ಪ್ರೀತಿ ಮಾಡಿದರೆ ಮದುವೆಗೆ ಹೆದರಬಾರದು!

ಮೇಷ ರಾಶಿ ಪುರುಷ - ಧನಸ್ಸು ರಾಶಿ ಸ್ತ್ರೀ : ಧನಸ್ಸು ರಾಶಿಯ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಧೈರ್ಯಶಾಲಿಗಳು. ಸತ್ಯಕ್ಕೆ ಹೆಚ್ಚು ಆದ್ಯತೆ ಕೊಡುವಂತಹ ಸ್ವಭಾವದವರು. ಬಾಳಸಂಗಾತಿ ತಮ್ಮ ಬ್ಯಾಕ್ಬೋನ್ ಆಗಬೇಕೆಂಬ ಪ್ರಾಮಾಣಿಕ ಆಸೆ ಹೊಂದಿರುವ ವ್ಯಕ್ತಿತ್ವದವರು. ಆದರೆ ಮೇಷರಾಶಿಯ ಪುರುಷ ಹಾಗೆ ಇರುವುದಿಲ್ಲ. ಈ ಹೆಣ್ಣುಮಗಳ ಬೋಲ್ಡ್ ನೆಸ್ ಈ ಗಂಡುಪ್ರಾಣಿಗೆ ಅನುಮಾನ ಹುಟ್ಟಿಸುವುದಕ್ಕೆ ಕಾರಣ ಆಗುತ್ತೆ. ಎಲ್ಲರಿಗೂ ಗೊತ್ತಿರುವ ಹಾಗೆ 'ಅನುಮಾನಂ ಪೆದ್ದ ರೋಗಂ', ಅದು ಸಂಸಾರ ಹಾಗೂ ಮನಸ್ಸುಗಳನ್ನು ಒಡೆದು ಚೂರುಚೂರು ಮಾಡಿ ಬಿಡುತ್ತದೆ. ಗಂಡಸಿನ ಈ ಅನುಮಾನದ ರೋಗದಿಂದ ಸಂಸಾರವು ಕತ್ತಿ ಅಲುಗಿನ ಮೇಲೆ ನಡೆಯುವ ದೊಂಬರ ಹುಡುಗಿಯಂತೆ ಸೂಕ್ಷ್ಮವಾಗಿ ನಡಿತಾ ಇರುತ್ತದೆ. ಅತಿಯಾದ ಅನುಮಾನ ಅನಾಹುತಕ್ಕೆ ಕಾರಣ ಎನ್ನುವುದನ್ನು ಎಂದಿಗೂ ಮರೆಯಬಾರದು. ಇದನ್ನು ಆರಂಭಿಕ ಹಂತದಲ್ಲೇ ಸರಿಪಡಿಸಿಕೊಂಡರೆ ಲೈಫು ಲವ್ಲಿ ಲವ್ಲಿ. ಇಲ್ಲದೆ ಹೋದರೆ ಬದುಕು ವಾಸಿಯಾಗದ ಹುಣ್ಣಾಗುತ್ತದೆ ಎಚ್ಚರ!












Click it and Unblock the Notifications