Shani Margi 2024: ಕುಂಭದಲ್ಲಿ ಶನಿ ನೇರ- ಈ ರಾಶಿಯವರಿಗೆ ಪ್ರಮೋಷನ್, ಕೆಲಸದ ಒತ್ತಡಕ್ಕೆ ಬ್ರೇಕ್
ಗ್ರಹಗಳಲ್ಲಿ ಶನಿ ದೇವ ಕರ್ಮಗಳಿಗೆ ಫಲ ನೀಡುವ ದೇವರು ಎಂದು ಪರಿಗಣಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಗ್ರಹಗಳಲ್ಲಿ ಶನಿ ಒಂದಾಗಿದೆ. ಈ ಶನಿ ಕೆಲ ತಿಂಗಳ ಹಿಂದೆ ಅಂದರೆ ಜೂನ್ 2024 ರಲ್ಲಿ ಹಿಮ್ಮುಖ ಸಂಚಾರ ಮಾಡಲು ಆರಂಭಿಸಿತು. ಶನಿಯ ಈ ಹಿಮ್ಮುಖ ಸಂಚಾರ ಒಳ್ಳೆಯದಲ್ಲ, ಕೆಟ್ಟದ್ದು ಎಂದು ಪರಿಗಣಿಸಲಾಗಿದೆ.
ಮುಂದಿನ ದಿನಗಳಲ್ಲಿ ನ್ಯಾಯಾಧೀಶ ಶನಿಯು ನೇರವಾಗಿ ಚಲಿಸಲಿದ್ದಾನೆ. ಇದು ಕೆಲವು ರಾಶಿಗಳಿಗೆ ಉತ್ತಮವೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ 15 ರಂದು ಸಂಜೆ 7:15 ಕ್ಕೆ ಶನಿಯು ತನ್ನ ಮೂಲ ರಾಶಿಯಾದ ಕುಂಭದಲ್ಲಿ ನೇರವಾಗಿ ಚಲಿಸುತ್ತಾನೆ. ಶನಿಯ ಚಲನೆಯಲ್ಲಿನ ಬದಲಾವಣೆಯು 12 ರಾಶಿಗಳಲ್ಲಿ 3 ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಹಾಗಾದರೆ ವಿಶೇಷವಾಗಿ ಶನಿದೇವನಿಂದ ಆಶೀರ್ವಾದ ಪಡೆಯಲಿರುವ ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕ ರಾಶಿಯವರಿಗೆ ಶನಿ ನೇರವಾಗಿರುವುದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ತರುವುದು. ವ್ಯಾಪಾರದಲ್ಲಿ ಪ್ರಗತಿ ಮತ್ತು ಸಂಗಾತಿಯೊಂದಿಗೆ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಕರ್ಮ ಫಲವನ್ನು ಕೊಡುವ ಶನಿಯು ನಿಮಗೆ ವಿಶೇಷವಾಗಿ ದಯೆ ತೋರುತ್ತಾನೆ. ನವೆಂಬರ್ 15 ರಿಂದ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳ ಸಾಧ್ಯತೆಗಳಿವೆ. ಸಂಪತ್ತು ಹೆಚ್ಚಾಗಬಹುದು. ಕುಟುಂಬದೊಂದಿಗೆ ಸಂಬಂಧ ಸುಧಾರಿಸುತ್ತದೆ.
ಜೀವನದಲ್ಲಿ ಬಹುದೊಡ್ಡ ಸಾಧನೆಗೆ ಈ ಸಮಯದಲ್ಲಿ ನೀವು ಬುನಾದಿ ಹಾಕುವಿರಿ. ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಶನಿ ಆಶೀರ್ವಾದದಿಂದ ಮತ್ತೊಬ್ಬರಿಗೆ ಹಣ ಕೊಡುವಷ್ಟು ಬೆಳೆಯುತ್ತೀರಿ. ಮುಂದಿನ ದಿನದಲ್ಲಿ ಹಣದ ಕೊರತೆ ಇರುವುದಿಲ್ಲ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ನಿಮ್ಮ ಆಲೋಚನೆಗಳು ಉತ್ತಮವಾಗಿರುತ್ತವೆ. ಕಚೇರಿಯಲ್ಲಿ ನಿಮ್ಮ ಅದ್ಬುತ ಕಾರ್ಯಗಳನ್ನು ಗುರುತಿಸಲಾಗುತ್ತದೆ.

