• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಂಪತಿಗಳ ನಡುವೆ ಗುಟ್ಟೇಕಿರಬೇಕು?

By * ಧವಳ
|

ಸುಖ ಸಂಸಾರದ ಗುಟ್ಟು ಯಾವುದು? ಮದುವೆಯಾದ ಗಂಡು ಹೆಣ್ಣಿನ ನಡುವೆ ಯಾವುದೇ ರೀತಿಯ ಗುಟ್ಟು ಇಲ್ಲದೇ ಇರುವುದು. ಹೊಟ್ಟೆಯಲ್ಲೇ ಇಟ್ಟುಕೊಂಡ ಗುಟ್ಟುಗಳು ರಟ್ಟಾಗಿ ಸಂಶಯ ಪಿಶಾಚಿ ಅಮರಿಕೊಂಡು ದಾಂಪತ್ಯ ಜೀವನ ಬೇಕಾಬಿಟ್ಟಿಯಾಗಲು ಬಿಡಬೇಡಿ. ಎಲ್ಲಕ್ಕಿಂತ ಮೊದಲು ಅಹಂಕಾರವನ್ನು ತ್ಯಜಿಸಿರಿ.

ಕರ್ಕಾಟಕ ರಾಶಿ ಪುರುಷ - ಕರ್ಕಾಟಕ ರಾಶಿ ಸ್ತ್ರೀ : ರಾಶಿ ಒಂದೇ ಆದರೆ ಸ್ತ್ರೀ ಪುರುಷರಿಗೆ ಅವರದೇ ಆದ ಕೆಲವು ಭಿನ್ನತೆ ಇರುತ್ತದೆ ಮನಸ್ಥಿತಿಯಲ್ಲಿ! ಇವರಿಬ್ಬರಲ್ಲಿ ತಮ್ಮ ಬದುಕಲ್ಲಿ ಭದ್ರತೆಯನ್ನು ಹೆಚ್ಚು ಬಯಸುತ್ತಾರೆ. ಸಮಾನತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಗುಣ ಹೊಂದಿರುತ್ತಾರೆ. ಇವರು ಎಲ್ಲಾ ವಿಷಯದಲ್ಲೂ ಓಕೆ, ಆದರೆ ಹಣದ ವಿಷಯಕ್ಕೆ ಬಂದ್ರೆ ಗಲಾಟೆಯೋ ಗಲಾಟೆ. ಅತ್ಯಂತ ಖೇದಕರ ಸಂಗತಿ ಅಂದ್ರೆ ಹಣವೇ ಬುದುಕು, ಹಣವೇ ನಮ್ಮ ದೇವರು ಎನ್ನುವ ನಂಬಿಕೆಯನ್ನು ಇವರಿಬ್ಬರೂ ಹೊಂದಿರುತ್ತಾರೆ. ಹಾಗೆಂದು ಸಂಗಾತಿಯ ಬಗ್ಗೆ ಪ್ರೀತಿ ಇಲ್ಲ ಎಂದು ತಿಳಿಯಬೇಡಿ, ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗೆ ಅತಿಯಾದ ಪ್ರಾಣ, ಸಿಕ್ಕಾಪಟ್ಟೆ ಪ್ರೀತಿ. ವಿಶ್ವಾಸದ ವಿಷಯದಲ್ಲೂ ಎಲ್ಲೂ ನಿರ್ಲಕ್ಷ್ಯ ಮಾಡುವ ಹಾಗೆ ಇಲ್ಲ. ಆದ್ರೆ ಹಾಳಾದ್ದು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳುವ ಗುಣ ಇವರಿಬ್ಬರಲ್ಲೂ ಇರುವುದರಿಂದ ಒಬ್ಬರ ಬಗ್ಗೆ ಮತ್ತೊಬ್ಬರು ಅರಿಯಲು ಕಷ್ಟವಾಗುತ್ತದೆ. ಎಲ್ಲಿ ಬಾಂಧವ್ಯಗಳ ವಿಷಯದಲ್ಲಿ ಗುಟ್ಟು ಇರುತ್ತದೆಯೋ ಅಲ್ಲಿ ಸಮರಸದಲ್ಲೂ ಕೊರತೆ ಇದ್ದೆ ಇರುತ್ತದೆ. ಯಾಕ್ರೀ ಹೀಗೆ ಮಾಡ್ತೀರಿ? ಬದುಕಿಗಿಂತ ನಿಮ್ಮ ಅಹಂ ದೊಡ್ಡದೇ?

