Chandra Grahan 2024: ವರ್ಷದ 2ನೇ ಚಂದ್ರಗ್ರಹಣ: 12 ರಾಶಿಗಳ ಮೇಲೆ ಇದರ ಪರಿಣಾಮ ತಿಳಿಯಿರಿ

ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 18 ರಂದು ಸಂಭವಿಸುತ್ತದೆ. ಈ ಸೌರವ್ಯೂಹದ ವಿದ್ಯಮಾನ ಪಿತೃ ಪಕ್ಷದ ಆರಂಭದಲ್ಲಿ ಸಂಭವಿಸುವುದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದರ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.

ಈ ಗ್ರಹಣ ಭಾಗಶಃ ಚಂದ್ರಗ್ರಹಣವಾಗಿದ್ದರೂ, ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯದು ಮತ್ತು ಇತರರಿಗೆ ಕೆಟ್ಟ ಪರಿಣಾಮ ಬೀರಲಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಮತ್ತು ಈ ಎರಡನೇ ಚಂದ್ರಗ್ರಹಣವು ಯಾರಿಗೆ ಶುಭ ಫಲ ನೀಡಲಿದೆ ಎಂದು ಈಗ ತಿಳಿಯೋಣ.

astrology lunar eclipse on 18 september 2024 effects on 12 zodiac signs in kannada

ಮೇಷ ರಾಶಿ

ಮೇಷ ರಾಶಿಯವರು ವರ್ಷದ 2ನೇ ಚಂದ್ರಗ್ರಹಣ ಸಮಯದಲ್ಲಿ ಸಂಬಂಧಗಳಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಸಂದರ್ಭಕ್ಕನುಗುಣವಾಗಿ ಸಂಬಂಧದಲ್ಲಿ ದೊಡ್ಡ ಬಿರುಕು ಕೂಡ ಉಂಟಾಗಬಹುದು. ಹೀಗಾಗಿ ನಿಮ್ಮ ಮಾತುಗಳನ್ನು ಹಿಡಿದಿಟ್ಟುಕೊಳ್ಳಿ. ಪರಿಸ್ಥಿತಿಯು ಸಂಬಂಧವನ್ನು ಮುರಿದುಬಿಡಬಹುದು. ಈ ಸಂದರ್ಭದಲ್ಲಿ ತುಂಬಾ ಜಾಗರೂಕರಾಗಿರಲು ಸೂಚಿಸಲಾಗುತ್ತದೆ.

astrology lunar eclipse on 18 september 2024 effects on 12 zodiac signs in kannada

ವೃಷಭ ರಾಶಿ

ವೃಷಭ ರಾಶಿಯವರಿಗೆ ತುಂಬಾ ಒಳ್ಳೆಯ ಸಮಯ ಇದಾಗಿದೆ. ಬಹಳ ದಿನಗಳಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹಠಾತ್ ಹಣದ ಹರಿವು ಉಂಟಾಗಬಹುದು. ಪ್ರೀತಿಯ ಜೀವನ ಸುಧಾರಿಸುತ್ತದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.

astrology lunar eclipse on 18 september 2024 effects on 12 zodiac signs in kannada

ಮಿಥುನ ರಾಶಿ

ಈ ಚಂದ್ರಗ್ರಹಣ ಮಿಥುನ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ. ಇನ್ನೂ ಮದುವೆಯಾದವರ ದಾಂಪತ್ಯದಲ್ಲಿ ಎದುರಾದ ಅಡೆತಡೆಗಳು ದೂರವಾಗಿ ಒಳ್ಳೆಯ ಸಮಯ ಬರಲಿದೆ. ನೀವು ಪ್ರೀತಿಯಲ್ಲಿ ಬಿದ್ದರೆ, ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆದರೂ ಪ್ರೀತಿ ವಿಚಾರದಲ್ಲಿ ಹುಷಾರಾಗಿರಿ.

astrology lunar eclipse on 18 september 2024 effects on 12 zodiac signs in kannada

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ಚಂದ್ರಗ್ರಹಣ ವೃತ್ತಿಯಲ್ಲಿ ಬದಲಾವಣೆ ತರಬಹುದು. ಉದ್ಯೋಗಿಗಳು ತಮ್ಮ ಕೆಲಸವನ್ನು ತೊರೆಯಲು ನಿರ್ಧರಿಸಬಹುದು. ಅಂತಹ ನಿರ್ಧಾರವನ್ನು ಈ ಸಮಯದಲ್ಲಿ ತಪ್ಪಿಸಿ. ಇಲ್ಲದಿದ್ದರೆ ಈ ಚಂದ್ರಗ್ರಹಣ ಕರ್ಕಾಟಕ ರಾಶಿಯವರ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.

astrology lunar eclipse on 18 september 2024 effects on 12 zodiac signs in kannada

ಸಿಂಹ ರಾಶಿ

ವರ್ಷದ ಎರಡನೇ ಚಂದ್ರಗ್ರಹಣ ಸಿಂಹ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ಅವಧಿಯಲ್ಲಿ ಅಧಿಕ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕೆಲಸ ಮಾಡುವವರಿಗೆ ಈ ಗ್ರಹಣವು ಅವರ ವೃತ್ತಿಪರ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಬಡ್ತಿ ಸಿಗುವ ಸಾಧ್ಯತೆ ಇದೆ.

