Guru Vakri 2025: ಗುರು ಹಿಮ್ಮುಖ ಸಂಚಾರ- ಈ ರಾಶಿಯವರ ಜೇಬು ತುಂಬ ಹಣ, ಕೋಟ್ಯಾಧಿಪತಿ ಯೋಗ

ನವಗ್ರಹಗಳಲ್ಲಿ ಗುರುವಿಗೆ ಪ್ರಮುಖವಾದ ಸ್ಥಾನವಿದೆ. ಗುರು ಸಂಚಾರ ದ್ವಾದಶಿ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯ, ಚಂದ್ರ, ರಾಹು ಮತ್ತು ಕೇತುಗಳನ್ನು ಹೊರತುಪಡಿಸಿ, ಗುರು, ಬುಧ, ಶುಕ್ರ, ಮಂಗಳ ಮತ್ತು ಶನಿ ಒಂದು ನಿರ್ದಿಷ್ಟ ಸಮಯದಲ್ಲಿ ಹಿಮ್ಮುಖ ಮತ್ತು ನೇರವಾಗುತ್ತಲೇ ಇರುತ್ತವೆ.

2025 ರಲ್ಲಿ ಗ್ರಹಗಳು ಮತ್ತು ದೇವರುಗಳ ಗುರು ಎಂದು ಪರಿಗಣಿಸಲಾದ ಗುರು ಒಟ್ಟು 84 ದಿನಗಳವರೆಗೆ ಹಿಮ್ಮುಖ ಚಲನೆಯಲ್ಲಿ ಚಲಿಸುತ್ತದೆ. ಗುರು ಗ್ರಹವನ್ನು ಜ್ಞಾನ, ಧರ್ಮ, ಸಂಪತ್ತು, ಶಿಕ್ಷಣ, ಮದುವೆ, ಮಕ್ಕಳು ಮತ್ತು ಅದೃಷ್ಟದ ಅಂಶವೆಂದು ಪರಿಗಣಿಸಲಾಗುತ್ತದೆ. ಗುರುವಿನ ಹಿಮ್ಮುಖ ಚಲನೆಯು ರಾಶಿಹ್ನೆಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರಬಹುದು. ಆದರೆ ಕೆಲವರಿಗೆ ಇದು ಆತ್ಮಾವಲೋಕನ ಮತ್ತು ಸುಧಾರಣೆಗೆ ಅವಕಾಶವನ್ನು ತರುತ್ತದೆ.

ಗುರು ಎಷ್ಟು ಸಮಯ ಹಿಮ್ಮುಖವಾಗಿ ಇರುತ್ತಾನೆ?

ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾದ ಗುರು ಪ್ರಸ್ತುತ ವೃಷಭ ರಾಶಿಯಲ್ಲಿದೆ. ಗುರು ಹಿಮ್ಮುಖ ಸ್ಥಿತಿಯಲ್ಲಿ ಸಾಗುತ್ತಿದ್ದಾನೆ. ಗುರು 2024ರಲ್ಲಿ ಅಕ್ಟೋಬರ್ 9ರಂದು ಹಿಮ್ಮುಖವಾಯಿತು. ಇದು 119 ದಿನಗಳ ಕಾಲ ಹಿಮ್ಮುಖ ಸ್ಥಾನದಲ್ಲಿ ಚಲಿಸಿದ ನಂತರ 2025 ಫೆಬ್ರವರಿ 4ರಂದು ನೇರವಾಗಿ ಸಾಗುತ್ತದೆ.

ಗುರು ಗ್ರಹ ಮತ್ತೊಮ್ಮೆ 2025 ನವೆಂಬರ್ 11ರಂದು 120 ದಿನಗಳವರೆಗೆ ಹಿಮ್ಮುಖವಾಗಿರುತ್ತದೆ. 2024ನೇ ವರ್ಷದಲ್ಲಿ ಗುರುವಿನ ಹಿಮ್ಮುಖ ಸ್ಥಾನದ ದಿನಗಳನ್ನು ಎಣಿಸಲು, ಗುರುವು ಜನವರಿ 1ರಿಂದ ಫೆಬ್ರವರಿ 4ರವರೆಗೆ 35 ದಿನಗಳು ಮತ್ತು ನವೆಂಬರ್ 11 ರಿಂದ ಡಿಸೆಂಬರ್ 31, 2025ರವರೆಗೆ 49 ದಿನಗಳು, ಅಂದರೆ ಒಟ್ಟು 84 ದಿನಗಳು ಹಿಮ್ಮುಖ ಸ್ಥಾನದಲ್ಲಿರುತ್ತಾನೆ.

ಹಿಮ್ಮುಖ ಗುರು ಗ್ರಹ ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ

ಗುರುವಿನ ಹಿಮ್ಮುಖ ಸಂಚಾರದ ಪ್ರಭಾವ ಕೆಟ್ಟ ಸಮಯವನ್ನು ತರಬಹುದು, ಕೆಲ ರಾಶಿಯವರಿಗೆ ಉತ್ತಮ ಸಮಯವನ್ನೂ ತರಬಹುದು. ಈ ಶುಭ ಗ್ರಹ ಹಿಮ್ಮುಖವಾಗಿದ್ದಾಗ ಅದರ ಪರಿಣಾಮವನ್ನು ಸಾಮಾನ್ಯವಾಗಿ ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ. ಆದರೆ ಜ್ಯೋತಿಷಿಗಳ ಪ್ರಕಾರ ಇದು ಕೆಲವು ನಿರ್ದಿಷ್ಟ ಸನ್ನಿವೇಶಗಳು ಮತ್ತು ಕೆಲ ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಿಮ್ಮುಖ ಸ್ಥಿತಿಯಲ್ಲಿ ಗುರುವಿನ ಗುಣಗಳು ಬಲಗೊಳ್ಳುತ್ತವೆ ಮತ್ತು ಆಳವಾಗುತ್ತವೆ. 2025ರಲ್ಲಿ ಹಿಮ್ಮುಖ ಗುರು ಗ್ರಹ ಐದು ರಾಶಿಗಳ ಮೇಲೆ ಬಹಳ ಶುಭ ಪರಿಣಾಮವನ್ನು ಬೀರುತ್ತದೆ. ಹಾಗಾದರೆ ಆ ರಾಶಿಯವರು ಯಾರೆಂದು ಈಗ ತಿಳಿಯೋಣ.

astrology jupiter retrograde 2025- this zodiac signs get lot of money and will become millionaires

ವೃಷಭ ರಾಶಿ

ಗುರು ವಕ್ರ ಸ್ಥಿತಿಯು ವೃಷಭ ರಾಶಿಯವರಿಗೆ ಅತ್ಯಾದ್ಬುತವಾಗಿದೆ. ಈ ಸಮಯದಲ್ಲಿ ವೃಷಭ ರಾಶಿಯವರ ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳವಾಗಲಿದೆ. ಗುರುವಿನ ಹಿಮ್ಮುಖ ಚಲನೆಯು ವೃಷಭ ರಾಶಿಯ ಜನರಿಗೆ ಆರ್ಥಿಕ ಪ್ರಯೋಜನಗಳನ್ನು ನೀಡುವುದು. ಹೊಸ ಆಸ್ತಿಯನ್ನು ಪಡೆಯಲು ಅವಕಾಶ ಸಿಗುವ ಸಮಯ. ಇದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪ್ರಯೋಜನಗಳನ್ನು ನೀಡುವುದು. ವ್ಯವಹಾರ ಮತ್ತು ಹೂಡಿಕೆಯಲ್ಲಿ ಲಾಭ, ಸಂಬಂಧಗಳ ಸುಧಾರಣೆ, ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಬಲ ಹೆಚ್ಚಾಗಲಿದೆ.

astrology jupiter retrograde 2025- this zodiac signs get lot of money and will become millionaires

ಸಿಂಹ ರಾಶಿ

ಗುರು ಗ್ರಹದ ಹಿಮ್ಮುಖ ಚಲನೆ ಸಿಂಹ ರಾಶಿಯ ಜನರಿಗೆ ಉತ್ತಮ ಫಲಗಳನ್ನು ನೀಡಲಿದೆ. ಸಿಂಹ ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಯಶಸ್ಸಿನ ಸಮಯ ಇದು. ಉನ್ನತ ಹುದ್ದೆ ಪಡೆಯುವ ಸಾಧ್ಯತೆ ಇರುತ್ತದೆ. ಹಿಮ್ಮುಖ ಗುರು ಸಿಂಹ ರಾಶೀಯವರ ಆತ್ಮ ವಿಶ್ವಾಸವನ್ನು ಮತ್ತು ನಾಯಕತ್ವದ ಕೌಶಲ್ಯಗಳನ್ನು ಹೆಚ್ಚಿಸುತ್ತದೆ.

ಧಾರ್ಮಿಕ ಚಟುವಟಿಕೆಗಳು ಹೊಸ ದಿಕ್ಕನ್ನು ಪಡೆಯುತ್ತವೆ. ಆಧ್ಯಾತ್ಮಿಕತೆ ಮತ್ತು ಧರ್ಮದ ಕಡೆಗೆ ಒಲವು ಹೆಚ್ಚಾಗುತ್ತದೆ. ಇದು ಮಾನಸಿಕ ಶಾಂತಿಗೆ ಕಾರಣವಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷದ ಮಾರ್ಗಗಳು ಹೆಚ್ಚಾಗುತ್ತವೆ. ಮದುವೆಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ನೀವು ಪಡೆಯಬಹುದು. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.

astrology jupiter retrograde 2025- this zodiac signs get lot of money and will become millionaires

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಗುರುವಿನ ಹಿಮ್ಮುಖ ಚಲನೆಯು ಹಣದ ಹರಿವನ್ನು ಹೆಚ್ಚಿಸುತ್ತದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ಆದಾಯ ಹೆಚ್ಚಾದಂತೆ ಜೀವನಶೈಲಿಯೂ ಬದಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಅದು ಸುಧಾರಿಸುತ್ತದೆ.

ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಮಾನಸಿಕ ಶಾಂತಿ ಸಿಗಲಿದೆ. ಅಲ್ಲದೆ ವಿದೇಶ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ವಿದೇಶದಲ್ಲಿ ಶಿಕ್ಷಣ, ಕೆಲಸ ಅಥವಾ ವ್ಯವಹಾರಕ್ಕೆ ಉತ್ತಮ ಸಮಯ. ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ. ಕುಟುಂಬ ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ಗುರಿಗಳ ಮೇಲೆ ಗಮನವಿರಲಿ ಮತ್ತು ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ಬಿಡಬೇಡಿ.

astrology jupiter retrograde 2025- this zodiac signs get lot of money and will become millionaires

ಮಕರ ರಾಶಿ

ಮಕರ ರಾಶಿಯವರಿಗೆ ಹಿಮ್ಮುಖ ಗುರು ಗ್ರಹವು ವೃತ್ತಿ ಪ್ರಗತಿಯನ್ನು ನೀಡುತ್ತದೆ. ಬಡ್ತಿ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರ ಮತ್ತು ಹೂಡಿಕೆಯಲ್ಲಿ ಲಾಭ ಸಿಗುವ ಸಮಯ. ನೀವು ಹಣವನ್ನು ಉಳಿಸುವಿರಿ. ನಿಮ್ಮ ಸಮಯ ಮತ್ತು ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಧಾರ್ಮಿಕ ಪ್ರವಾಸಗಳಿಗೆ ತೆರಳುವಿರಿ.

astrology jupiter retrograde 2025- this zodiac signs get lot of money and will become millionaires

ಮೀನ ರಾಶಿ

ಮೀನ ರಾಶಿಯವರಿಗೆ ಹಿಮ್ಮುಖ ಸ್ಥಾನದಲ್ಲಿರುವ ಗುರು ಆಧ್ಯಾತ್ಮಿಕ ಪ್ರಗತಿ ಮತ್ತು ಆತ್ಮಸಾಕ್ಷಾತ್ಕಾರದ ಹಾದಿಯನ್ನು ತೆರೆಯುತ್ತದೆ. ನಿಮ್ಮ ಯೋಜನೆಗಳಿಗೆ ನಿರ್ದಿಷ್ಟ ಆಕಾರ ನೀಡಲು ಇದು ಸೂಕ್ತ ಸಮಯ. ಆರ್ಥಿಕ ಲಾಭ ಮತ್ತು ಎಲ್ಲೋ ಸಿಲುಕಿಕೊಂಡ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ.

ನಿಮ್ಮ ಯೋಜನೆಗಳನ್ನು ಗೌಪ್ಯವಾಗಿಡಿ ಮತ್ತು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಆರೋಗ್ಯ ಸುಧಾರಿಸಲಿದೆ. ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಟಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+