ಕರ್ಕಾಟಕ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ : ಇವರಿಬ್ಬರೂ ಮದುವೆಯಾದರೆ ಮೂರು ವಿಷಯಗಳು ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. 1) ಕೆಲವು ವರ್ಷಗಳ ಬಳಿಕ ಪುರುಷ ತನ್ನ ಹಠಮಾರಿ ಗುಣದಿಂದ ತನ್ನ ಸಂಗಾತಿಯನ್ನು ತುಂಬಾ ದುಃಖಕ್ಕೆ ಈಡು ಮಾಡ್ತಾನೆ. ಅದೆಷ್ಟರ ಮಟ್ಟಿಗೆ ಅಂದ್ರೆ ನಿಜವಾಗಿಯೂ ನಾನು ಪ್ರೀತಿಸಿ ಮದುವೆ ಆದವ ಇವನೇನಾ ಎನ್ನುವಂತೆ ಇರುತ್ತದೆ ಆ ವ್ಯಕ್ತಿಯ ವರ್ತನೆ. 2) ಸ್ತ್ರೀಯರು ಕೂಡ ಇದಕ್ಕೆ ಹೊರತಲ್ಲ. ಮದುವೆಯಾದ ಸ್ವಲ್ಪ ಕಾಲದಲ್ಲೇ ತನ್ನ ಬಾಲ ಬಿಚ್ತಾಳೆ. ಬದುಕೇ ದುಸ್ತರ ಎನ್ನುವಂತೆ ಮಾಡಿ ಬಿಡ್ತಾಳೆ. ಇವಳೇನಾ ಅವಳು ಎನ್ನುವಂತೆ ಮಾರ್ಪಾಡಾಗುತ್ತಾಳೆ. ಗಂಡನ ಬದುಕು ಯಾವ ಶತ್ರುವಿಗೂ ಬೇಡ! 3) ಕೆಲವು ವರ್ಷಗಳು ಪೂರ್ಣಗೊಂಡ ಬಳಿಕ ಇವರಿಬ್ಬರೂ ತಮ್ಮ ಜೀವನಶೈಲಿ ಹಾಗೂ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು ಹ್ಯಾಪಿ ಲೈಫ್ ಲೀಡ್ ಮಾಡ್ತಾರೆ. ಆದ್ರೆ ವಿಷಾದಕರ ಸಂಗತಿ ಅಂದ್ರೆ ಮೂರನೆಯ ಸಂಗತಿ ಜಾರಿಯಾಗುವುದು ಅಷ್ಟು ಸುಲಭದ ವಿಷಯವಲ್ಲ. ಈಗಾಗಲೇ ಮದುವೆ ಆಗಿದ್ದರೆ ದಯಮಾಡಿ ಜೀವನ ಸರಿಯಾಗಿಟ್ಟು ಕೊಳ್ಳುವುದರತ್ತ ಗಮನ ಕೊಡಿ. ನೀವು ಎಷ್ಟು ಚಂದದ ಜೀವನ ನಡೆಸಿದರೆ ಅಷ್ಟು ಖುಷಿಯ ಬದುಕು ನಿಮ್ಮದಾಗುತ್ತದೆ ಅಲ್ವೆ? (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Secret of happy life is having no secret at all. Why should there be secret or confidentiality between married couple? Love compatibility astrology by Dhavala of cancer - cancer couple and cancer - leo couple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more