astrology lunar eclipse on 18 september 2024 effects on 12 zodiac signs in kannada

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ಚಂದ್ರಗ್ರಹಣದಿಂದ ಬಡ್ತಿ, ಸಂಬಳ ಹೆಚ್ಚಳ ಇತ್ಯಾದಿಗಳು ಸಿಗಬಹುದು. ಕುಟುಂಬ ಸದಸ್ಯರೊಂದಿಗೆ ಸಂಬಂಧಗಳು ಬಲಗೊಳ್ಳುತ್ತವೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ಈ ಅವಧಿಯಲ್ಲಿ ನೀವು ಅದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

astrology lunar eclipse on 18 september 2024 effects on 12 zodiac signs in kannada

ತುಲಾ ರಾಶಿ

ತುಲಾ ರಾಶಿಯವರಿಗೆ ಚಂದ್ರಗ್ರಹಣ ಸ್ವಲ್ಪ ಕೆಟ್ಟದಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಪ್ರಮುಖ ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ಶತ್ರುಗಳು ಕೆಲಸದಲ್ಲಿ ನಿಮಗೆ ತೊಂದರೆ ಕೊಡಬಹುದು. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ತಾಳ್ಮೆಯಿಮದ ಇರುವುದು ಅವಶ್ಯಕವಾಗಿದೆ.

astrology lunar eclipse on 18 september 2024 effects on 12 zodiac signs in kannada

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಚಂದ್ರಗ್ರಹಣ ತುಂಬಾ ಒಳ್ಳೆಯ ಸಮಯವಾಗಿದೆ. ವ್ಯವಹಾರ ಮತ್ತು ಪ್ರೀತಿಗೆ ಸಂಬಂಧಿಸಿದ ವಿಷಯಗಳು ಅದ್ಭುತವಾಗಿರುತ್ತವೆ. ಯಶಸ್ಸುಗಳು ಸಂಗ್ರಹಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಜೀವನ ಅಂದುಕೊಂಡಂತೆ ಬೆಳೆಯಲಿದೆ.

astrology lunar eclipse on 18 september 2024 effects on 12 zodiac signs in kannada

ಧನು ರಾಶಿ

ಧನು ರಾಶಿಯವರಿಗೆ ಚಂದ್ರಗ್ರಹಣ ಹಣಕಾಸಿನ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಲಿದೆ. ಈ ಅವಧಿಯಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ನೀವು ಹಣದ ಸಮಸ್ಯೆಗಳನ್ನು ಎದುರಿಸಬಹುದು. ಪ್ರಮುಖ ಕಾರ್ಯಗಳು ಅಪೂರ್ಣವಾಗಿ ಉಳಿಯುತ್ತವೆ. ಇದರಿಂದ ನೀವು ತಾಳ್ಮೆ ವಹಿಸುವುದು ಒಳ್ಳೆಯದು.

astrology lunar eclipse on 18 september 2024 effects on 12 zodiac signs in kannada

ಮಕರ ರಾಶಿ

ಮಕರ ರಾಶಿಯವರಿಗೆ ವರ್ಷದ ಎರಡನೇ ಚಂದ್ರಗ್ರಹಣ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೀವು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಈ ಸಮಯದಲ್ಲಿ ಜಾಗರೂಕರಾಗಿರಿ.

astrology lunar eclipse on 18 september 2024 effects on 12 zodiac signs in kannada

ಕುಂಭ ರಾಶಿ

ಕುಂಭ ರಾಶಿಯವರು ಚಂದ್ರಗ್ರಹಣದಿಂದಾಗಿ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ನೀವು ಹಣದ ಸಮಸ್ಯೆಯಿಂದ ಬಳಲಬಹುದು. ಹಣಕಾಸಿನ ಲಾಭವನ್ನು ಪಡೆಯಲು ನೀವು ಯಾವುದೇ ಕೆಲಸಗಳನ್ನು ಮಾಡಿದರೂ, ಅವೆಲ್ಲವೂ ಉತ್ತಮ ಯಶಸ್ಸನ್ನು ಪಡೆಯುತ್ತವೆ.

astrology lunar eclipse on 18 september 2024 effects on 12 zodiac signs in kannada

ಮೀನ ರಾಶಿ

ಮೀನ ರಾಶಿಯವರಿಗೆ ಚಂದ್ರಗ್ರಹಣ ತುಂಬಾ ಒಳ್ಳೆಯದಾಗಿದೆ. ಗ್ರಹಣದ ನಂತರ ಅವರು ಧನಲಾಭವನ್ನು ಪಡೆಯುತ್ತಾರೆ. ಬಹಳ ದಿನಗಳಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಮುಖ್ಯವಾಗಿ ನೀವು ಅಧಿಕ ಆರ್ಥಿಕ ಲಾಭವನ್ನು ಪಡೆಯುತ್ತೀರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+