ಜಗಳ ಇದ್ರೆ ತಾನೆ ಬದುಕು ಸುಂದರ!

Small fights bonds couple more (Pic by : Sharayah)
ಪ್ರೀತಿಯಲ್ಲಿ ಸ್ವಲ್ಪ ಜಗಳ ಇದ್ರೆ ಬದುಕು ತುಂಬಾ ಚನ್ನಾಗಿರುತ್ತೆ?

* ಧವಳ

ಮೇಷ ರಾಶಿ ಸ್ತ್ರಿ - ಸಿಂಹ ರಾಶಿ ಪುರುಷ

ಇವರಿಬ್ಬರ ನಡುವೆ ಸದಾ ಖುಷಿ ಖುಷಿ. ಆನಂದ ಇವರ ಜೀವನದ ಮುಖ್ಯ ಭಾಗವಾಗಿರುತ್ತದೆ. ಹಾಗಂತ ಇಬ್ಬರೂ ಜಗಳ ಆಡದೆ ಇರುವುದಿಲ್ಲ ಭಯಂಕರ ಜಗಳ ಶುರು ಆಗುತ್ತೆ. ಪ್ರೀತಿಯಲ್ಲಿ ಸ್ವಲ್ಪ ಜಗಳ ಇದ್ರೆ ಬದುಕು ತುಂಬಾ ಚನ್ನಾಗಿರುತ್ತೆ ಎಂದು ಇವರಿಬ್ಬರೂ ತಿಳಿದ ಕಾರಣ ಗಲಾಟೆಗೆನೂ ಕೊರತೆ ಇರದು. ಮಾತು ಚಿಕ್ಕದೆ ಆದರೆ ಪರಿಣಾಮ ಮಾತ್ರ ಬ್ಯಾಡ ಅದರ ಕಥೆ. ಆತನಿಂದ ಬೆಡ್ ರೂಮ್ಗೆ ಸ್ಕೈ ಬ್ಲೂ ಪೇಯಿಂಟ್ ಇರಲಿ ಎಂದು ಮಾತು ಶುರು ಆಗೋದು, ಇಲ್ಲ ಅದು ಬೇಡ ಲೈಟ್ ಪಿಂಕ್ ಚಂದ ರೊಮ್ಯಾಂಟಿಕ್ ಮೂಡ್ ಬರುತ್ತೆ ಎನ್ನುವ ಅಭಿಪ್ರಾಯ ಆಕೆಯಿಂದ! ಆಗ ಶುರು ಆಗುತ್ತೆ ನೋಡಿ ಜಟಾಪಟಿ ಲಟಾಪಟಿ. ಸಣ್ಣ ತುಂತುರು ತ್ಸುನಾಮಿಯಾಗಿ ಬದಲಾಗುತ್ತದೆ. ಎಂಟು ದಿನ ಮಾತು ಕಥೆ ಎಲ್ಲವೂ ದೂರ ದೂರ! ಎಲ್ಲ ವಿಷಯಗಳಿಗೂ ಉಪವಾಸ. ಆ ಕಾಲದಲ್ಲಿ ಇಬ್ಬರು ವಿರಹ ವೇದನೆಯಿಂದ ಬಳಲಿ ಬೆಂಡಾಗಿ ಬಿಡ್ತಾರೆ. ಈ ಅಂಶವು ಇವರಿಬ್ಬರ ಬಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಉತ್ತಮ ಸ್ನೇಹಿತರಾಗಿ ಬದಲಾಗುತ್ತಾರೆ. ಇದು ಅವರ ಬದುಕಿನ ಪ್ಲಸ್ ಪಾಯಿಂಟ್. ಆದರೆ ಯಾವುದೇ ಆಗಲಿ ಅತಿ ಆದರೆ ತೊಂದರೆ ತಪ್ಪಿದ್ದಲ್ಲ. ಪ್ರೀತಿ ಹೆಚ್ಚು ಮಾಡಿ, ಕೋಪದ ಪ್ರಮಾಣ ಕಡಿಮೆ ಇರಲಿ.

ಮೇಷ ರಾಶಿ ಪುರುಷ - ಸಿಂಹ ರಾಶಿ ಸ್ತ್ರಿ

ಸಿಂಹರಾಶಿ ಸ್ತ್ರಿ ಹೆಸರಿಗೆ ತಕ್ಕಂತೆ ಸಿಂಹಿಣಿ. ಇವರ ಜೊತೆ ಬಾಳ ಬೇಕಾದರೆ ಸಿಕ್ಕಾಪಟ್ಟೆ ಗಂಡೆದೆ ಬೇಕೇ ಬೇಕು. ಯಾಕೆ ಅಂದ್ರೆ ಸಿಕ್ಕಾಪಟ್ಟೆ ಅಹಂಕಾರಿಗಳು. ಏಕಾಂತ ಪ್ರಿಯರು, ಸ್ವಾರ್ಥಿಗಳು, ಹಠವಾದಿಗಳು. ತಾಳ್ಮೆ ಅನ್ನುವ ಪದ ಇವರ ಡಿಕ್ಷನರಿಯಲ್ಲಿ ಇಲ್ಲವೇ ಇಲ್ಲ. ಈ ರಾಶಿಯ ಹೆಣ್ಣುಮಕ್ಕಳು ಖರ್ಚು ಮಾಡುವುದರಲ್ಲೂ ಮುಂದು. ಹಣ ಹೇಗೆ ಮಾಡುವುದು, ಎರ್ರಾಬಿರ್ರಿ ಖರ್ಚಾಗಿ ಬಿಡ್ತಲ್ಲ ಎಂದು ಸದಾ ಚಿಂತಿಸ್ತಾ ಇರ್ತಾರೆ. ಆದರೆ ಮೇಷರಾಶಿ ಪುರುಷ ಹಾಗಲ್ಲ, ಆತ ಅತಿ ಖರ್ಚು ಮಾಡುವ ಗುಣವೂ ಇಲ್ಲ, ದುಡ್ಡಿನ ಬಗ್ಗೆ ಚಿಂತಿಸುವುದೂ ಇಲ್ಲ. ಇವರಿಬ್ಬರಿಗೂ ಕಾಣಿಕೆ ನೀಡುವ ಹಾಗೂ ಪಡೆಯುವುದೆಂದರೆ ಸಿಕ್ಕಾಪಟ್ಟೆ ಇಷ್ಟ. ಮೇಷರಾಶಿ ಪುರುಷರು ತಮ್ಮ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ. ಇವರಿಬ್ಬರಲ್ಲಿ ಪ್ರೀತಿ, ಒನ್ ನೆಸ್ ತುಂಬಾ ಇರುತ್ತದೆ. ಮತ್ತೊಂದು ಸಂಗತಿ, ಸಿಂಹರಾಶಿ ಸ್ತ್ರಿ ತನ್ನ ಪತಿ ತನ್ನನ್ನು ಏಕೆ ಇಷ್ಟ ಪಡ್ತಾರೆ, ಎಷ್ಟು ಇಷ್ಟ ಪಡ್ತಾರೆ ಎಂದು ಪದೇಪದೆ ಕೇಳಿ ತಿಳಿಯುವುದಕ್ಕೆ ಇಷ್ಟ ಪಡ್ತಾಳೆ (ಯಾವುದೇ ರಾಶಿಯ ಪುರುಷರಾಗಿರಿ ನಿಮ್ಮ ಪತ್ನಿ ಸಿಂಹಿಣಿ ಆಗಿದ್ದರೆ ಈ ಅಂಶಗಳು ನಿಮಗೆ ತಿಳಿದಿರಲಿ) ಈ ಸಂಗತಿಯ ಬಗ್ಗೆ ಹೆಚ್ಚು ಗಮನ ಕೊಟ್ರೆ ಬದುಕು ಬಂಗಾರವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+