Mangala Asta 2025: ಮಂಗಳ ಅಸ್ತ- ಈ ರಾಶಿಗೆ ಬಯಸಿದ್ದೆಲ್ಲಾ ಕೈತಪ್ಪುತ್ತೆ
ಗ್ರಹಗಳು ಕಾಲ ಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಕೆಲವೊಮ್ಮೆ ಗ್ರಹಗಳು ಹಿಮ್ಮುಖವಾಗಿ, ನೇರವಾಗಿ ಹಾಗೂ ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡುತ್ತವೆ. ಇನ್ನೋ ಕೆಲವೊಮ್ಮೆ ಅವುಗಳು ರಾಶಿಯಲ್ಲಿ ಉದಯ ಮತ್ತು ಅಸ್ತವಾಗುತ್ತವೆ. ಇದರ ಪರಿಣಾಮ ಎಲ್ಲಾ ಹನ್ನೆರೆಡು ರಾಶಿಗಳ ಮೇಲೆ ಬೀಳಲಿದೆ.
ಅಂದಹಾಗೆ ಧೈರ್ಯ, ಶೌರ್ಯ, ಶಕ್ತಿ ಇತ್ಯಾದಿಗಳನ್ನು ನೀಡುವ ಮಂಗಳ ಗ್ರಹ ಒಂದು ನಿರ್ದಿಷ್ಟ ಅವಧಿಯ ನಂತರ ರಾಶಿಯನ್ನು ಬದಲಾಯಿಸುತ್ತದೆ. ಆಗಾಗ ಇದು ನಕ್ಷತ್ರಪುಂಜಗಳಲ್ಲಿ ಸಂಚಾರ ಮಾಡುತ್ತದೆ. ಕೆಲವೊಮ್ಮೆ ಇದು ಉದಯಿಸುವುದು ಹಾಗೂ ಅಸ್ತಮಿಸುವುದು. ಮಂಗಳ ಗ್ರಹದ ಈ ಸ್ಥಾನ ಬದಲಾವಣೆ ಎಲ್ಲಾ 12 ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಮಂಗಳ ಅಸ್ತ ಯಾವಾಗ ನಡೆಯಲಿದೆ?
ನವೆಂಬರ್ 1ರಂದು ಸಂಜೆ 6:36ಕ್ಕೆ ಮಂಗಳ ಗ್ರಹ ಮುಳುಗುತ್ತದೆ. 182 ದಿನಗಳವರೆಗೆ ಈ ಸ್ಥಿತಿಯಲ್ಲಿರುತ್ತದೆ. ಇದರಿಂದ ಮಂಗಳ ಗ್ರಹ ಅಸ್ತಮಿಸುವ ಮೊದಲು ಕೆಲ ರಾಶಿಗಳು ವಿಭಿನ್ನ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ನವೆಂಬರ್ 1ರ ಮೊದಲು ವಿವಿಧ ತೊಂದರೆಗಳನ್ನು ಎದುರಿಸುವ ಮೂರು ರಾಶಿಗಳ ಜಾತಕ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯ ಜನರಿಗೆ ಮಂಗಳ ಗ್ರಹದ ಅಸ್ತ ಫಲಪ್ರದವಾಗಿರುವುದಿಲ್ಲ. ವೃತ್ತಿಜೀವನ ಮುಂಬರುವ ಸಮಯ ಯುವಕರ ಹಿತಾಸಕ್ತಿಗನುಗುಣವಾಗಿ ಇರುವುದಿಲ್ಲ. ಇತ್ತೀಚೆಗೆ ಕೆಲಸ ಬದಲಾಯಿಸಿದ ಜನರು ತಮ್ಮ ಕೆಲಸದ ಬಗ್ಗೆ ಅಸಡ್ಡೆ ತೋರಿಸಬಾರದು.
ಹೀಗಾದಲ್ಲಿ ನಿಮ್ಮ ಬಾಸ್ ನಿಮ್ಮನ್ನು ಕೆಲಸದಿಂದ ವಜಾ ಮಾಡಬಹುದು. ಉದ್ಯಮಿಗಳು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ದಂಪತಿಗಳ ನಡುವೆ ಉದ್ವಿಗ್ನತೆ ಹೆಚ್ಚಾಗಲಿದೆ. ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹುದು.

ಕುಂಭ ರಾಶಿ
ಕುಂಭ ರಾಶಿಯವರ ಆರೋಗ್ಯದ ಮೇಲೆ ಮಂಗಳ ಗ್ರಹದ ಅಸ್ತ ಅಶುಭ ಪರಿಣಾಮ ಬೀರುತ್ತದೆ. ತಪ್ಪು ತಿಳುವಳಿಕೆಯಿಂದಾಗಿ ಬಾಸ್ ಜೊತೆ ಬಿರುಕು ಉಂಟಾಗಬಹುದು. ಇತ್ತೀಚೆಗೆ ಮದುವೆಯಾದವರ ಸಂಬಂಧ ನವೆಂಬರ್ ತಿಂಗಳ ಮೊದಲು ಮುರಿದು ಬೀಳಬಹುದು.
ಉದ್ಯಮಿಗಳು ನಷ್ಟ ಅನುಭವಿಸುವರು. ಇದರಿಂದಾಗಿ ಅವರು ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ನವೆಂಬರ್ ತಿಂಗಳವರೆಗೆ ನಿರುದ್ಯೋಗಿಗಳು ತೊಂದರೆಗೊಳಗಾಗುತ್ತಾರೆ. ಅತಿಯಾದ ಚಿಂತೆಯಿಂದಾಗಿ ಆರೋಗ್ಯವೂ ಹದಗೆಡಬಹುದು.

ಮೀನ ರಾಶಿ
ಮೀನ ರಾಶಿಯವರಿಗೆ ಮಂಗಳ ಗ್ರಹದ ಅಸ್ತಮ ಶುಭಕರವಾಗಿರುವುದಿಲ್ಲ. ಕೆಲಸದ ಸ್ಥಳದಲ್ಲಿನ ವಾತಾವರಣ ನಿಮಗೆ ಅನುಕೂಲಕರವಾಗಿರುವುದಿಲ್ಲ. ಬಾಸ್ ಮತ್ತು ಸಹೋದ್ಯೋಗಿಗಳೊಂದಿಗೆ ಘರ್ಷಣೆಗಳು ಉಂಟಾಗಬಹುದು. ದಂಪತಿಗಳ ನಡುವೆ ಜಗಳವಾಗಲಿದೆ. ಮನೆಯ ಖರ್ಚುಗಳಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ವಾದಗಳು ಉಂಟಾಗುತ್ತವೆ.
ಉದ್ಯಮಿಗಳು ಮತ್ತು ಕೆಲಸ ಮಾಡುವ ಜನರು ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಮೀನ ರಾಶಿಯವರಿಗೆ ಸ್ನೇಹಿತರೊಂದಿಗೆ ಹೊರಗೆ ಹೋಗಲು ಯೋಜನೆ ಹಾಕಿಕೊಳ್ಳುವುದು ಸರಿಯಲ್ಲ. ಪ್ರಯಾಣದ ಸಮಯದಲ್ಲಿ ಗಂಭೀರ ಗಾಯಗಳು ಸಂಭವಿಸಬಹುದು ಜಾಗರೂಕರಾಗಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications