Rahu Venus Conjunction 2025: ರಾಹು ಶುಕ್ರ ಸಂಯೋಗ- ಹೊಸ ವರ್ಷದಲ್ಲಿ ಈ ರಾಶಿಗೆ ಅಪಾರ ಸಂಪತ್ತು

ಗ್ರಹಗಳು ಸಂಚಾರದ ವೇಳೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗುತ್ತವೆ. ಈ ವೇಳೆ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸಂಚಾರ ಮಾಡಿದಾಗ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಈ ಯೋಗಗಳ ಪರಿಣಾಮ ಎಲ್ಲಾ ರಾಶಿಯವರ ಜೀವನದಲ್ಲಿ ಕಂಡು ಬರಲಿದೆ. ಅಂದಹಾಗೆ ನವಗ್ರಹಗಳಲ್ಲಿ ರಾಹು ಹಾಗೂ ಶುಕ್ರ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಈ ಎರಡೂ ಗ್ರಹಗಳು ಮೀನರಾಶಿಯಲ್ಲಿ ಒಟ್ಟಿಗೆ ಸಂಚಾರ ಮಾಡಲಿದೆ. ಹಾಗಾದರೆ ರಾಹು ಹಾಗೂ ಶುಕ್ರ ಗ್ರಹ ಮೀನ ರಾಶಿಯಲ್ಲಿ ಒಟ್ಟಿಗೆ ಸಂಚಾರ ಮಾಡುವ ದಿನಾಂಕ, ಸಮಯ ಹಾಗೂ ರಾಶಿಗಳ ಮೇಲೆ ಅದರ ಪ್ರಭಾವವನ್ನು ತಿಳಿಯೋಣ.

ಈ ಗ್ರಹಗಳ ಒಟ್ಟಿಗೆ ಸಂಚಾರದಿಂದ ಸಂಪತ್ತು, ಖ್ಯಾತಿ, ಪ್ರೀತಿ ಮತ್ತು ವೈವಾಹಿಕ ವಿಷಯಗಳಲ್ಲಿ ಯಶಸ್ಸನ್ನು ಕಂಡು ಬರಲಿದೆ. ಎರಡೂ ಗ್ರಹಗಳ ಸಂಯೋಗ 12 ರಾಶಿಗಳಲ್ಲಿ ಕೆಲವರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಇತರ ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

2025 ಜನವರಿ ಆರಂಭದಲ್ಲಿ ರಾಹು ಮೀನ ರಾಶಿಗೆ ಸಾಗಲಿದೆ. ಇದೇ ತಿಂಗಳ ಕೊನೆಯ ದಿನಗಳಲ್ಲಿ ಅಂದರೆ ಜನವರಿ 28ರಂದು ಬೆಳಗ್ಗೆ 7.12ಕ್ಕೆ ಶುಕ್ರ ಗ್ರಹ ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಸಂಪತ್ತು ಮತ್ತು ಸಮೃದ್ಧಿಯ ಗ್ರಹವಾದ ಶುಕ್ರನು ಗುರುವಿನ ರಾಶಿಯಾದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂಚಾರದಿಂದ 2025ರ ಆರಂಭಿಕ ತಿಂಗಳ ನಂತರ ಶುಭ ದಿನಗಳು ಪ್ರಾರಂಭವಾಗುವ ಅದೃಷ್ಟದ 5 ರಾಶಿಗಳು ಯಾವುವು ಎಂದು ಈಗ ತಿಳಿದುಕೊಳ್ಳೋಣ.

Astrology rahu and venus conjunction 2025- it will bring immense wealth to five zodiac signs

ವೃಷಭ ರಾಶಿ

ರಾಹು ಮತ್ತು ಶುಕ್ರರ ಸಂಯೋಜನೆ ವೃಷಭ ರಾಶಿಯವರಿಗೆ ಸಾಕಷ್ಟು ಮಂಗಳಕರವಾಗಿದೆ. ಕೆಲಸದಲ್ಲಿ ಯಶಸ್ಸು ಕಾಣುವ ಸಮಯ ಬರಲಿದೆ. ಸಮಾಜಸೇವೆಯಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದ್ದು ಪ್ರಶಂಸೆ ಪಡೆಯುವಿರಿ. ರಾಹು ಮತ್ತು ಶುಕ್ರರ ಸಂಕ್ರಮಣದಿಂದ 2025 ವೃಷಭ ರಾಶಿಯವರಿಗೆ ಹೊಸ ಅವಕಾಶಗಳನ್ನು ತಂದು ಕೊಡಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ಆರ್ಥಿಕ ಜೀವನ ಸುಧಾರಣೆ ಕಾಣಿಲಿದೆ. ಕುಟುಂಬದೊಂದಿಗೆ ಸಂಬಂಧ ಗಟ್ಟಿಯಾಗಲಿದ್ದು ಪರಸ್ಪರ ಪ್ರೀತಿ ಹೆಚ್ಚುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಲಿದೆ.

