Navapancham Yoga 2025: ನವಪಂಚಮ ಯೋಗ- ಈ ರಾಶಿಗೆ ಕಡಿಮೆ ಶ್ರಮದಿಂದ ದೊಡ್ಡ ಯಶಸ್ಸು
ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಹಾಗೂ ಗುರುವಿಗೆ ವಿಶೇಷ ಸ್ಥಾನವಿದೆ. ಈ ಎರಡೂ ಗ್ರಹಗಳು ಫೆಬ್ರವರಿ 4ರಂದು ಶುಭ ಯೋಗವನ್ನು ಸೃಷ್ಟಿಸುತ್ತವೆ. ಫೆಬ್ರವರಿ 4ರಂದು ಬುಧ ಮತ್ತು ಗುರು ಮಧ್ಯಾಹ್ನ 3:19ಕ್ಕೆ ನವ ಪಂಚಮ ಯೋಗವನ್ನು ಸೃಷ್ಟಿಸುತ್ತಾರೆ. ನವಪಂಚಮ ಯೋಗ ಶುಭ ಯೋಗಗಳಲ್ಲಿ ಒಂದಾಗಿದ್ದು ಇದನ್ನು ವೈದಿಕ ಜ್ಯೋತಿಷ್ಯದಲ್ಲಿ ಬಹಳ ಶುಭ ಮತ್ತು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ.
ಬುಧ ಮತ್ತು ಗುರು ಪರಸ್ಪರ ಗರಿಷ್ಠ 120 ಡಿಗ್ರಿ ದೂರದಲ್ಲಿದ್ದಾಗ ಈ ಯೋಗ ರೂಪುಗೊಳ್ಳುತ್ತದೆ. ಯಾವುದೇ ಎರಡು ಗ್ರಹಗಳು ಒಂಬತ್ತನೇ (9 ನೇ) ಮತ್ತು ಐದನೇ (5 ನೇ) ಮನೆಯಲ್ಲಿ ಇದ್ದಾಗ ಈ ಶುಭ ಮತ್ತು ಶಕ್ತಿಯುತ ಯೋಗ ರೂಪುಗೊಳ್ಳುತ್ತದೆ. ಇವು ಅದೃಷ್ಟವನ್ನು ಹೆಚ್ಚಿಸುವ ಮನೆಗಳಾಗಿವೆ.
ನವಪಂಚಮ ಯೋಗದ ಮಹತ್ವ
ಬುಧ ಮತ್ತು ಗುರು ಎರಡೂ ಜ್ಞಾನ, ಬುದ್ಧಿಶಕ್ತಿ ಮತ್ತು ಅದೃಷ್ಟದ ಅಂಶಗಳಾಗಿವೆ. ಆದ್ದರಿಂದ ಈ ಯೋಗದ ಪರಿಣಾಮ ಸ್ಥಳೀಯರ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಈ ಯೋಗವು ವ್ಯಕ್ತಿಯ ಜೀವನದಲ್ಲಿ ಪ್ರಗತಿಯನ್ನು ತರುವುದಲ್ಲದೆ, ಅದೃಷ್ಟದ ಸಂಪೂರ್ಣ ಬೆಂಬಲವನ್ನು ಸಹ ನೀಡುತ್ತದೆ.
ಜ್ಯೋತಿಷಿಗಳ ಪ್ರಕಾರ ಈ ಯೋಗ ಜೀವನವನ್ನು ಸಮೃದ್ಧ ಮತ್ತು ಯಶಸ್ವಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಯೋಗದ ಸಮಯದಲ್ಲಿ ಒಬ್ಬ ವ್ಯಕ್ತಿಯು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಿದಾಗ ಬಹಳ ಕಡಿಮೆ ಪ್ರಯತ್ನದಿಂದ ದೊಡ್ಡ ಯಶಸ್ಸನ್ನು ಸಾಧಿಸಬಹುದು. ಹಾಗಾದರೆ ಈ ಸಮಯದಲ್ಲಿ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
ರಾಶಿಗಳ ಮೇಲೆ ನವಪಂಚಮ ಯೋಗದ ಪರಿಣಾಮ
ಬುಧ ಹಾಗೂ ಗುರು ಈ ಎರಡೂ ಗ್ರಹಗಳು ವೈದಿಕ ಜ್ಯೋತಿಷ್ಯದಲ್ಲಿ ಬಹಳ ಶುಭ ಗ್ರಹಗಳಾಗಿವೆ. ಈ ಸಂಯೋಜನೆಯಿಂದಾಗಿ ಒಬ್ಬ ವ್ಯಕ್ತಿಯು ಹಣ ಗಳಿಸುವ ಹೊಸ ಮೂಲಗಳನ್ನು ಪಡೆಯುತ್ತಾನೆ. ಇದರಿಂದಾಗಿ ಆ ವ್ಯಕ್ತಿಗೆ ಅದೃಷ್ಟದಿಂದ ಬಲವಾದ ಬೆಂಬಲ ಸಿಗುತ್ತದೆ. ಕಷ್ಟಕರ ಸಂದರ್ಭಗಳಲ್ಲಿಯೂ ಅವನು ಯಶಸ್ವಿಯಾಗುತ್ತಾನೆ. ಹಾಗಾದರೆ ಈ ಯೋಗದಿಂದ ಯಾರ ಅದೃಷ್ಟ ಬೆಳಗಲಿದೆ ಮತ್ತು ಯಾರು ಕಡಿಮೆ ಶ್ರಮದಿಂದ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ ಎಂಬುದನ್ನು ಈಗ ತಿಳಿಯೋಣ.

ಮೇಷ ರಾಶಿ
ಬುಧ-ಗುರುವಿನಿಂದ ಸೃಷ್ಟಿಯಾದ ನವಪಂಚಮ ಯೋಗ ಮೇಷ ರಾಶಿಯವರಿಗೆ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಉತ್ತಮ ಯಶಸ್ಸನ್ನು ನೀಡುವುದು. ಬಡ್ತಿ ಅಥವಾ ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ಹೂಡಿಕೆ ಮಾಡಲು ಇದು ಅನುಕೂಲಕರ ಸಮಯ. ಕಡಿಮೆ ಶ್ರಮದಿಂದ ಹೆಚ್ಚು ಲಾಭವನ್ನು ನೀವು ಪಡೆಯುವಿರಿ.

ಸಿಂಹ ರಾಶಿ
ಬುಧ-ಗುರುವಿನ ಈ ಸಂಯೋಜನೆಯು ಸಿಂಹ ರಾಶಿಯವರಿಗೆ ಸಮಾಜದಲ್ಲಿ ಆರ್ಥಿಕ ಸಮೃದ್ಧಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮ ಸಲಹೆಯನ್ನು ಗೌರವಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ಜನರಿಗೆ ಮೆಚ್ಚುಗೆ ಸಿಗುತ್ತದೆ. ಸಂಶೋಧನೆ, ಬರವಣಿಗೆ ಮತ್ತು ಕಲಾ ಕ್ಷೇತ್ರದಲ್ಲಿ ನೀವು ಹೊಸ ಎತ್ತರವನ್ನು ಮುಟ್ಟಬಹುದು. ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಮತ್ತು ದೀರ್ಘಾವಧಿಯ ಹೂಡಿಕೆಗಳಲ್ಲಿ ದೊಡ್ಡ ಲಾಭ ಸಿಗುವ ಸಾಧ್ಯತೆಯಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಯೋಗ ವೃತ್ತಿ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಸಿಗುತ್ತವೆ. ಅದು ಅವರ ವೃತ್ತಿಜೀವನಕ್ಕೆ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುವುದು. ಅಲ್ಲದೆ ಒತ್ತಡ ಕಡಿಮೆಯಾಗುವುದು. ಬುದ್ಧಿ ಶಕ್ತಿಯ ಮಟ್ಟ ಹೆಚ್ಚಾಗುತ್ತವೆ. ವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಶುಭ ಸಮಯವಾಗಿದೆ.

ಧನು ರಾಶಿ
ಈ ಸಂಯೋಜನೆಯು ಧನು ರಾಶಿಯ ಜನರ ಅದೃಷ್ಟವನ್ನು ಬಲಪಡಿಸುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಜೀವನದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅನುಕೂಲಕರ ಸಮಯ. ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ, ಉದ್ಯಮಿಗಳಿಗೆ ದೊಡ್ಡ ಆರ್ಡರ್‌ಗಳು ಸಿಗುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಪಾಲುದಾರಿಕೆಯು ಭಾರಿ ಲಾಭವನ್ನು ತರಲಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ಈ ಯೋಗ ವೃತ್ತಿ, ಸಂಪತ್ತು ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಆದಾಯ, ಆರ್ಥಿಕ ಸ್ಥಿತಿ ಮೊದಲಿಗಿಂತ ಬಲಗೊಳ್ಳುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುವುದು ಮತ್ತು ಹಳೆಯ ವಿವಾದಗಳು ಕೊನೆಗೊಳ್ಳುತ್ತವೆ. ವ್ಯವಹಾರದಲ್ಲಿ ವಿದೇಶಿ ಸಂಪರ್ಕಗಳಿಂದ ನಿಮಗೆ ಲಾಭವಾಗುತ್ತದೆ. ದೊಡ್ಡ ಹೂಡಿಕೆಗಳು ಲಾಭದಾಯಕವಾಗುತ್ತವೆ ಮತ್ತು ವೆಚ್ಚಗಳು ಕಡಿಮೆಯಾಗುತ್ತವೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುವುದು. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications