Get Updates
Get notified of breaking news, exclusive insights, and must-see stories!

ಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯ

2019ನೇ ಇಸವಿ ನಿಮ್ಮ ಪಾಲಿಗೆ ಹೇಗಿರಲಿದೆ? ತಿಳಿದುಕೊಳ್ಳುವ ಕುತೂಹಲ ನಿಮಗೆ ಸಹಜವಾಗಿಯೇ ಇದೆ ಅಲ್ಲವಾ? ಹ್ಞಾಂ, ಒಂದ್ನಿಮಿಷ. ಈಗ ವರ್ಷ ಭವಿಷ್ಯವನ್ನು ತಿಳಿಸಲಾಗುತ್ತದೆ. ಅದು ಎಲ್ಲ ರಾಶಿಗಳದೂ ವರ್ಷ ಭವಿಷ್ಯ. ಆದರೆ ಪ್ರೀತಿ-ಪ್ರೇಮ, ಮದುವೆ ಸಂಬಂಧಗಳ ಬಗ್ಗೆ ಮಾತ್ರ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಪ್ರವೇಶ ಆಗಬಹುದಾ? ಪ್ರೇಮ ನಿವೇದನೆ ಮಾಡುವುದಕ್ಕೆ ಸೂಕ್ತ ಸಮಯ ಯಾವುದು? ಮದುವೆ ಆಗಬಹುದಾ? ಇತ್ಯಾದಿ ಪ್ರಶ್ನೆಗಳಿಗೆ ಈ ಜ್ಯೋತಿಷ್ಯ ಲೇಖನದಲ್ಲಿ ನಿಮಗೆ ಉತ್ತರ ಸಿಕ್ಕಲಿದೆ. ನಿಮ್ಮದು ಯಾವ ರಾಶಿ ಎಂದು ಗೊತ್ತಿದ್ದರೆ ಸಾಕು. ಆ ಮೂಲಕ ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಬಹಳ ಜನ ಮಾಡುವ ತಪ್ಪೇನು ಅಂದರೆ ಸೂಕ್ತ ಸಮಯ ಯಾವುದು ಹಾಗೂ ಯಾವ ಕಾಲ, ಯಾವ ಕೆಲಸಕ್ಕೆ ಸೂಕ್ತ ಎಂಬ ಬಗ್ಗೆ ಸಣ್ಣ ಸಲಹೆ-ಮಾರ್ಗದರ್ಶನ ಕೂಡ ಪಡೆಯುವುದಿಲ್ಲ. ಆದರೆ ಇನ್ನು ಮುಂದೆ ಹಾಗೆ ಮಾಡಿಕೊಳ್ಳಬೇಡಿ. ಇಲ್ಲಿರುವ ಜ್ಯೋತಿಷ್ಯ ಲೇಖನ ನಿಮ್ಮ ಪಾಲಿಗೆ ಮಾರ್ಗದರ್ಶಕನಂತೆ ಕೆಲಸ ಮಾಡುತ್ತದೆ. ಇದನ್ನು ನಂಬುವುದು ನಿಮಗೆ ಬಿಟ್ಟ ವಿಚಾರ.

ಮೇಷ: ಒಂಟಿಯಾಗಿರುವವರಿಗೆ ಸಂಗಾತಿ ಸಿಗುವ ಕಾಲ

ಮೇಷ: ಒಂಟಿಯಾಗಿರುವವರಿಗೆ ಸಂಗಾತಿ ಸಿಗುವ ಕಾಲ

ನೀವಿನ್ನೂ ಒಂಟಿಯಾಗಿಯೇ ಇದ್ದರೆ ಸೂಕ್ತ ಸಂಗಾತಿಗೆ ಮನ ಸೋಲುತ್ತೀರಿ. ಈಗಾಗಲೇ ಪ್ರೀತಿ-ಪ್ರೇಮದಲ್ಲಿ ಇರುವವರಿಗೆ ಪ್ರೇಮ ಜೀವನದಲ್ಲಿ ಭಾರೀ ಬದಲಾವಣೆ ಕಾಣಲಿದೆ. ಇನ್ನು ಮದುವೆಗೆ ಎದುರು ನೋಡುತ್ತಿರುವ ಜೋಡಿಗಳಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸೂಕ್ತ ಸಮಯ ದೊರೆಯಲಿದೆ.

ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳು ಇದ್ದರೆ ಅವು ದೂರ ಆಗಲಿವೆ. ತುಂಬ ಸೊಗಸಾದ ಹಾಗೂ ಒತ್ತಡ ಇಲ್ಲದ ರೀತಿಯಲ್ಲಿ ಸಂಬಂಧ ಮುಂದಕ್ಕೆ ಸಾಗುತ್ತದೆ. ಯಾವುದೇ ಜಗಳ, ಆರೋಪ ಮಾಡದ, ಸಭ್ಯ- ಸುಂಸ್ಕೃತ, ದೀರ್ಘಕಾಲದ ಸಂಗಾತಿ ನಿಮ್ಮ ಪಾಲಿಗೆ ಸಿಗಲಿದ್ದಾರೆ. ತುಂಬ ಕಡಿಮೆ ಸಮಯದಲ್ಲೇ ಈ ಸಂಬಂಧ ಬಹಳ ಗಟ್ಟಿ ಆಗುತ್ತದೆ.

ವೃಷಭ: ನೀವಾಗಿಯೇ ಸಮಸ್ಯೆಗಳನ್ನು ಎಳೆದುಕೊಳ್ಳುತ್ತೀರಿ

ವೃಷಭ: ನೀವಾಗಿಯೇ ಸಮಸ್ಯೆಗಳನ್ನು ಎಳೆದುಕೊಳ್ಳುತ್ತೀರಿ

ಉತ್ಕಟವಾಗಿ ಪ್ರೀತಿ ಹೇಳಿಕೊಳ್ಳುತ್ತೀರಿ, ತೋರಿಸಿಕೊಳ್ಳುತ್ತೀರಿ. ಆದರೆ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ಬಹಳ ಡಿಮ್ಯಾಂಡಿಂಗ್ ಆಗಿರಬೇಡಿ. ಹಾಗೆ ಮಾಡಿದರೆ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ. ನಿಮ್ಮ ಸಂಗಾತಿ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಒಂದಿಷ್ಟು ಗಮನ ಇರಲಿ.

ಪ್ರೀತಿ, ಪ್ರೇಮ- ಸಂಬಂಧಗಳಲ್ಲಿ ವರ್ಷದ ಮೊದಲ ಆರು ತಿಂಗಳಲ್ಲಿ ಅನುಮಾನ- ಗೊಂದಲಗಳು ಸೃಷ್ಟಿ ಆಗುತ್ತವೆ. ಆದರೆ ಅದು ಕ್ರಮೇಣ ಬಗೆಹರಿಯುತ್ತದೆ. ನಿಮಗಿರುವ ಸಕಾರಾತ್ಮಕ ಧೋರಣೆಯನ್ನು ಕಾಯ್ದಿಟ್ಟುಕೊಳ್ಳಿ. ಆ ಮೂಲಕ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಪ್ರಾಯಶ್ಚಿತ್ತ ಮಾಡಿಕೊಂಡೆ ಅನ್ನುವುದಕ್ಕಿಂತ ತಪ್ಪು ಮಾಡದಂತೆ ಇರಿ.

ಮಿಥುನ: ಸಂಬಂಧ ಗಟ್ಟಿ ಆಗುವುದಕ್ಕೆ ಹೆಚ್ಚು ಸಮಯ ಮೀಸಲಿಡಿ

ಮಿಥುನ: ಸಂಬಂಧ ಗಟ್ಟಿ ಆಗುವುದಕ್ಕೆ ಹೆಚ್ಚು ಸಮಯ ಮೀಸಲಿಡಿ

ನಿಮ್ಮ ಸಂಗಾತಿಗಾಗಿ ಎಷ್ಟು ಸಮಯ ಮೀಸಲಿಡುತ್ತೀರಿ ಎಂಬ ಆಧಾರದಲ್ಲಿ ಸಂಬಂಧದ ಭವಿಷ್ಯ ನಿಂತಿದೆ. ಈ ವರ್ಷದ ಮಧ್ಯ ಭಾಗದಲ್ಲಿ ಹೊಸ ವ್ಯಕ್ತಿಯೊಬ್ಬರು ನಿಮ್ಮ ಜೀವನವನ್ನು ಪ್ರವೇಶಿಸುತ್ತಾರೆ. ಇನ್ನು ಸೆಪ್ಟೆಂಬರ್ ನಿಂದ ನವೆಂಬರ್ ಮಧ್ಯೆ ಕೂಡ ಅಂಥದ್ದೊಂದು ಬೆಳವಣಿಗೆ ನಿರೀಕ್ಷೆ ಮಾಡಬಹುದು. ಈಗಾಗಲೇ ನೀವು ಪ್ರೀತಿಯಲ್ಲಿದ್ದರೆ ಈ ಬೆಳವಣಿಗೆಯಿಂದ ಸಮಸ್ಯೆ ಉದ್ಭವಿಸುತ್ತದೆ.

ಸಂಗಾತಿ ಜತೆಗೆ ಶತಾಯಗತಾಯ ವಾಗ್ವಾದಕ್ಕೆ ಇಳಿಯಬೇಡಿ. ಇದರಿಂದ ನಕಾರಾತ್ಮಕ ಪರಿಣಾಮ ಆಗುತ್ತದೆ. ಬೇರೆ ಆಗುವ ಸಂದರ್ಭ ಕೂಡ ಸೃಷ್ಟಿ ಆಗಬಹುದು. ಮಾರ್ಚ್ ಹಾಗೂ ಮೇ ಮಧ್ಯ ಅಂಥ ಯಾವ ವಾಗ್ವಾದ ಅಥವಾ ಬಿಕ್ಕಟ್ಟು ಉದ್ಭವಿಸದಂತೆ ಎಚ್ಚರ ವಹಿಸಿ. ಈ ಸಮಯದಲ್ಲಿ ನಿಮ್ಮ ಸಂಗಾತಿಯ ಮನಸ್ಸು ನೋಯಿಸದಂತೆ ಗಮನ ವಹಿಸಿ. ಈ ವರ್ಷ ಮದುವೆಗೆ ಆತುರ ಮಾಡುವ ಬದಲು ಸಂಬಂಧ ಗಟ್ಟಿಯಾಗಲು ಹೆಚ್ಚು ಸಮಯ ಮೀಸಲಿಡಿ.

ಕರ್ಕಾಟಕ: ದೀರ್ಘ ಕಾಲದ ಸಂಬಂಧ ಗಟ್ಟಿ ಆಗುತ್ತದೆ

ಕರ್ಕಾಟಕ: ದೀರ್ಘ ಕಾಲದ ಸಂಬಂಧ ಗಟ್ಟಿ ಆಗುತ್ತದೆ

ಪ್ರೀತಿ, ಪ್ರೇಮ- ಸಂಬಂಧಗಳ ವಿಚಾರದಲ್ಲಿ ಇದು ಬಹಳ ವರ್ಷಗಳ ಕಾಲ ನೆನಪಿರುವಂಥ ವರ್ಷವಾಗಿರುತ್ತದೆ. ಭಾವನಾತ್ಮಕ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಯಾವುದೇ ವಿಚಾರದ ಬಗ್ಗೆ ವಿಶ್ಲೇಷಣೆ ಮಾಡುತ್ತೀರಿ. ನಿಮ್ಮ ಹಕ್ಕನ್ನು ಚಲಾಯಿಸುತ್ತೀರಿ. ಪ್ರೀತಿ-ಪ್ರೇಮದ ಸಂಗತಿಗಳಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಸಮಸ್ಯೆಗಳನ್ನು ವಾಸ್ತವದ ನೆಲೆಯಲ್ಲಿ ಬಗೆಹರಿಸಿಕೊಳ್ಳುತ್ತೀರಿ.