ಕನ್ಯಾರಾಶಿ
ಶನಿ ನೇರ ಸಂಚಾರ ಕನ್ಯಾ ರಾಶಿಯವರಿಗೆ ಬಲ ತಂದುಕೊಡಲಿದೆ. ಕೆಲಸದಲ್ಲಿ ಹೊಸ ಉತ್ಸಾಹ ಇರಲಿದೆ. ಇದರಿಂದಾಗಿ ಹೆಚ್ಚು ಲಾಭದ ದಾರಿಗಳು ತೆರೆದುಕೊಳ್ಳುತ್ತವೆ. ನಿಮ್ಮ ಆಲೋಚನಾ ಶಕ್ತಿ ಹೆಚ್ಚಾಗಲಿದೆ. ನಿಮಗಿರುವ ಸಹಾಯ ಮಾಡುವ ಗುಣ ನಿಮ್ಮನ್ನು ಸಮಾಜದಲ್ಲಿ ಗುರುತಿಸುತ್ತದೆ. ಶನಿ ದೇವನ ಕೃಪೆಯಿಂದ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಬೆಳೆಯುವಿರಿ. ಹೆಸರು ಕೂಡ ಮಾಡುವಿರಿ.
ಕನ್ಯಾ ರಾಶಿಯವರಿಗೆ ಹೂಡಿಕೆ ಲಾಭದಾಯಕವಾಗಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುವಿರಿ. ಶನಿದೇವನು ನಿಮ್ಮ ಮೇಲೆ ವಿಶೇಷ ಆಶೀರ್ವಾದವನ್ನು ಹೊಂದಿರಬಹುದು. ನಿಮ್ಮ ವೃತ್ತಿಜೀವನವನ್ನು ಸುಧಾರಿಸಲು ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಪರಸ್ಪರ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಶನಿಯ ವಿಶೇಷ ಆಶೀರ್ವಾದದಿಂದ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ.

ಕುಂಭ ರಾಶಿ
ಶನಿಯು ನೇರವಾಗಿರುವುದರಿಂದ ಕುಂಭ ರಾಶಿಯವರಿಗೆ ಅನುಕೂಲವಾಗುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಮನಸ್ಸಿನಲ್ಲಿ ಬರುವ ಕೆಟ್ಟ ಆಲೋಚನೆಗಳಿಂದ ನೀವು ಶೀಘ್ರದಲ್ಲೇ ಪರಿಹಾರವನ್ನು ಪಡೆಯುತ್ತೀರಿ. ನಿಮ್ಮ ಕೆಲಸಗಳು ನಿಮ್ಮ ಬೆಳವಣಿಗೆಗೆ ಸಹಾಯ ಮಾಡಲಿದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯುತ್ತದೆ. ಮನೆಯಲ್ಲಿ ಆಹ್ಲಾದಕರ ವಾತಾವರಣ ಹೆಚ್ಚಳಿದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ.
ಕೆಲಸದ ಒತ್ತಡ ಕಡಿಮೆ ಆಗಲಿದೆ. ತುಂಬಾ ವಿಷಯಗಳನ್ನು ಕಲಿಯುವಿರಿ. ಅವಿವಾಹಿತರಿಗೆ ಪ್ರೀತಿ ಅರಳಬಹುದು. ವಿವಾಹಿತರ ವೈವಾಹಿಕ ಜೀವನಕ್ಕೆ ಶನಿ ಆಶೀರ್ವಾದವಿದೆ. ಇದರಿಂದ ಸಂತೋಷದ ದಾಂಪತ್ಯ ನಡೆಸುವಿರಿ. ನಿಮ್ಮ ಸಂಬಂಧಿಕರ ನಡುವೆ ಇದ್ದ ಮನಸ್ತಾಪಗಳು ದೂರವಾಗುತ್ತವೆ. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸಲಿದೆ. ಆರೋಗ್ಯ ಭಾಗ್ಯವನ್ನೂ ಶನಿ ನಿಮಗೆ ಕರುಣಿಸಲಿದೆ.












Click it and Unblock the Notifications