ಶ್ರೀಮಂತರಾಗಲು ಇಲ್ಲಿದೆ ಸರಳ ಸೂತ್ರಗಳು: ಹಣ ಆಕರ್ಷಿಸುವುದು ತುಂಬಾ ಸುಲಭ

ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಆದರೆ ಎಷ್ಟೇ ಪ್ರಯತ್ನಪಟ್ಟರು, ಎಷ್ಟೇ ಹಣ ಸಂಪಾದನೆ ಮಾಡಿದರೂ ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಇವತ್ತು ಕೈಗೆ ಬಂದ ಹಣ ನಾಳೆಗೆ ಇರುವುದಿಲ್ಲ. ಇದರಿಂದಾಗಿ ಸಾಕಪ್ಪ ಜೀವನ ಅಂತ ಅನಿಸಬಹುದು. ಆದರೆ ಹೀಗೆ ಜೀವನದಲ್ಲಿ ಜಿಗುಪ್ಸೆ ಪಡುವ ಮುನ್ನ ಈ ಸರಳ ಸೂತ್ರಗಳನ್ನು ಅನುಸರಿಸಿ. ಇದರಿಂದ ನೀವು ಶ್ರೀಮಂತರಾಗುವುದು ಖಚಿತಾ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ವೈಷ್ಣವಿ ಅವರು.

ಹೌದು ರಾಜೇಶ್ ರಿವೀಲ್ಸ್ ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ ಖ್ಯಾತ ಜ್ಯೋತಿಷಿ ವೈಷ್ಣವಿ ಅವರು ಹಣವನ್ನು ಆಕರ್ಷಿಸುವ ಸರಳ ಸೂತ್ರಗಳನ್ನು ಹಂಚಿಕೊಂಡಿದ್ದಾರೆ. ಇವುಗಳನ್ನು ಅನುಸರಿಸುವುದರಿಂದ ಸಾಕಷ್ಟು ಹಣ ಕೈಸೇರಲಿದೆಯಂತೆ. ಹಾಗಾದರೆ ಹಣವನ್ನು ಆಕರ್ಷಿಸುವುದು ಹೇಗೆ?

astrologer vaishnavi has given simple formulas to attract money

* ಶ್ರೀಮಂತರಂತೆ ಯೋಚನೆ ಮಾಡಿ

ನಾವು ಶ್ರೀಮಂತರಾಗಬೇಕು ಅಂತ ಯೋಚನೆ ಮಾಡುವ ಮುನ್ನ ನಾವು ಶ್ರೀಮಂತರಾಗಿ ಇರಬೇಕು. ಆಗ ಹಣ ಆಕರ್ಷಿತವಾಗುತ್ತದೆ. ಯಾರಿಗೇ ಹಣ ನೀಡಿದರೂ ಕೂಡ ಅದನ್ನು ಮನಸ್ಸಿನಿಂದ ಕೊಡಬೇಕು. ಒಂದು ರೂಪಾಯಿ ಕೊಟ್ಟರೂ ಕೂಡ ನಿಮ್ಮ ಮನಸ್ಸಿಂದ ನೀವು ಹಣ ನೀಡಿದರೆ ಅದು ಲಕ್ಷ ರೂಪಾಯಿ ಆಗಿ ನಿಮ್ಮ ಕೈ ಸೇರುತ್ತದೆ ಎಂದಿದ್ದಾರೆ ವೈಷ್ಣವಿ. ಉದಾ: ಆಟೋ ಚಾಲಕ ಚೇಂಜ್ ಇಲ್ಲ ಅಂದಾಗ ಮನಸ್ಸಿನಿಂದ ಹಣವನ್ನು ಕೊಡಬೇಕು. ಮನಸ್ಸಿನಲ್ಲಿ ಬೈದುಕೊಂಡು ಹಣ ಕೊಡುವುದು ಒಳ್ಳೆಯದಲ್ಲ.

* ಕಂಜೂಸುತನ ಮಾಡಬೇಡಿ

ಪ್ರಯಾಣ ಮಾಡುವಾಗ, ತರಕಾರಿ ಖರೀದಿ ಮಾಡುವಾಗ ತುಂಬಾ ಕಂಜೂಸುತನ ತೋರಬಾರದು. ಯಾಕೆಂದರೆ ಹತ್ತು ರೂಪಾಯಿ ಕೊಟ್ಟು ಅದರಿಂದ ಒಂದು ರೂಪಾಯಿ ವಾಪಸ್ ಬರುವುದಾದರೆ ಅಂತಹ ಹಣವನ್ನು ಮನಸ್ಸಿನಿಂದ ಒಳ್ಳೆಯದಾಗಲಿ ಎಂದು ಅಂದುಕೊಂಡು ಬಿಟ್ಟುಬಿಡಿ. ಅಯ್ಯೋ ಒಂದು ರೂಪಾಯಿ ಕೊಡಲಿಲ್ಲ. ನಾನು ಪಡೆದುಕೊಳ್ಳಲಿಲ್ಲ ಅಂತ ಬೇಸರ ಮಾಡಿಕೊಳ್ಳಬಾರದು. ಇಂತಹ ಗುಣ ಹಣವನ್ನು ಆಕರ್ಷಿಸುವುದಿಲ್ಲ.

astrologer vaishnavi has given simple formulas to attract money

* ಅಧಿಕ ಹಣ ಬರುತ್ತೆ

ಒಂದು ವಸ್ತುವಾಗಲು ಹಣವಾಗಲಿ ನೀಡಿದಾಗ ಅದು ದುಪ್ಪಟ್ಟಾಗುತ್ತದೆ ಅನ್ನೋ ನಂಬಿಕೆ ಇರಬೇಕು. ಆ ಮನೋಭಾವನೆಯಿಂದ ಹಣವನ್ನು ನೀಡಬೇಕು. ಒಂದು ರೂಪಾಯಿ ಎರಡು ರೂಪಾಯಿಗೆ ಹಣವನ್ನು ಹಿಂಸೆ ಮಾಡಿ ಪಡೆಯಬಾರದು. ಎಷ್ಟೋ ಜನ ಮಾಲ್‌ಗಳಿಗೆ ಹೋಗಿ ದುಪ್ಪಟ್ಟು ಹಣ ಕೊಟ್ಟು ಬಟ್ಟೆ ತರಕಾರಿ ಹಣ್ಣು ತೆಗೆದುಕೊಳ್ಳುತ್ತಾರೆ. ಆದರೆ ಮನೆ ಬಳಿ ಬಂದ ತರಕಾರಿಗೆ ಎರಡು ಮೂರು ರೂಪಾಯಿ ಕಡಿಮೆ ಮಾಡಲು ಕೇಳುತ್ತಾರೆ. ಈ ತಪ್ಪನ್ನು ಮಾಡಬಾರದು. ಇದನ್ನು ಮಾಡುವುದರಿಂದ ಹಣ ನಮ್ಮ ಬಳಿ ಉಳಿಯುವುದಿಲ್ಲ.

* ಕೊಟ್ಟಷ್ಟು ಹಣ ಹೆಚ್ಚು

ಹಣ ಕೊಟ್ಟಷ್ಟು ವಾಪಸ್ಸು ಬರುತ್ತದೆ ಅನ್ನೋದನ್ನು ನಂಬಬೇಕು. ಸೂರ್ಯನ ಬೆಳಕು ಕಡಿಮೆ ಆಗುವುದಿಲ್ಲ. ಮರಗಿಡಗಳು ಆಕ್ಸಿಜನ್ ಕೊಡುವುದನ್ನು ಕಡಿಮೆ ಮಾಡುವುದಿಲ್ಲ. ನಾವೂ ಕೂಡ ಈ ಪ್ರಕೃತಿಯ ಒಂದು ಭಾಗ. ನಾವು ಕೂಡ ಕೊಡಬೇಕು. ಕೊಡುವಾಗ ಒಳ್ಳೆಯ ಮನಸ್ಸಿನಿಂದ ಕೊಟ್ಟರೆ ಅದು ಮತ್ತಷ್ಟು ಜಾಸ್ತಿ ಆಗುತ್ತದೆ.

* ನಕರಾತ್ಮಕ ಚಿಂತನೆಯಿಂದ ದೂರ

ಯಾವಾಗಲೂ ನಕರಾತ್ಮಕ ಚಿಂತನೆಗಳಿಂದ ದೂರ ಇರಬೇಕು. ಯಾವುದೇ ಯೋಚನೆಗಳನ್ನು ಮಾಡಬೇಕು ಅಂದರೆ ಅಯ್ಯೋ ದುಡ್ಡು ಹೋಗುತ್ತೆ. ದುಡ್ಡು ಕಳೆದುಕೊಂಡು ಬಿಡುತ್ತೇನೆ. ದುಡ್ಡ ಹಾಳಾಗುತ್ತದೆ ಅನ್ನೋ ನಕರಾತ್ಮಕ ವಿಚಾರಗಳನ್ನು ಮಾಡಬಾರದು. ಯಾವಾಗಲೂ ಕೊಟ್ಟಿದ್ದು ವಾಪಸ್ ಬರುತ್ತದೆ ಅನ್ನೋ ಸಕರಾತ್ಮಕ ಚಿಂತನೆಗಳಿಂದ ಹಣ ನೀಡಬೇಕು. ಮೋಸ ಮಾಡ್ತಾರೆ ಅನ್ನೋದು ಇದ್ದರೆ ಹಣವನ್ನೇ ಕೊಡಬೇಡಿ. ಆದರೆ ಹಣ ಕೊಟ್ಟರೆ ನಂಬಿಕೆ ಇಟ್ಟು ಕೊಡಿ. ಅದು ಖಂಡಿತಾ ವಾಪಸ್ ಬರುತ್ತದೆ ಎಂದು ಖ್ಯಾತ ಜ್ಯೋತಿಷಿ ವೈಷ್ಣವಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+