ವೈಯಕ್ತಿಕವಾದ ಭೇಟಿಗಿಂತ ಮೊಬೈಲ್, ಲ್ಯಾಪ್ ಟಾಪ್ ಇಂಥ ಸಲಕರಣೆಗಳ ಸಾಮಾಜಿಕ ಮಾಧ್ಯಮಗಳ ಮೂಲಕವೇ ಸಂಗಾತಿ ಜತೆಗೆ ಸಂವಹನ ಜಾಸ್ತಿ ಆಗುತ್ತದೆ. ಅವರ ಜತೆಗೆ ಹೆಚ್ಚಿನ ಸಮಯವನ್ನೂ ಕಳೆಯುತ್ತೀರಿ. ಸಂಗಾತಿಯ ಮನಸ್ಸಿನಲ್ಲಿ ಇರುವ ವಿಚಾರ ಏನು ಎಂದು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ. ಆದ್ದರಿಂದ ಮೆಚ್ಚುಗೆಗೂ ಪಾತ್ರರಾಗುತ್ತೀರಿ. ದೀರ್ಘ ಕಾಲದ ಸಂಬಂಧವೊಂದು ಗಟ್ಟಿ ಆಗುತ್ತದೆ.

ಸಿಂಹ: ಅದ್ಭುತವಾದ ಪ್ರೀತಿಯ ಅನುಭೂತಿ ನಿಮ್ಮದಾಗುತ್ತದೆ

ಸಿಂಹ: ಅದ್ಭುತವಾದ ಪ್ರೀತಿಯ ಅನುಭೂತಿ ನಿಮ್ಮದಾಗುತ್ತದೆ

ಅಂದುಕೊಳ್ಳದ ರೀತಿಯಲ್ಲಿ ಅದ್ಭುತವಾದ ಪ್ರೀತಿಯ ಅನುಭೂತಿಯನ್ನು ಪಡೆಯುತ್ತೀರಿ. ಇಬ್ಬರಿಗೂ ಸಮಾನವಾಗಿ ಸಂತೋಷ ಸಿಗುತ್ತದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸಂಬಂಧ ದೃಢ ಹಾಗೂ ಗಾಢವಾಗುತ್ತದೆ. ಪ್ರೀತಿ, ಅಕ್ಕರೆ ಹಾಗೂ ನಂಬಿಕೆ ಪರಸ್ಪರರಲ್ಲಿ ಹೆಚ್ಚಾಗುತ್ತದೆ. ಸಕಾರಾತ್ಮಕ ಮನೋಭಾವ ಹೆಚ್ಚಾಗುತ್ತದೆ. ಮಾರ್ಚ್-ಏಪ್ರಿಲ್ ನಲ್ಲಿ ಪ್ರಯಾಣ ತೆರಳಲು ಯೋಜನೆ ರೂಪಿಸಬಹುದು.

ಈ ಅವಧಿಯಲ್ಲಿ ಸಂಗಾತಿ ಜತೆಗೆ ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರ ಆಗುತ್ತೀರಿ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಹಾಗೂ ಮನಸ್ತಾಪದ ಬಗ್ಗೆ ತಲೆ ಕೆಡಿಸಿಕೊಂಡು ಉತ್ತಮ ಸಂಬಂಧವನ್ನು ಹಾಳು ಮಾಡಿಕೊಳ್ಳದಿರಿ. ನಿಮ್ಮ ಕೋಪವನ್ನು ತಡೆದಿಟ್ಟುಕೊಂಡು, ಸಾಧ್ಯವಾದಷ್ಟು ತಾಳ್ಮೆಯಿಂದ ವ್ಯವಹರಿಸಿ.

ಕನ್ಯಾ: ಗೊಂದಲಕ್ಕೆ ಗುರಿಯಾಗದೆ ಸಂತಸ ಅನುಭವಿಸಿ

ಕನ್ಯಾ: ಗೊಂದಲಕ್ಕೆ ಗುರಿಯಾಗದೆ ಸಂತಸ ಅನುಭವಿಸಿ

ನೀವು ಪಡೆಯುವುದಕ್ಕಿಂತ ಹೆಚ್ಚನ್ನು ನೀಡಲು ಬಯಸುವವರು. ಜನವರಿಯಿಂದ ಏಪ್ರಿಲ್ ತನಕ ಹಾಗೂ ಸೆಪ್ಟೆಂಬರ್ ಎರಡನೇ ವಾರದ ನಂತರ ಸಂಬಂಧ ಹಾಗೂ ಪ್ರೀತಿ, ಪ್ರೇಮದ ವಿಚಾರಕ್ಕೆ ಉತ್ತಮ ಸಮಯ ಇದೆ. ಈ ಅವಧಿಯಲ್ಲಿ ಯಾವುದೇ ಅನುಮಾನ-ಗೊಂದಲಕ್ಕೆ ಈಡಾಗದೆ ಸಂತೋಷವನ್ನು ಅನುಭವಿಸಿ.

ಯಾವಾಗಲೂ ಒಳ್ಳೆ ಸಮಯವೇ ಇರಬೇಕು ಅಂದುಕೊಂಡರೆ ಹೇಗೆ? ಮೇ ತಿಂಗಳ ಆರಂಭದಿಂದ ಸೆಪ್ಟೆಂಬರ್ ಎರಡನೇ ವಾರದ ತನಕ ಸವಾಲಿನ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ವಿಶ್ವಾಸ ದ್ರೋಹ ಕೂಡ ಆಗಬಹುದು. ಸಂಬಂಧ ಉಳಿದುಕೊಳ್ಳಲಿ ಎಂಬ ಕಾರಣಕ್ಕೆ ಅಂಥ ಸನ್ನಿವೇಶವನ್ನು ತಡೆಯಲು ಯತ್ನಿಸುತ್ತೀರಿ. ಆದ್ದರಿಂದ ಸಂತಸದ ವೇಳೆಯಲ್ಲಿ ಸಂಬಂಧ ಗಟ್ಟಿ ಮಾಡಿಕೊಂಡರೆ, ಸಂಕಷ್ಟದ ವೇಳೆಯಲ್ಲಿ ಅದೇ ಕಾಪಾಡುತ್ತದೆ.

ತುಲಾ: ಪ್ರೀತಿ ನಿವೇದನೆಗೆ ಹಲವು ಅವಕಾಶ ದೊರೆಯುತ್ತದೆ

ತುಲಾ: ಪ್ರೀತಿ ನಿವೇದನೆಗೆ ಹಲವು ಅವಕಾಶ ದೊರೆಯುತ್ತದೆ

ಪ್ರೀತಿ-ಪ್ರೇಮ, ಸಂಬಂಧಗಳು ಮಧುರವಾಗಿರುತ್ತವೆ. ಪ್ರೀತಿ ನಿವೇದನೆ ಮಾಡಿಕೊಳ್ಳಲು ಹಲವು ಅವಕಾಶ ಸಿಗುತ್ತದೆ. ಈಗಾಗಲೇ ಪ್ರೀತಿ ಮಾಡುತ್ತಿರುವವರ ಮಧ್ಯೆ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಸಣ್ಣ-ಪುಟ್ಟ ಮನಸ್ತಾಪಗಳೆಲ್ಲ ನಿವಾರಣೆಯಾಗಿ, ಸಂಬಂಧ ಮತ್ತೆ ಚಿಗುರುತ್ತದೆ. ಪರಸ್ಪರರ ಮಧ್ಯೆ ಆಕರ್ಷಣೆ ಬಹಳ ಹೆಚ್ಚಾಗುತ್ತದೆ.

ಏಪ್ರಿಲ್ ತಿಂಗಳ ಮಧ್ಯ ಭಾಗದ ನಂತರ ಹೊಸ ಪ್ರೇಮ ಸಂಬಂಧವೊಂದು ಚಿಗುರುತ್ತದೆ. ಒಬ್ಬರ ಕಡೆಗೆ ಉತ್ಕಟವಾಗಿ ಆಕರ್ಷಿತರಾಗುತ್ತೀರಿ. ತಡ ಮಾಡದೆ ಅದನ್ನು ಹೇಳಿಕೊಂಡರೆ ಉತ್ತಮ ಎಂಬುದನ್ನು ನೆನಪಿಟ್ಟುಕೊಳ್ಳಿ. ಅಕ್ಟೋಬರ್ ನಂತರ ಪ್ರೀತಿ ನಿವೇದನೆ ಮಾಡಿಕೊಳ್ಳಲು ಸರಿಯಾದ ಸಮಯ. ಜುಲೈ-ಆಗಸ್ಟ್ ತಿಂಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅಡೆತಡೆ ಎದುರಾಗುತ್ತದೆ. ಒಂದಿಷ್ಟು ಧೈರ್ಯ ಮಾಡಿ, ಪ್ರೀತಿ ಹೇಳಿಕೊಳ್ಳಿ. ಸಂಬಂಧ ಹಾಳಾಗದಂತೆ ಎಚ್ಚರ ವಹಿಸಿ.

ವೃಶ್ಚಿಕ: ಸಮಸ್ಯೆಗಳನ್ನು ಮಾತನಾಡಿ ಬಗೆಹರಿಕೊಳ್ಳಿ

ವೃಶ್ಚಿಕ: ಸಮಸ್ಯೆಗಳನ್ನು ಮಾತನಾಡಿ ಬಗೆಹರಿಕೊಳ್ಳಿ

ಸಂಬಂಧ ಮುರಿದು ಬೀಳುವ, ಪ್ರೀತಿಸಿದವರು ದೂರಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಿ. ಸಮಾಧಾನವಾಗಿರುವ ನಿಮ್ಮ ಪ್ರೇಮ ಜೀವನದಲ್ಲಿ ಅನುಮಾನ ಕಾಣಿಸಿಕೊಂಡರೆ ಕೂತು, ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ವಾಗ್ವಾದ ಹಾಗೂ ಭಿನ್ನಾಭಿಪ್ರಾಯ ಉದ್ಭವಿಸದಂತೆ ನೋಡಿಕೊಳ್ಳಿ.

ಈ ವರೆಗೆ ಒಂಟಿಯಾಗಿ ಇರುವವರೆಗೆ ಸಂಗಾತಿ ದೊರೆಯುತ್ತಾರೆ ಮತ್ತು ಆ ಸಂಬಂಧ ಗಟ್ಟಿಯಾಗಿ ಬೆಳೆಯುತ್ತದೆ. ಜೂನ್ ನಿಂದ ಸೆಪ್ಟೆಂಬರ್ ತನಕ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಈ ಸಮಯ ದುರದೃಷ್ಟಕರ. ವಿವಾಹಿತರಿಗೆ ವಿಚ್ಛೇದನ ಆಗುವ ಸಾಧ್ಯತೆ ಇದೆ. ಮಾರ್ಚ್ ನಿಂದ ಆಗಸ್ಟ್ ತನಕ ವಾಗ್ವಾದ ಬೇಡ. ಸಂಗಾತಿಗೆ ಸಮಯ ಮೀಸಲಿಡಲು ಕಷ್ಟವಾಗುತ್ತದೆ. ಆ ಕಾರಣಕ್ಕೆ ವಿವಾಹ ಜೀವನ ಹಾಳಾಗದಂತೆ ಎಚ್ಚರ ತೆಗೆದುಕೊಳ್ಳಿ.

ಧನುಸ್ಸು: ರಹಸ್ಯ ವಿಚಾರ ಯಾರ ಜತೆಗೂ ಹಂಚಿಕೊಳ್ಳಬೇಡಿ

ಧನುಸ್ಸು: ರಹಸ್ಯ ವಿಚಾರ ಯಾರ ಜತೆಗೂ ಹಂಚಿಕೊಳ್ಳಬೇಡಿ

ಹೊಸ ಸಂಬಂಧ ಆರಂಭಿಸಲು ಹಾಗೂ ಈಗಾಗಲೇ ಪ್ರೀತಿಯಲ್ಲಿ ಇರುವವರ ಮಧ್ಯ ಬಾಂಧವ್ಯ ಗಟ್ಟಿಯಾಗಲು ಸೂಕ್ತ ಸಮಯ ದೊರೆಯುತ್ತದೆ. ಜನವರಿಯಿಂದ ಏಪ್ರಿಲ್ ತನಕ ಪ್ರೀತಿ ಹಾಗೂ ಸಂಬಂಧಗಳಲ್ಲಿ ಸಂತಸದ ಸಮಯ. ಹೊಸದೊಂದು ಜೀವ ನಿಮ್ಮ ಜೀವನದಲ್ಲಿ ಸೇರ್ಪಡೆಯಾಗುತ್ತದೆ. ನಿಮ್ಮ ಬಗ್ಗೆ ರಹಸ್ಯ ವಿಚಾರಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.

ಹೊಸ ಸಂಬಂಧದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ, ವೈಮನಸ್ಯ ತಲೆದೋರುತ್ತದೆ. ಇಂಥ ಸನ್ನಿವೇಶದಲ್ಲಿ ಮನಸ್ಸು ಕೆಡಿಸಿಕೊಳ್ಳಬೇಡಿ. ಹೇಗೆ ಉತ್ತಮ ಸಂದರ್ಭಗಳು ಎದುರಾಗುತ್ತವೋ ಅದೇ ರೀತಿ ಕೆಲವು ಕೆಟ್ಟ ಸನ್ನಿವೇಶಗಳು ಸಹ ಎದುರಾಗುತ್ತವೆ. ಆದಷ್ಟು ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಯಾವುದೇ ಭಿನ್ನಾಭಿಪ್ರಾಯ ಉದ್ಭವಿಸಿದಾಗ ಮಾತು ಬಿಡದೆ, ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ.

ಮಕರ: ಸಂಗಾತಿ ಜತೆಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ

ಮಕರ: ಸಂಗಾತಿ ಜತೆಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ

ಹೊಸ ಪ್ರೀತಿ-ಸಂಬಂಧಗಳು ಆರಂಭವಾಗುತ್ತವೆ. ಪ್ರೀತಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಈಗಾಗಲೇ ಪ್ರೀತಿ ಮಾಡುತ್ತಿರುವವರು ಇದ್ದರೆ ಸಂಬಂಧ ಮತ್ತಷ್ಟು ಗಟ್ಟಿ ಆಗುತ್ತದೆ. ಸಂಗಾತಿ ಜತೆಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಅವರ ಅಗತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.

ಪ್ರೀತಿಪಾತ್ರರ ಜತೆಗೆ ಹೆಚ್ಚು ಸಮಯ ಕಳೆಯುವುದರಿಂದ ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲ ಆಗುತ್ತದೆ. ಮದುವೆ ಮಾಡಿಕೊಳ್ಳುವ ಆಲೋಚನೆ ಇದ್ದರೆ ಈ ವರ್ಷ ಸೂಕ್ತವಾಗಿದೆ. ಈ ವರ್ಷ ಮದುವೆಯಾದರೆ ಬಹಳ ಸಲೀಸಾಗಿ ಜೀವನ ಸಾಗುತ್ತದೆ. ಹೆಚ್ಚಿನ ಭಿನ್ನಾಭಿಪ್ರಾಯ ಇಲ್ಲದೆ ಸಂಸಾರ ಸಾಗುತ್ತದೆ. ಒಂಟಿಯಾಗಿ ಇರುವವರಿಗೆ ಸಂಗಾತಿ ಸಿಕ್ಕು, ಸಂಭ್ರಮ ಪಡುತ್ತೀರಿ.

ಕುಂಭ: ಪರಿಚಿತರ ಮೇಲೆ ಪ್ರೀತಿ ಮೂಡುತ್ತದೆ

ಕುಂಭ: ಪರಿಚಿತರ ಮೇಲೆ ಪ್ರೀತಿ ಮೂಡುತ್ತದೆ

ಪ್ರೀತಿ ವ್ಯಕ್ತಪಡಿಸಿ, ಅದನ್ನು ಅನುಭವಿಸಿ ಸಂತಸ ಪಡುತ್ತೀರಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಭಾವನೆಗಳು, ವಿಶ್ವಾಸ ವೃದ್ಧಿ ಆಗುತ್ತದೆ. ಎಲ್ಲ ವಿಧದಲ್ಲೂ ಸಕಾರಾತ್ಮಕವಾದ ಬೆಳವಣಿಗೆ ಇದೆ. ಫೆಬ್ರವರಿ ಹಾಗೂ ಮೇ ಮಧ್ಯೆ ಪ್ರೀತಿಪಾತ್ರರ ಜತೆಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ವ್ಯಕ್ತಿತ್ವಕ್ಕೆ ಆಕರ್ಷಣೆ ಬರುತ್ತದೆ. ಇದರಿಂದ ನಿಮ್ಮ ಕಡೆಗೆ ಆಕರ್ಷಿತರಾಗುವವರ ಸಂಖ್ಯೆ ಹೆಚ್ಚಾಗುತ್ತದೆ.

ವಿವಾಹಿತರ ಪ್ರೀತಿ ಹಾಗೂ ಲೈಂಗಿಕ ಬದುಕು ಸಂತುಷ್ಟವಾಗಿರುತ್ತದೆ. ನಿಮಗೆ ಪರಿಚಿತರಾಗುವವರ ಮೇಲೇ ಪ್ರೀತಿ ಉಂಟಾಗಬಹುದು. ಆದರೆ ಯಾವುದೇ ಸುಳ್ಳು ಅಥವಾ ಈಡೇರಿಸಲಾಗದ ಭರವಸೆ ನೀಡಬೇಡಿ. ಹಾಗೆ ಮಾಡಿದಾಗ ಮಾತ್ರ ನಿಮ್ಮ ಪ್ರೀತಿ-ಪ್ರೇಮ ಸಂಬಂಧಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

ಮೀನ: ಹೊಸ ವ್ಯಕ್ತಿಯ ಪ್ರವೇಶ ಆಗುತ್ತದೆ

ಮೀನ: ಹೊಸ ವ್ಯಕ್ತಿಯ ಪ್ರವೇಶ ಆಗುತ್ತದೆ

ಪ್ರೀತಿ-ಪ್ರೇಮ-ಸಂಬಂಧಗಳಿಗೆ ಅದ್ಭುತವಾದ ವರ್ಷ ಇದು. ಮಾರ್ಚ್ ನಂತರ ಕೆಲ ಮಟ್ಟಿಗೆ ಸವಾಲುಗಳು ಎದುರಾಗುತ್ತವೆ. ಸದ್ಯಕ್ಕೆ ಪ್ರೀತಿಯಲ್ಲಿ ಇದ್ದರೆ ದಿಢೀರ್ ಬಿಕ್ಕಟ್ಟು ಕಾಣಿಸಿಕೊಳ್ಳುತ್ತದೆ. ಆದರೆ ಅದು ತಾತ್ಕಾಲಿಕ ಮಾತ್ರ. ಒಂಟಿಯಾಗಿದ್ದು, ಹೊಸ ಸಂಬಂಧ ಆರಂಭಿಸುವವರಿಗೆ ಇದು ಸೂಕ್ತ ಸಮಯ ಅಲ್ಲ.

ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಪ್ರವೇಶಿಸುವವರ ಜತೆಗೆ ಬಿಕ್ಕಟ್ಟು ಉದ್ಭವಿಸಿ, ಆ ಸಂಬಂಧ ಬಹಳ ಕಾಲ ಉಳಿಯುವುದಿಲ್ಲ. ಆದ್ದರಿಂದ ಯಾವುದೇ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳದೆ ಸಂಬಂಧ ಮುಂದುವರಿಸಬೇಡಿ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಜಾಗರೂಕತೆಯಿಂದ ಇರಬೇಕು. ಸಂಬಂಧ ಮುರಿದು ಬೀಳಬಹುದು, ಎಚ್ಚರ. ಈ ಎರಡು ತಿಂಗಳು ಕಳೆದ ಮೇಲೆ ಏಪ್ರಿಲ್ ಮಧ್ಯ ಭಾಗದಲ್ಲಿ ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶ ಆಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+