ಲಿ ಜೀವನಶೈಲಿಯನ್ನು ಬದಲಾಯಿಸುವುದು ತುಂಬಾ ಮುಖ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+