Ugadi Mesha Horoscope 2024: ಯುಗಾದಿ ಮೇಷ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಈ ವರ್ಷ ಯುಗಾದಿ ಹಬ್ಬವನ್ನು ಏಪ್ರಿಲ್ 9ರಂದು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಕ್ರೋಧಿ ಎಂಬ ಹೆಸರಿನ ವರ್ಷವು ಮಂಗಳವಾರ ಏಪ್ರಿಲ್ 9 ರಂದು ಪ್ರಾರಂಭವಾಗುತ್ತದೆ. ಹೀಗಾಗಿ 2024ನೇ ವರ್ಷ ಆಚರಿಸುವ ಯುಗಾದಿ ವಿಶೇಷವಾಗಿದೆ.

ವೈದಿಕ ಪಂಚಾಂಗದ ಪ್ರಕಾರ ಚೈತ್ರ ನವರಾತ್ರಿಯೂ ಇಂದಿನಿಂದ ಆರಂಭವಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯನ್ನು ಮಂಗಳ ಗ್ರಹ ಆಳುತ್ತದೆ. ಈ ಗ್ರಹದ ಪ್ರಭಾವದ ಅಡಿಯಲ್ಲಿ ಮೇಷ ರಾಶಿಯವರು ತುಂಬಾ ಧೈರ್ಯಶಾಲಿ ಮತ್ತು ಉತ್ಸಾಹಭರಿತರಾಗಿರುತ್ತಾರೆ.

ಇದಲ್ಲದೆ ಅವರು ಸುಂದರ, ಆಕರ್ಷಕವಾಗಿರುತ್ತಾರೆ. ಮೇಷ ರಾಶಿಯವರು ಯುಗಾದಿ ನಂತರ ಕೆಲ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ. ಆದರೆ ಎಷ್ಟೇ ಅಡೆತಡೆಗಳು ಬಂದರು ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಶಕ್ತಿಯನ್ನು ನೀವು ಪಡೆಯುತ್ತೀರಿ. ಹಾಗಾದರೆ ಈ ಯುಗಾದಿ ಹಬ್ಬ ಮೇಷ ರಾಶಿಯವರಿಗೆ ಆದಾಯ, ಆರೋಗ್ಯ, ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಫಲಾಫಲಗಳನ್ನು ನೀಡಲಿದೆ ಎಂಬ ಕುತೂಹಲಕಾರಿ ಸಂಗತಿಗಳನ್ನು ಈಗ ತಿಳಿಯೋಣ...

ಮೇಷ ರಾಶಿಯಲ್ಲಿ ಗ್ರಹಗಳ ಸಂಚಾರ..

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇಷ ರಾಶಿಯವರು ಕ್ರೋಧಿ ನಾಮ ವರ್ಷದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅದರಲ್ಲೂ ಉದ್ಯೋಗಿಗಳಿಗೆ ಉನ್ನತಿ ಸಿಗುತ್ತದೆ. ನಿರುದ್ಯೋಗಿಗಳು ಕೆಲಸದ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತಾರೆ. ಹೊಸ ವರ್ಷದಲ್ಲಿ ಏಪ್ರಿಲ್ ತಿಂಗಳಲ್ಲಿ ನಾಲ್ಕು ಪ್ರಮುಖ ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತವೆ. ಸೂರ್ಯ, ಮಂಗಳ, ಶುಕ್ರ ಮತ್ತು ಬುಧ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತವೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಗಳಿವೆ.

Aries Ugadi Horoscope 2024 in Kannada Mesha Rashi Ugadi Rashi Phala In Kannada

ಆರ್ಥಿಕ ಜೀವನ...

ಮೇಷ ರಾಶಿಯವರಿಗೆ ಕ್ರೋಧಿ ನಾಮ ವರ್ಷದಲ್ಲಿ ಆದಾಯಕ್ಕಿಂತ ಹೆಚ್ಚಿನ ಖರ್ಚು ಬರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಆಸ್ತಿ, ಚಿನ್ನ, ಷೇರುಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಜೀವನವು ಸಂತೋಷವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

Aries Ugadi Horoscope 2024 in Kannada Mesha Rashi Ugadi Rashi Phala In Kannada

ವೃತ್ತಿ ಜೀವನ....

ಈ ರಾಶಿಚಕ್ರ ಚಿಹ್ನೆಯ ಜನರು ಕ್ರೋಧಿ ನಾಮ ಸಂವತ್ಸರದ ಯುಗಾದಿ ನಂತರ ವೃತ್ತಿಜೀವನದ ವಿಷಯದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಿರಿಯರಿಂದ ಬೆಂಬಲ ದೊರೆಯುತ್ತದೆ. ಈ ಅವಧಿಯಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ನೀವು ಧೈರ್ಯದಿಂದ ಸವಾಲುಗಳನ್ನು ತೆಗೆದುಕೊಳ್ಳಬಹುದು. ಕೆಲವು ಹೊಸ ಪ್ರಯತ್ನಗಳನ್ನು ಮಾಡಬಹುದು. ರಾಹುವಿನ ಪ್ರಭಾವದಿಂದ ನಿಮ್ಮ ಇಷ್ಟಾರ್ಥಗಳು ಈಡೇರುವ ಸಾಧ್ಯತೆ ಇದೆ.

Aries Ugadi Horoscope 2024 in Kannada Mesha Rashi Ugadi Rashi Phala In Kannada

ಕೌಟುಂಬಿಕ ಜೀವನ....

ಕ್ರೋಧಿ ನಾಮ ಸಂವತ್ಸರದಲ್ಲಿ ಮೇಷ ರಾಶಿಯವರ ಕೌಟುಂಬಿಕ ಜೀವನ ಅನುಕೂಲಕರವಾಗಿರುತ್ತದೆ. ಏಪ್ರಿಲ್ ನಂತರ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಬಹುದು. ನೀವು ಸಹೋದರ ಸಹೋದರಿಯರಿಂದ ಕೆಲಸದಲ್ಲಿ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ಗುರುವಿನ ಪ್ರಭಾವ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಈ ಮೇಷ ರಾಶಿಯ 5ನೇ ಮನೆಯಲ್ಲಿ ಗುರು ಮತ್ತು ಶನಿ ಸಂಯೋಜನೆಯಿಂದಾಗಿ ನಿಮ್ಮ ಮಕ್ಕಳು ಪ್ರಗತಿ ಕಾಣುತ್ತಾರೆ. ಅವಿವಾಹಿತರು ಅಂದುಕೊಂಡ ಜೀವನ ಸಂಗಾತಿ ಹೊಂದುವ ಸಾಧ್ಯತೆಯಿದೆ.

Aries Ugadi Horoscope 2024 in Kannada Mesha Rashi Ugadi Rashi Phala In Kannada

ಶೈಕ್ಷಣಿಕ ಜೀವನ....

ಈ ರಾಶಿಚಕ್ರ ಚಿಹ್ನೆಯ ವಿದ್ಯಾರ್ಥಿಗಳು ತೆಲುಗು ಹೊಸ ವರ್ಷದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಯೋಜನೆಯ ಪ್ರಕಾರ ಕೆಲಸ ಮಾಡಿ ಯಶಸ್ಸು ಸಾಧಿಸಿ. ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರುವ ಸಾಧ್ಯತೆ ಇದೆ. ಮೇ 2024 ರಲ್ಲಿ ಗುರುವಿನ ಸಂಚಾರದಿಂದ ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

Aries Ugadi Horoscope 2024 in Kannada Mesha Rashi Ugadi Rashi Phala In Kannada

ಪ್ರೇಮ ಜೀವನ....

ಈ ರಾಶಿಚಕ್ರ ಚಿಹ್ನೆಯ ಜನರು ಯುಗಾದಿ ನಂತರ ತಮ್ಮ ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ನೀವು ಕೆಲವು ತಿಂಗಳುಗಳವರೆಗೆ ಈ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಯಾವುದೇ ಸಮಸ್ಯೆಗಳಿದ್ದರೆ ಜ್ಯೋತಿಷಿಯನ್ನು ಸಂಪರ್ಕಿಸುವುದು ಉತ್ತಮ. ಪ್ರೇಮಿಗಳು ಯುಗಾದಿ ಬಳಿಕ ತಮ್ಮ ಪ್ರೇಮ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸಬಹುದು. ಕುಟುಂಬ ಸದಸ್ಯರು ಇದರಿಂದ ಸಂತೋಷವಾಗಿರುತ್ತಾರೆ. ಅಂದುಕೊಂಡ ಜೀವನ ಸಂಗಾತಿಯನ್ನು ನೀವು ಪಡೆಯುತ್ತೀರಿ.

Aries Ugadi Horoscope 2024 in Kannada Mesha Rashi Ugadi Rashi Phala In Kannada

ಆಸ್ತಿ ಖರೀದಿ....

ಯುಗಾದಿ ಬಳಿ ಮೇಷ ರಾಶಿಯವರಿಗೆ ಅದ್ಬುತವಾಗಿದೆ. ಆಸ್ತಿ, ಮನೆ, ಜಮೀನು ಖರೀದಿಗೆ ಕಾಲ ಕೂಡಿ ಬರಲಿದೆ. ಯುಗಾದಿ ಬಳಿಕ ಚಿನ್ನ ಖರೀದಿ ಮಾಡಬಹುದು. ಕೆಲ ಆಸ್ತಿಗೆ ಸಂಬಂಧಿಸಿದ ಕೋರ್ಟ್ ವಿವಾದಗಳು ಬಗೆ ಹರಿಯುತ್ತವೆ. ನಿಮ್ಮ ಆಸ್ತಿಯಿಂದ ಉತ್ತಮ ಲಾಭವನ್ನು ನೀವು ಪಡೆಯುತ್ತೀರಿ. ಮನೆ ಖರೀದಿಗಾಗಿ ಸಾಲವನ್ನು ನೀವು ಮಾಡಬಹುದು. ಆದರೆ ಅದನ್ನು ಇದೇ ವರ್ಷ ತೀರಿಸುವ ವ್ಯವಸ್ಥೆ ಮಾಡಿಕೊಂಡು ಸಾಲ ಮಾಡುವುದು ಉತ್ತಮ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಹಣದ ಸಮಸ್ಯೆ ಎದುರಾಗುವುದಿಲ್ಲ.

Aries Ugadi Horoscope 2024 in Kannada Mesha Rashi Ugadi Rashi Phala In Kannada

ಆರೋಗ್ಯ ಜೀವನ....

ಈ ರಾಶಿಯ ಜನರು ಗುರುವಿನ ಪ್ರಭಾವದಿಂದ ಹೊಸ ವರ್ಷದಲ್ಲಿ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಒಳ್ಳೆಯ ವಿಚಾರಗಳಿರುತ್ತವೆ. ನೀವು ಮಾನಸಿಕವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಹವಾಮಾನದ ಬಗ್ಗೆ ಜಾಗರೂಕರಾಗಿರಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಾಹು ಮತ್ತು ಕೇತುಗಳ ಸಂಚಾರವು ನಿಮ್ಮ ಆರೋಗ್ಯದ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಜಾಗರೂಕರಾಗಿರಿ.

ಅನುಸರಿಸಬೇಕಾದ ಪರಿಹಾರಗಳು..

* ಆದಾಯ ಹೆಚ್ಚಲು ಮೇಷ ರಾಶಿಯವರು ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಬೇಕು.

* ಸೂರ್ಯನಿಗೆ ನಿತ್ಯ ಅರ್ಘ್ಯವನ್ನು ಅರ್ಪಿಸಬೇಕು.

* ಮಂಗಳವಾರ ಉಪವಾಸ ಮಾಡಿ ಹನುಮಾನ್ ಚಾಲೀಸಾ ಪಠಿಸಬೇಕು.

* ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಸುವಿಗೆ ಆಹಾರ ನೀಡಿ

* ದುರ್ಗಾ ದೇವಿಯನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+