Shadashtak Yoga 2025: ಬುಧ-ಗುರುವಿನಿಂದ ಷಡಷ್ಟಕ ಯೋಗ- ಈ ರಾಶಿಗಳಿಗೆ ಉದ್ಯೋಗದಲ್ಲಿ ಪ್ರಮೋಷನ್
ಗ್ರಹಗಳು ತಮ್ಮ ಸ್ಥಾನದಲ್ಲಿ ಬದಲಾವಣೆ ಮಾಡುವುದರೊಂದಿಗೆ ಶುಭ ಹಾಗೂ ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ವಾಕ್ ಮತ್ತು ವ್ಯವಹಾರದ ಅಧಿಪತಿ ಬುಧ, ಸಂಪತ್ತು ಮತ್ತು ಜ್ಞಾನದ ಅಧಿಪತಿ ಗುರು ಜನವರಿ 16 ಗುರುವಾರ ಸಂಜೆ 6:19 ಕ್ಕೆ ಷಡಾಷ್ಟಕ ಯೋಗವನ್ನು ರೂಪಿಸುತ್ತಿದ್ದಾರೆ. ಈ ಎರಡು ಗ್ರಹಗಳು ರಾಶಿಯಲ್ಲಿ ಸಾಗಿ 150 ಡಿಗ್ರಿ ದೂರದಲ್ಲಿ ಬಂದಾಗ ಷಡಾಷ್ಟಕ ಯೋಗ ರೂಪುಗೊಳ್ಳುತ್ತದೆ. ಈ ಎರಡು ಗ್ರಹಗಳು ಪರಸ್ಪರ 6ನೇ ಮತ್ತು 8ನೇ ಮನೆಯಲ್ಲಿದ್ದಾಗ ಷಡಾಷ್ಟಕ ಯೋಗ ಸೃಷ್ಟಿಯಾಗುತ್ತದೆ.
ಬುಧ-ಗುರು ಷಡಷ್ಟಕ ಯೋಗದ ಜ್ಯೋತಿಷ್ಯ ಮಹತ್ವ
ಬುಧ-ಗುರು ಗ್ರಹದಿಂದ ರೂಪಗೊಂಡ ಷಡಷ್ಟಕ ಯೋಗ ಕೆಲ ರಾಶಿಯವರ ಬುದ್ಧಿಶಕ್ತಿ, ಶಿಕ್ಷಣ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜ್ಯೋತಿಷ್ಯದಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಜನವರಿ 16ರಂದು ಬುಧ ಮತ್ತು ಗುರು ಗ್ರಹಗಳ ಸಂಯೋಜನೆಯಿಂದಾಗಿ ಕೆಲ ರಾಶಿಯವರ ಶಿಕ್ಷಣ ಮತ್ತು ಹಣದ ವಿಷಯಗಳು ಕಾಲ ಕಳೆದಂತೆ ಸುಧಾರಿಸುತ್ತವೆ.

ಬುಧ-ಗುರು ಷಡಷ್ಟಕ ಯೋಗದ ಪರಿಣಾಮ
ಬುಧ ಮತ್ತು ಗುರುವಿನಿಂದ ರೂಪಗೊಂಡ ಷಡಷ್ಟಕ ಯೋಗ ಪ್ರತಿಯೊಂದು ರಾಶಿಯ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಇದು 3 ರಾಶಿಗಳ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದಾಗಿ ಈ 3 ರಾಶಿಗಳ ಜನರು ತಮ್ಮ ಜೀವನದ ಪ್ರಮುಖ ಅಂಶಗಳಲ್ಲಿ ಅಂದರೆ ಶಿಕ್ಷಣ, ವೃತ್ತಿ, ಹಣ, ಸಂಬಂಧಗಳು ಮತ್ತು ಮಾನಸಿಕ ಬೆಳವಣಿಗೆಯಂತಹವುಗಳಲ್ಲಿ ಪ್ರಗತಿ ಸಾಧಿಸಲಿದ್ದಾರೆ.
ಜೊತೆಗೆ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಸರಿಯಾದ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡುವ ಮೂಲಕ ಈ ಯೋಗದ ಪ್ರಯೋಜನವನ್ನು ಪಡೆಯಬಹುದು. ಹಾಗಾದರೆ ಯಾವ 3 ರಾಶಿಗಳು ಈ ಯೋಗದ ಸಕಾರಾತ್ಮಕ ಪರಿಣಾಮಗಳನ್ನು ಪಡೆಯಲಿದ್ದಾರೆ ಎಂದು ಈಗ ತಿಳಿಯೋಣ.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧವಾಗಿದೆ. ಗುರುವಿನ ಆಶೀರ್ವಾದ ಈ ರಾಶಿಯವರ ಮೇಲೆ ಬೀಳುತ್ತದೆ. ಹೀಗಾಗಿ ಬುಧ-ಗುರು ಗ್ರಹದಿಂದ ರೂಪಗೊಂಡ ಷಡಷ್ಟಕ ಯೋಗ ಮಿಥುನ ರಾಶಿಯವರಿಗೆ ಸಾಕಷ್ಟು ಶುಭ ಫಲವನ್ನು ನೀಡಲಿದೆ. ಈ ರಾಶಿಯ ಜೀವನದಲ್ಲಿ ಷಡಾಷ್ಟಕ ಯೋಗ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ರಾಶಿಯ ಜನರು ಉನ್ನತ ಶಿಕ್ಷಣ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಈ ಯೋಗ ಬುದ್ಧಿ ಮತ್ತು ತಾರ್ಕಿಕ ಶಕ್ತಿಯನ್ನು ಮತ್ತಷ್ಟು ಚುರುಕುಗೊಳಿಸುತ್ತದೆ. ನಿಮ್ಮ ಸಂಶೋಧನೆ, ಬರವಣಿಗೆ ಮತ್ತು ಸಂವಹನ ಕೌಶಲ್ಯಗಳನ್ನು ನೀವು ಅಭಿವೃದ್ಧಿಪಡಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪಲು ನಿಮಗೆ ಅವಕಾಶಗಳು ಸಿಗುತ್ತವೆ.
ವ್ಯವಹಾರದಲ್ಲಿ ತೊಡಗಿರುವ ಜನರ ಹೊಸ ಒಪ್ಪಂದಗಳು ಲಾಭ ನೀಡುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವ ಸಾಧ್ಯತೆಗಳಿವೆ. ಹಣವನ್ನು ಉಳಿಸುವ ಅವಕಾಶಗಳು ಸಿಗುತ್ತವೆ. ಸಂವಹನ ಕೌಶಲ್ಯಗಳು ಹೆಚ್ಚಾಗುತ್ತವೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಬಂಧ ಸುಧಾರಿಸುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಕನ್ಯಾ ರಾಶಿಯ ಜನರಿಗೆ ಗುರುವಿನೊಂದಿಗಿನ ಈ ಸಂಯೋಜನೆಯು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಯೋಗದ ಪ್ರಭಾವದಿಂದಾಗಿ ಕನ್ಯಾ ರಾಶಿಯಲ್ಲಿ ಜನಿಸಿದ ಜನರು ಗಣಿತ, ವಿಜ್ಞಾನ ಮತ್ತು ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ವಿಶ್ಲೇಷಣಾತ್ಮಕ ಚಿಂತನೆ ಮತ್ತು ಯೋಜಿತ ರೀತಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ ಪ್ರಗತಿಗೆ ಕಾರಣವಾಗಬಹುದು.
ವ್ಯಾಪಾರ ಯೋಜನೆಗಳು ಮತ್ತು ಪಾಲುದಾರಿಕೆಗಳಲ್ಲಿ ಲಾಭ ಇರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಗಳಿವೆ. ಎಚ್ಚರಿಕೆಯಿಂದ ಮಾಡಿದ ಹೂಡಿಕೆಗಳಿಂದ ಕನ್ಯಾ ರಾಶಿಯವರು ಲಾಭ ಪಡೆಯುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರುವಾಗಿದೆ. ಹೀಗಾಗಿ ಗುರು ಮತ್ತು ಬುಧದಿಂದ ರೂಪಗೊಳ್ಳುವ ಷಡಾಷ್ಟಕ ಯೋಗ ಧನು ರಾಶಿಯ ಜನರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಗದ ಪ್ರಭಾವದಿಂದಾಗಿ ಈ ರಾಶಿಯ ಜನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶಗಳನ್ನು ಪಡೆಯಬಹುದು. ತತ್ವಶಾಸ್ತ್ರ, ಬೋಧನೆ ಮತ್ತು ಕಾನೂನು ಕ್ಷೇತ್ರಗಳಲ್ಲಿ ಯಶಸ್ಸಿನ ಸಾಧ್ಯತೆಯಿದೆ. ವೃತ್ತಿಜೀವನದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ ಮತ್ತು ನೀವು ಬಡ್ತಿಗೆ ಅವಕಾಶಗಳನ್ನು ಪಡೆಯಬಹುದು.
ಹಣದ ಹರಿವು ಉತ್ತಮವಾಗಿರುತ್ತದೆ. ಹಳೆಯ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳಲು ಪ್ರಾರಂಭವಾಗುತ್ತದೆ. ಹೂಡಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಈ ಯೋಗ ಕುಟುಂಬ ಸಂಬಂಧಗಳಲ್ಲಿ ಸ್ಥಿರತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಜನರು ನಿಮ್ಮ ಸಲಹೆಯನ್ನು ಗೌರವಿಸುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿಯನ್ನು ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications