ಅಶ್ವಿನ್ ಮಾಸದ ಪಂಚಾಂಗ : ಅಕ್ಟೋಬರ್ 25ರಿಂದ 31

ಅಶ್ವಿನ್ ಮಾಸದ ಅಕ್ಟೋಬರ್ 25ರಿಂದ 31ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Ashwin masa - Oct 25 to 31 : Rahu Kala, Gulika Kala, Yamaganda Kala

ಅ.25. ರವಿವಾರ : ಉತ್ತರಾಭಾದ್ರಪದ-ಪೂರ್ವಾಭಾದ್ರಪದ ನಕ್ಷತ್ರ. ಹೊಸದಾಗಿ ವಿದ್ಯಾರ್ಜನೆ ಮಾಡಲು ಮತ್ತು ವ್ಯವಸಾಯದ ಕೆಲಸಗಳಿಗೆ ಶುಭ. ಪ್ರದೋಷ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಅ.26. ಸೋಮವಾರ : ರೇವತಿ. ಹೊಸ ಬಟ್ಟೆ ಧರಿಸಲು ಶುಭ. ಷೇರು ವ್ಯವಹಾರ ಆರಂಭಿಸಲು ಸೂಕ್ತ. ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಅ.27. ಮಂಗಳವಾರ : ಅಶ್ವಿನಿ. ಸೀಗೆ ಹುಣ್ಣಿಮೆ. ವಾಲ್ಮೀಕಿ ಜಯಂತಿ. ಸರಕಾರಿ ರಜೆ. ಸರ್ವ ಕಾರ್ಯಕ್ಕೂ ಶುಭ. ದೂರ ಪ್ರಯಾಣದಿಂದ ತುಂಬಾ ಶುಭಕರ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಅ.28. ಬುಧವಾರ : ಭರಣಿ. ಕೃಷ್ಣ ಪಕ್ಷ ಆರಂಭ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಅ.29. ಗುರುವಾರ : ಕೃತ್ತಿಕಾ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಅ.30. ಶುಕ್ರವಾರ : ರೋಹಿಣಿ. ಸಂಕಷ್ಟಿ ಚತುರ್ಥಿ. ವಿಶ್ವ ಉಳಿತಾಯ ದಿನ. ಹೊಸ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲು ಶುಭ. ಹೊಸ ಮನೆಗೆ ಮುಂಬಾಗಿಲು ಹಚ್ಚಲು ಶುಭ. ಕಟ್ಟಡದ ತಾರಸಿ ಹಾಕಿಸಲು ಉತ್ತಮ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಅ.31. ಶನಿವಾರ : ಮೃಗಶಿರಾ. ರಾಷ್ಟ್ರ ಐಕ್ಯತೆಯ ದಿನ. ಗೃಹೋಪಯೋಗಿ ಮತ್ತು ವೈಯಕ್ತಿಕ ಉಪಯೋಗಕ್ಕಾಗಿ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸಲು ಸೂಕ್ತ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಮಂಗಳವಾರ, ಶುಕ್ರವಾರ, ಶನಿವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ. ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಂಗಳವಾರದವರೆಗೆ ಮಾತ್ರ ಮಾಡಿಕೊಳ್ಳಬಹುದು.

ಈ ವಾರದ ಗ್ರಹಗತಿ : ಸಿಂಹ: ಶುಕ್ರ+ಮಂಗಳ+ಗುರು. ಕನ್ಯಾ: ಬುಧ+ರಾಹು. ತುಲಾ: ಸೂರ್ಯ. ವೃಶ್ಚಿಕ: ನೀಚಶನಿ. ಮೀನ: ಕೇತು+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+