Astrology rahu and venus conjunction 2025- it will bring immense wealth to five zodiac signs

ಕಟಕ ರಾಶಿ

ರಾಹು ಮತ್ತು ಶುಕ್ರ ಸಂಕ್ರಮಣ ಸಮಯದಲ್ಲಿ ಕಟಕ ರಾಶಿಯವರಿಗೆ ಯಶಸ್ಸಿಗೆ ಹೊಸ ಅವಕಾಶಗಳಿವೆ. ನೀವು ಕೆಲಸದಲ್ಲಿ ಸಾಕಷ್ಟು ದುಡ್ಡು ಮಾಡುವಿರಿ. ಆದಾಯದಲ್ಲಿ ಹೆಚ್ಚಾಗಿ ಬ್ಯಾಂಖ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮ ಸಹಾಯ ಗುಣ ಇತರರಿಗೆ ಮೆಚ್ಚುಗೆ ಆಗಲಿದೆ. ಅವಿವಾಹಿತರಿಗೆ ಮದುವೆ ಯೋಗವೂ ಇದೆ. ಹೀಗೆ ಶುಕ್ರ ಮತ್ತು ರಾಹುವಿನ ಸಂಯೋಗವು ನಿಮಗೆ ಸಾಕಷ್ಟು ಅನುಕೂಲಕರವಾಗಿದೆ.

Astrology rahu and venus conjunction 2025- it will bring immense wealth to five zodiac signs

ಕನ್ಯಾರಾಶಿ

ಶುಕ್ರ ಮತ್ತು ರಾಹುವಿನ ಸಂಯೋಗ ಕನ್ಯಾ ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿರುತ್ತದೆ. ಆರ್ಥಿಕ ಸಂಕಷ್ಟಗಳು ನಿವಾರಣೆಯಾಗಲಿದೆ. ಕೋರ್ಟ್ ವಿವಾದಗಳು ದೂರವಾಗುತ್ತವೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಚುರುಕುತನ ಹಚ್ಚಾಗಲಿದೆ. ಪ್ರೇಮ ವಿವಾಹವಾಗುವ ಸಂಭವವಿದೆ. ನೀವು ಪ್ರೀತಿ ಮಾಡಬಹುದು. ಪರಸ್ಪರ ಒಪ್ಪಿಗೆಯೊಂದಿಗೆ ಹೊಸ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭ, ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಸಹ ಅವಕಾಶ ಸಿಗಲಿದೆ.

Astrology rahu and venus conjunction 2025- it will bring immense wealth to five zodiac signs

ತುಲಾ ರಾಶಿ

ತುಲಾ ರಾಶಿಯವರಿಗೆ ಹೊಸ ವರ್ಷ ಹೊಸದನ್ನು ತಂದುಕೊಡಲಿದೆ. ಶುಕ್ರನ ಸಂಚಾರದಿಂದ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳಾಗಲಿವೆ. ವೈವಾಹಿಕ ಜೀವನದಲ್ಲಿ ಸಂತೋಷ ಇಮ್ಮಡಿಗೊಳ್ಳಲಿದೆ. ಸಂಗಾತಿಯೊಂದಿಗೆ ಪರಸ್ಪರ ಪ್ರೀತಿ ಹೆಚ್ಚಾಗಲಿದೆ. ನಿಮ್ಮ ಜೀವನ ಮೊದಲಿಗಿಂತ ಹೆಚ್ಚು ರೋಮ್ಯಾಂಟಿಕ್ ಆಗಿರಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲು ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಒತ್ತಡದಿಂದ ಮುಕ್ತಿ ಸಿಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ ಇದಾಗಿದೆ.

Astrology rahu and venus conjunction 2025- it will bring immense wealth to five zodiac signs

ವೃಶ್ಚಿಕ ರಾಶಿ

ರಾಹು-ಶುಕ್ರ ಸಂಯೋಗ ವೃಶ್ಚಿಕ ರಾಶಿಯವರಿಗೆ ಫಲಕಾರಿಯಾಗಲಿದೆ. ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಕುಟುಂಬ ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ಅಪಾರ ಸಂಪತ್ತಿನ ಮಳೆಯಾಗುವ ಸಾಶ್ಯತೆ ಇದೆ. ಉದ್ಯೋಗಸ್ಥರಿಗೆ ಎರಡೂ ಗ್ರಹಗಳ ಸಂಯೋಗ ಬಡ್ತಿಯನ್ನು ತರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ತೋರುವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+