Mercury Retrogrades 2024: ಬುಧ ಹಿಮ್ಮುಖದಿಂದಾಗಿ ಈ 3 ರಾಶಿಯವರ ಆರ್ಥಿಕ ಜೀವನದಲ್ಲಿ ಬಲ

ಗ್ರಹಗಳು ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತದೆ. ಕೆಲ ಗ್ರಹಗಳು ರಾಶಿಯನ್ನು ಬದಲಾಯಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆ ಅನುಕ್ರಮದಲ್ಲಿ ಬುಧ ಗ್ರಹವನ್ನು ಸೌರವ್ಯೂಹದ ಚಿಕ್ಕ ಮತ್ತು ಪ್ರಮುಖ ಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ಜಾತಕದಲ್ಲಿ ಬುಧನು ಬಲಶಾಲಿಯಾಗಿದ್ದರೆ ಅಂತವರು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ, ಸಂಪತ್ತನ್ನು ಪಡೆಯುತ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಅಂತಯೇ ಗ್ರಹಗಳ ರಾಜಕುಮಾರ ಎಮದು ಕರೆಯಲಾಗುವ ಬುಧವು ಬುದ್ಧಿವಂತಿಕೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದರೆ ಬುಧದ ಹಿಮ್ಮುಖ ಸಂಚಾರ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಕೆಲವೊಮ್ಮೆ ಇದು ಅದೃಷ್ಟವನ್ನು ತರುತ್ತದೆ.

ಜ್ಯೋತಿಷ್ಯದಲ್ಲಿ ಬುಧದ ಮಹತ್ವವೇನು?

ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ರಾಶಿ ಬದಲಾವಣೆ ವೇಳೆ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಬುಧ ಗ್ರಹ ಯಾರ ಜಾತಕದಲ್ಲಿ ಬಲವಾದ ಸ್ಥಾನದಲ್ಲಿರುತ್ತೋ ಅಂಥವರಿಗೆ ಉನ್ನತ ಜ್ಞಾನವನ್ನು ನೀಡುತ್ತದೆ. ಜೊತೆಗೆ ಅಂತವರು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಉದ್ಯಮಿಗಳು ತಮ್ಮ ಜ್ಞಾನದಿಂದ ಹೆಚ್ಚಿನ ಧನಲಾಭ ಗಳಿಸುತ್ತಾರೆ. ಜಾತಕದಲ್ಲಿ ಬುಧ ಬಲವಿರುವ ಜನರು ಬೆಟ್ಟಿಂಗ್ ಮತ್ತು ಇತರ ವ್ಯಾಪಾರ ಚಟುವಟಿಕೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಸಿಂಹದಲ್ಲಿ ಬುಧದ ಹಿಮ್ಮೆಟ್ಟುವಿಕೆ ದಿನಾಂಕ

ಬುಧವು ಕೆಲವೊಮ್ಮೆ ಹಿಮ್ಮುಖವಾಗಿ ಸಾಗುತ್ತದೆ. 19 ಜುಲೈ 2024 ರಿಂದ ಬುಧ ಗ್ರಹ ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. 5 ಆಗಸ್ಟ್ 2024ರಂದು ಬೆಳಿಗ್ಗೆ 09:44 ಕ್ಕೆ ಬುಧ ಗ್ರಹ ಸಿಂಹರಾಶಿಯಲ್ಲಿ ಹಿಮ್ಮುಖವಾಗಿ ಸಂಚಾರ ಮಾಡುತ್ತದೆ. ಬುಧ ಸಿಂಹದಲ್ಲಿ ಹಿಮ್ಮೆಟ್ಟುವುದರಿಂದ ಕೆಲವು ರಾಶಿಗಳಿಗೆ ಸಮಯವು ಅದ್ಭುತವಾಗಿರುತ್ತದೆ. ಆದ್ದರಿಂದ ಆಗಸ್ಟ್ 2024 ರ ಆರಂಭದಲ್ಲಿ ಬುಧ ಹಿಮ್ಮೆಟ್ಟುವಿಕೆಯಿಂದ ಲಾಭ ಪಡೆಯಲಿರುವ ರಾಶಿಗಳು ಯಾವವು ಎಂದು ಈಗ ತಿಳಿಯೋಣ.

