Mercury Rise 2025: ಮಹಾಶಿವರಾತ್ರಿಯಂದು ಬುಧ ಉದಯ: ಈ ರಾಶಿಯವರು ಅದೃಷ್ಟಶಾಲಿಗಳು
ಮಹಾಶಿವರಾತ್ರಿ 2025 ಫೆಬ್ರವರಿ 26ರಂದು ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯು ಶಿವನನ್ನು ಆರಾಧಿಸುವ ದಿನವಾಗಿದೆ. ಶಿವ ಮತ್ತು ಪಾರ್ವತಿ ದೇವಿ ಈ ದಿನ ವಿವಾಹವಾದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಈ ಶುಭ ದಿನದಂದು ಶಿವನನ್ನು ಆರಾಧಿಸಿದವರು ಶಿವ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಅಲ್ಲದೆ ಈ ಮಹಾ ಶಿವರಾತ್ರಿ ದಿನವನ್ನು ಜ್ಯೋತಿಷ್ಯದಲ್ಲಿ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನದಂದು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲ್ಪಟ್ಟ ಬುಧನು ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬರಲಿದೆ. ನಿರ್ದಿಷ್ಟವಾಗಿ ಕೆಲವು ರಾಶಿಗಳಿಗೆ ಬುಧ ಉದಯ ತುಂಬಾ ಉತ್ತಮವಾಗಿದೆ. ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.

ವೃಷಭ ರಾಶಿ
ಮಹಾ ಶಿವರಾತ್ರಿ ದಿನದಂದು ಬುಧ ಕುಂಭದಲ್ಲಿ ಉದಯಿಸುವುದು ವೃಷಭ ರಾಶಿಯವರಿಗೆ ಬಹಳ ಅದ್ಭುತವಾಗಿದೆ. ಶಿವನ ಆಶೀರ್ವಾದ ವೃಷಭ ರಾಶಿಯವರ ಮೇಲಿರಲಿದೆ. ಕುಟುಂಬದ ಸಮಸ್ಯೆಗಳು ಬಹುಬೇಗ ನಿವಾರಣೆಯಾಗುತ್ತವೆ. ಹಣದ ಸಮಸ್ಯೆಗಳು ಕೊನೆಗೊಳ್ಳುವುದು. ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಧನಲಾಭ, ಸಂಪತ್ತು ಹೆಚ್ಚಳವಾಗಲಿದೆ.

ಮಿಥುನ ರಾಶಿ
ಮಿಥುನಾ ರಾಶಿಯವರು ಬುಧ ಉದಯದ ವೇಳೆಗೆ ಅನೇಕ ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಲಿದ್ದಾರೆ. ನೀವು ಯಾವುದೇ ನಿರ್ಧಾರಗಳನ್ನೇ ತೆಗೆದುಕೊಂಡರು ಅದರಿಂದ ಉತ್ತಮ ಫಲ ಸಿಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತಾರೆ. ದೂರದ ಪ್ರಯಾಣಗಳನ್ನು ಮಾಡಲು ನಿಮಗೆ ಅವಕಾಶವಿದೆ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ.

ಸಿಂಹ ರಾಶಿ
ಮಹಾ ಶಿವರಾತ್ರಿ ದಿನದಂದು ಬುಧ ಉದಯ ಸಿಂಃ ರಾಶಿಯವರಿಗೆ ಶುಭ ದಿನವಾಗಿದೆ. ಸಿಂಹ ರಾಶಿಯವರ ಅದೃಷ್ಟ ಬದಲಾಗಲಿದೆ. ಶಿವನ ಆಶೀರ್ವಾದವನ್ನು ಪಡೆದು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಈ ರಾಶೀಯವರ ಅದೃಷ್ಟದ ಸೂರ್ಯನಂತೆ ಹೊಳೆಯಲಿದೆ. ದೀರ್ಘಕಾಲದವರೆಗೆ ಕುಟುಂಬದಲ್ಲಿದ್ದ ಸಮಸ್ಯೆಗಳು ದೂರವಾಗುತ್ತವೆ. ಅವಿವಾಹಿತ ಜನರು ತಮ್ಮ ಜೀವನ ಸಂಗಾತಿಯನ್ನು ಭೇಟಿಯಾಗುತ್ತಾರೆ. ವಿವಾಹಿತ ಜನರ ಜೀವನ ಸಂತೋಷವಾಗಿರುತ್ತದೆ.

ಕನ್ಯಾ ರಾಶಿ
ಕುಂಭ ರಾಶಿಯಲ್ಲಿ ಬುಧದ ಉದಯ ಕನ್ಯಾ ರಾಶಿಯವರಿಗೆ ಅದೃಷ್ಟ ತರಲಿದೆ. ಆಲೋಚನಾ ಸಾಮರ್ಥ್ಯ ಸುಧಾರಿಸಲಿದೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇರುಕಂಡುಬರುವುದು. ಉದ್ಯಮದಲ್ಲಿನ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಸುಧಾರಿಸುತ್ತದೆ. ದೀರ್ಘಾವಧಿಯ ಕಾನೂನು ವಿಷಯಗಳು ಕೊನೆಗೊಳ್ಳುತ್ತವೆ ಮತ್ತು ತೀರ್ಪುಗಳು ಸಕಾರಾತ್ಮಕವಾಗಿರುತ್ತವೆ. ಅನೇಕ ಪ್ರಮುಖ ಉದ್ಯೋಗಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಕುಂಭ ರಾಶಿ
ಮಹಾ ಶಿವರಾತ್ರಿ ದಿನದಂದು ಬುಧ ಉದಯವಾಗುವುದರಿಂದ ಈ ರಾಶಿಯವರು ಜೀವನದಲ್ಲಿ ವಿವಿಧ ಪ್ರಯೋಜನಗಳನ್ನು ಪಡೆಯುತ್ತಾರೆ. ಪ್ರೀತಿಯ ಜೀವನ ಸಂತೋಷವಾಗಿರುತ್ತದೆ. ಉದ್ಯಮದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಕುಟುಂಬದ ಅನೇಕ ಸಮಸ್ಯೆಗಳು ಮತ್ತು ಕುಟುಂಬ ಸದಸ್ಯರ ನಡುವಿನ ಸಂಬಂಧ ಸುಧಾರಿಸುತ್ತದೆ. ಪೋಷಕರೊಂದಿಗೆ ಉತ್ತಮ ಸಮಯ ಕಳೆಯಲು ನಿಮಗೆ ಅವಕಾಶ ಸಿಗಲಿದೆ.












Click it and Unblock the Notifications