ಜ್ಯೋತಿಷ್ಯ: ಜೆಡಿಎಸ್, ಬಿಜೆಪಿಯ ಅಚ್ಚರಿ ಸಿಎಂ ಕ್ಯಾಂಡಿಡೇಟ್

Posted By: ಒನ್ಇಂಡಿಯಾ ಡೆಸ್ಕ್
Subscribe to Oneindia Kannada
   Karnataka Elections 2018 : ಸಿ ಎಂ ಸ್ಥಾನಕ್ಕೆ ಬಂತು ಅಚ್ಚರಿಯ ಹೆಸರು | ಜ್ಯೋತಿಷ್ಯ | Oneindia Kannada

   ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲ ಕಡೆಯೂ ಕಂಡುಬರುತ್ತಿದೆ. ಮೇ ಹನ್ನೆರಡು ಮತದಾನ, ಹದಿನೈದನೇ ತಾರೀಕು ಮತ ಎಣಿಕೆ ಎಂಬುದು ಈಗಾಗಲೇ ಗೊತ್ತಾಗಿದೆ. ಈ ದಿನಾಂಕ ಘೋಷಣೆಯಾದ ನಂತರ ಫಲಿತಾಂಶದ ಬಗ್ಗೆ ಸಂಖ್ಯಾಶಾಸ್ತ್ರಜ್ಞರು, ಜ್ಯೋತಿಷಿಗಳು, ಟಾರೋಟ್ ಕಾರ್ಡ್ ರೀಡರ್ ಗಳು ಭವಿಷ್ಯ ನುಡಿಯುತ್ತಿದ್ದಾರೆ.

   ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್

   ಇದೀಗ ಚುನಾವಣೆ ಫಲಿತಾಂಶದ ಬಗ್ಗೆ ಹೊಸದಾಗಿ ಭವಿಷ್ಯ ನುಡಿದಿದ್ದಾರೆ ಮುಂಬೈ ಮೂಲದ ಟಾರೋಟ್ ಕಾರ್ಡ್ ರೀಡರ್ ಪ್ರಕಾಶ್ ದಳವಿ. ಅವರಿಗೆ ಭಾರತದಾದ್ಯಂತ ಅಭಿಮಾನಿಗಳಿದ್ದು, ಕ್ರಿಕೆಟ್ ಬಗ್ಗೆ ಅವರು ನುಡಿದಿರುವ ಭವಿಷ್ಯಗಳು ಅತಿ ಹೆಚ್ಚು ಪ್ರಚಾರ ಪಡೆದಿವೆ. ಅದೇ ರೀತಿ ರಾಜಕೀಯ ಭವಿಷ್ಯಗಳನ್ನು ಸಹ ಅವರು ನುಡಿಯುತ್ತಾರೆ.

   ಜೆಡಿಎಸ್-ಬಿಜೆಪಿ ಮೈತ್ರಿ ಸಾಧ್ಯತೆ ನಿಚ್ಚಳ ಅಂತಾರೆ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್

   ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದ ಅವರು, ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರುತ್ತಾರೆ ಎಂದು ಲೋಕಸಭೆ ಚುನಾವಣೆಗೆ ಒಂದು ವರ್ಷದ ಮೊದಲೇ ಭವಿಷ್ಯ ನುಡಿದಿದ್ದರಂತೆ ಪ್ರಕಾಶ್ ದಳವಿ. ಅವರು ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

   ಟಾರೋಟ್ ಕಾರ್ಡ್ ಗಳು ಏನನ್ನು ಸೂಚಿಸುತ್ತವೆ

   ಟಾರೋಟ್ ಕಾರ್ಡ್ ಗಳು ಏನನ್ನು ಸೂಚಿಸುತ್ತವೆ

   ಟಾರೋಟ್ ಕಾರ್ಡ್ ಪ್ರಕಾರ ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗುವುದು ಸ್ಪಷ್ಟವಾಗಿದೆ. ಇನ್ನು ಯಡಿಯೂರಪ್ಪ ಅವರು ಮತ ಎಣಿಕೆ ದಿನದ ಬೆಳಗ್ಗೆ ಏನಾದರೂ ಹೇಳಬಹುದು. ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಸರಕಾರ ರಚಿಸುವಷ್ಟು ಪೂರ್ಣ ಪ್ರಮಾಣದ ಬಹುಮತ ಸಿಗುವುದಿಲ್ಲ. ಆದ್ದರಿಂದ ಮೈತ್ರಿ ಸರಕಾರ ರಚನೆಗೆ ಮುಂದಾಗುತ್ತಾರೆ. ಅದರಲ್ಲೂ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಆಗುವುದು ಗೋಚರಿಸುತ್ತಿದೆ.

   ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಸಾಧ್ಯತೆ

   ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಸಾಧ್ಯತೆ

   ಇನ್ನು ಜೆಡಿಎಸ್ ನ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಹೆಚ್ಚಿನ ಪಕ್ಷದಲ್ಲಿ ಕಾಣುತ್ತಿದೆ. ಕರ್ನಾಟಕದಲ್ಲಿ ಮುಂದೆ ರಚನೆ ಆಗುವ ಸರಕಾರದಲ್ಲಿ ಒಂದೋ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ. ಒಂದು ವೇಳೆ ಆ ಅವಕಾಶ ತಪ್ಪಿದಲ್ಲಿ ಕುಮಾರಸ್ವಾಮಿ ಅವರು ಯಾರನ್ನು ಸೂಚಿಸುತ್ತಾರೋ ಅವರೇ ಮುಖ್ಯಮಂತ್ರಿ ಆಗುತ್ತಾರೆ.

   ಕರ್ನಾಟಕ ಚುನಾವಣೆ: ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಭವಿಷ್ಯ

   ಎಚ್.ಡಿ.ರೇವಣ್ಣ ಅವರಿಗೆ ಅದೃಷ್ಟವಿದೆ

   ಎಚ್.ಡಿ.ರೇವಣ್ಣ ಅವರಿಗೆ ಅದೃಷ್ಟವಿದೆ

   ವಿಪರೀತವಾದ ರಾಜಕೀಯ ಬೆಳವಣಿಗೆಗಳು ಆಗಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗದ ಪಕ್ಷದಲ್ಲಿ ಜೆಡಿಎಸ್ ನಿಂದ ಮತ್ತೆ ಯಾರಿಗೆ ಗದ್ದುಗೆ ಏರುವ ಅವಕಾಶ ಇದೆ ಎಂದು ನೋಡಿದರೆ ಎಚ್.ಡಿ.ರೇವಣ್ಣ ಅವರಿಗೆ ಮುಖ್ಯಮಂತ್ರಿ ಆಗುವ ಯೋಗಗಳಿವೆ. ಅವರ ಪಾಲಿಗೆ ಅದೃಷ್ಟ ತೆರೆದುಕೊಳ್ಳಬಹುದು.

   ಬಿಜೆಪಿಯಿಂದ ಈಶ್ವರಪ್ಪ ಅವರಿಗೆ ಅದೃಷ್ಟದ ಬಾಗಿಲು

   ಬಿಜೆಪಿಯಿಂದ ಈಶ್ವರಪ್ಪ ಅವರಿಗೆ ಅದೃಷ್ಟದ ಬಾಗಿಲು

   ಬಿಜೆಪಿಯು ಯಡಿಯೂರಪ್ಪ ಅವರ ಬಲದಿಂದ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೂ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ಕಡಿಮೆ. ಇನ್ನು ಆ ಪಕ್ಷದಿಂದ ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ ಅವರ ಕಾರ್ಡ್ ಗಳನ್ನು ಗಮನಿಸಿದರೆ, ಈಶ್ವರಪ್ಪ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಮಿತ್ರ ಪಕ್ಷವು ಈಶ್ವರಪ್ಪ ಅವರು ಸಿಎಂ ಆಗಲು ಒಪ್ಪಿಗೆ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಪ್ರಕಾಶ್ ದಳವಿ ಮೊಬೈಲ್ ಫೋನ್ ಸಂಖ್ಯೆ 8369408344.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka assembly elections 2018: Prakasha Dalvi, astrologer from Mumbai predicted about Karnataka assembly elections. According to him JDS HD Kumaraswamy will be King (chief minister) or King maker or JDS HD Revanna or BJP KS Eshwarappa have more chances to become chief minister.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