Astrology mercury retrogrades in august lucky for these zodiac signs in kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಬುಧ ಹಿಮ್ಮೆಟ್ಟುವಿಕೆ ತುಂಬಾ ಅನುಕೂಲಕರವಾಗಿರುತ್ತದೆ. ಮಿಥುನ ರಾಶಿಯ ಮೂರನೇ ಮನೆಯಲ್ಲಿ ಬುಧ ಹಿಮ್ಮೆಟ್ಟುತ್ತದೆ. ಹೀಗಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೆಲವು ಕೆಲಸಗಳು ಯಶಸ್ವಿಯಾಗುತ್ತವೆ.

ಮಿಥುನ ರಾಶಿಯವರು ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸಕ್ಕೆ ಸಂಬಂಧಿಸಿದ ವಿವಿಧ ಪ್ರವಾಸಗಳನ್ನು ಕೈಗೊಳ್ಳಬಹುದು. ವ್ಯಾಪಾರದಲ್ಲಿರುವವರು ಧನಲಾಭ ಗಳಿಸಲಿದ್ದಾರೆ. ಈ ಅವಧಿಯಲ್ಲಿ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳಿಂದ ದೂರವಾಗುತ್ತಾರೆ.

Astrology mercury retrogrades in august lucky for these zodiac signs in kannada

ತುಲಾ ರಾಶಿ

ತುಲಾ ರಾಶಿಯರಿಗೆ ಬುಧದ ಹಿಮ್ಮುಖ ಚಲನೆಯು ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ತುಲಾ ರಾಶಿಯವರು ಜೀವನದ ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಧನಲಾಭ, ಮನೆಯಲ್ಲಿ ಶಾಂತಿ, ಸಂಪತ್ತು ಹೆಚ್ಚಳವನ್ನು ಅನುಭವಿಸಲಿದ್ದಾರೆ. ಅಲ್ಲದೆ ತುಲಾ ರಾಶಿಯವರು ಜೀವನದಲ್ಲಿ ವಿವಿಧ ಗುರಿಗಳನ್ನು ಸಾಧಿಸಲು ಅವಕಾಶಗಳನ್ನು ಪಡೆಯುತ್ತಾರೆ.

ತುಲಾ ರಾಶಿಯ ಆರ್ಥಿಕ ಪರಿಸ್ಥಿತಿಯು ಹೆಚ್ಚು ಸುಧಾರಿಸುತ್ತದೆ. ಹೀಗಾಗಿ ಆರ್ಥಿಕ ಜೀವನವನ್ನು ಬಲವಾಗಿರುತ್ತದೆ. ಈ ಸಮಯದಲ್ಲಿ ಹೂಡಿಕೆ ಮಾಡಬಹುದು. ಜೊತೆಗೆ ನಿಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸುವ ಸಾಧ್ಯತೆಯಿದೆ. ತುಲಾ ರಾಶಿಯವರ ಪ್ರೇಮ ಜೀವನ ಅದ್ಭುತವಾಗಿರುತ್ತದೆ.

Astrology mercury retrogrades in august lucky for these zodiac signs in kannada

ಧನು ರಾಶಿ

ಧನು ರಾಶಿಯ ಒಂಬತ್ತನೇ ಮನೆಯಲ್ಲಿ ಬುಧನು ಹಿಮ್ಮೆಟ್ಟುವುದರಿಂದ ಧನು ರಾಶಿಯವರಿಗೆ ಬುಧನು ಶುಭ ಲಾಭಗಳನ್ನು ನೀಡುತ್ತಾನೆ. ಅವರ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು. ಈ ಅವಧಿಯಲ್ಲಿ ಹೆಚ್ಚಿನ ಹಣವನ್ನು ಗಳಿಸಬಹುದು.

ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ವಿವಿಧ ಕಾರ್ಯಗಳನ್ನು ಪೂರ್ಣಗೊಳಿಸಲು ಅದೃಷ್ಟದ ಬೆಂಬಲವನ್ನು ಸಹ ಪಡೆಯುವಿರಿ. ಸ್ವಯಂ ಉದ್ಯೋಗಿಗಳು ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬಹುದು. ಈ ಕಾರಣದಿಂದಾಗಿ ಧನಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಸಂಗಾತಿಯೊಂದಿಗೆ ನೀವು ಸಂತೋಷದ ಸಮಯವನ್ನು ಕಳೆಯಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+