Budh-Rahu Conjunction 2025: ಬುಧ ರಾಹು ಸಂಯೋಗ- ಈ ರಾಶಿಯವರ ಜೀವನದ ತುಂಬೆಲ್ಲಾ ಸಂತೋಷ
ಗ್ರಹಗಳ ರಾಜಕುಮಾರ ಬುಧವನ್ನು ಬುದ್ಧಿ ಮತ್ತು ಮಾತಿನ ಗುರು ಎಂದು ಪರಿಗಣಿಸಲಾಗುತ್ತದೆ. ಮುಂಬರುವ ಫೆಬ್ರವರಿ 27ರಂದು ಬುಧ ಗ್ರಹ ಗುರು ರಾಶಿಯ ಮೀನ ರಾಶಿಗೆ ಪ್ರವೇಶಿಸಲಿದೆ. ಮೀನ ರಾಶಿಯನ್ನು ಪ್ರವೇಶಿಸುವ ಮೂಲಕ ಇಲ್ಲೇ ಈಗಾಗಲೇ ಇರುವ ಅಸ್ಪಷ್ಟ ಗ್ರಹವಾದ ರಾಹುವಿನೊಂದಿಗೆ ಸಂಯೋಗವನ್ನು ರೂಪಿಸುತ್ತದೆ. ಈ ಸಂಯೋಜನೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಬುಧ ಗ್ರಹವನ್ನು ಬುದ್ಧಿ, ವ್ಯವಹಾರ, ತಾರ್ಕಿಕತೆ ಮತ್ತು ಸಂವಹನದ ಅಂಶವೆಂದು ಪರಿಗಣಿಸಲಾಗುತ್ತದೆ. ರಾಹು ಅನಿರೀಕ್ಷಿತ ಲಾಭಗಳು ಕರ್ಮಗಳಿಗೆ ತಕ್ಕ ಫಲ ನೀಡುವ ಗ್ರಹವಾಗಿದೆ. ಇವೆರಡೂ ಒಟ್ಟಿಗೆ ಸೇರಿದಾಗ ಕೆಲವು ರಾಶಿಗಳ ಜನರಿಗೆ ಲಾಭದಾಯಕ ಅವಕಾಶಗಳು ಸಿಗಲಿವೆ. ಹಾಗಾದರೆ ರಾಹು ಮತ್ತು ಬುಧ ಗ್ರಹಗಳ ಸಂಯೋಗದಿಂದ ಯಾವ ರಾಶಿಗಳಿಗೆ ಶುಭ ದಿನಗಳು ಪ್ರಾರಂಭವಾಗುತ್ತವೆ ಎಂದು ಈಗ ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಮೀನ ರಾಶಿಯಲ್ಲಿ ರಾಹು ಮತ್ತು ಬುಧನ ಸಂಯೋಗ ಹಣಕಾಸಿನ ಆಸೆಗಳನ್ನು ಈಡೇರಿಸುತ್ತದೆ. ಇದರಿಂದಾಗಿ ವೃಷಭ ರಾಶಿಯ ಜನರು ವ್ಯವಹಾರದಲ್ಲಿ ಲಾಭವನ್ನು ಕಾಣುತ್ತಾರೆ. ಇದರೊಂದಿಗೆ ವೃಷಭ ರಾಶಿಯವರು ಹೂಡಿಕೆಯಿಂದಲೂ ಪ್ರಯೋಜನಗಳನ್ನು ಪಡೆಯುತ್ತಾರೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯ 9ನೇ ಮನೆಯಲ್ಲಿ ಬುಧ-ರಾಹು ಸಂಯೋಗ ರೂಪುಗೊಳ್ಳುತ್ತದೆ. 9ನೇ ಮನೆಯಲ್ಲಿನ ಸಂಯೋಗದಿಂದಾಗಿ ಕರ್ಕಾಟಕ ರಾಶಿಯ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಇದರೊಂದಿಗೆ ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳೂ ಇವೆ. ಈ ರಾಶಿಗಳ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ.

ತುಲಾ ರಾಶಿ
ತುಲಾ ರಾಶಿಯ ವಿಧ್ಯಾರ್ಥಿಗಳು ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನ್ಯಾಯಾಲಯದ ಪ್ರಕರಣವನ್ನು ಗೆಲ್ಲುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಆಸ್ತಿ ಅಂತಸ್ತು ಖರೀದಿಗೆ ಅವಕಾಶ ಸಿಗಲಿದೆ.

ವೃಶ್ಚಿಕ ರಾಶಿ
ಬುಧ-ರಾಹು ಸಂಯೋಜನೆಯು ವೃಶ್ಚಿಕ ರಾಶಿಯವರ 5 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಸಂಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೆ ಸಮಯ ಶುಭವಾಗಿರುತ್ತದೆ. ಬುಧ ದೇವನ ದೆಸೆಯಿಂದ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಪ್ರೀತಿಯ ಸಂಬಂಧಗಳು ಸಹ ಬಲಗೊಳ್ಳುತ್ತವೆ.

ಕುಂಭ ರಾಶಿ
ಕುಂಭ ರಾಶಿಯವರ ಎರಡನೇ ಮನೆಯಲ್ಲಿ ಬುಧ-ರಾಹು ಸಂಯೋಗ ಉಂಟಾಗುವುದರಿಂದ, ಈ ರಾಶಿಯವರು ಇದ್ದಕ್ಕಿದ್ದಂತೆ ಆರ್ಥಿಕ ಲಾಭವನ್ನು ಪಡೆಯಬಹುದು. ಇದರ ಜೊತೆಗೆ ಈ ರಾಶಿಗಳ ಜನರ ಮಾತಿನಿಂದ ಜನರು ಪ್ರಭಾವಿತರಾಗುತ್ತಾರೆ. ಈ ರಾಶಿಗಳ ಜನರು ಕೌಟುಂಬಿಕ ಸಂತೋಷವನ್ನು ಸಹ ಅನುಭವಿಸುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ನೀಡುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications