ಮೇಷ : ಒಂದೊಂದ್ಲ ಒಂದು ಒಂದೆರ್ಡ್ಲ ಎರಡು

ಇವರು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ, ಆದರೆ ಜೊತೆಜೊತೆಯಲ್ಲಿ ಗಲಾಟೆ-ಕೋಪ ತಾಪ ಇದ್ದೆ ಇರುತ್ತದೆ. ಇಂತಹವರ ವೈವಾಹಿಕ ಬದುಕಲ್ಲಿ ಪ್ಲಸ್ಸು ಹಾಗೂ ಮೈನಸ್ಸು ಎರಡು 50x50 ಇರುತ್ತದೆ. ಗೆಲುವು ಮತ್ತು ಸೋಲು ಒಟ್ಟಾಗಿ ಕಾಡುತ್ತವೆ. ಗಂಡ ಕ್ರೋಧದಿಂದ ಕೆಂಡಾಮಂಡಲ ಆಗಿದ್ದರೆ ಆ ಸಂದರ್ಭದಲ್ಲಿ ಆಕೆ ಮೌನಕ್ಕೆ ಆದ್ಯತೆ ಕೊಡಬೇಕು. ಆಗಷ್ಟೆ ಸಫಲ ದಾಂಪತ್ಯ ನಿಮ್ಮದಾಗುತ್ತೆ. ಇಂತಹವರು ಅವರ ರೂಂನಲ್ಲಿ ಒಟ್ಟಾಗಿ ತೆಗೆಸಿಕೊಂಡು ಇರುವ ಫೋಟೋ ಇಡಬೇಕು, ಕೈಕೈ ಹಿಡಿದು ನಡೆಯುತ್ತಿರುವ, ಭುಜಕ್ಕೆ ಭುಜ ತಗುಲಿಸಿ ನಿಂತಿರುವ... ಒಟ್ಟಾರೆ ಅವರ ಟೇಸ್ಟ್ ಹಾಗೂ ಮನಸ್ಥಿತಿಗೆ ತಕ್ಕಂತಹ ಫೋಟೋ ಇರಲಿ.
ಇವ್ಯಾವುದು ಆಗಲ್ಲ ಅಂದ್ರೆ ಕನಿಷ್ಠ ರೋಮಿಯೋ ಜೂಲಿಯೆಟ್, ಲೈಲಾ ಮಜ್ನು, ಇಲ್ಲದೆ ಹೋದ್ರೆ ರಾಧ ಕೃಷ್ಣ ಫೋಟೋನಾದ್ರೂ ಬೆಡ್ ರೂಮಿನಲ್ಲಿ ಇಟ್ಟುಕೊಳ್ಳಲೇಬೇಕು..! ಪ್ರಾಯಶಃ ಇವರಿಗೆ ತಮ್ಮ ಸಂಗಾತಿಯನ್ನು ಪ್ರೀತಿ ಮಾಡುವ ವಿಷಯವು ಸಹ ಮತ್ತೆಮತ್ತೆ ಜ್ಞಾಪಕಕ್ಕೆ ಬರ್ತಾ ಇರಬೇಕು ಅಂತ ಕಾಣುತ್ತೆ!
2) ಮೇಷ ರಾಶಿ ಪುರುಷ- ವೃಷಭ ರಾಶಿ ಸ್ತ್ರೀ : ಹೆಣ್ಣಿನದು ವೃಷಭರಾಶಿ ಆಗಿದ್ದು ಪುರುಷನದು ಮೇಷರಾಶಿ ಆಗಿದ್ದರೆ ಸಖತ್ ಸಮ್ ಸಾರ ಇವರದಾಗುತ್ತದೆ. ಆದ್ರೆ ಗಂಡಿನದು ವೃಷಭ ರಾಶಿ ಆಗಿದ್ದು, ಸ್ತ್ರಿಯದ್ದು ಮೇಷವಾಗಿದ್ದರೆ ಇವರಿಬ್ಬರು ಸುಖವನ್ನು ದುರ್ಬೀನಿನಲ್ಲಿ ಹುಡುಕಬೇಕಾಗುತ್ತದೆ.
ಈ ಪೇರ್ ಏತಿ ಅಂದ್ರೆ ಪ್ರೇತಿ ಅನ್ನುವ ಗುಣ ಹೊಂದಿರುತ್ತಾರೆ. ಗಂಡ ಹೋಂಡಾ ಕಾರು ಕೊಳ್ಳುವ ಅಂದ್ರೆ, ಹೆಂಡತಿ ಟೊಯೋಟಾ ಕಾರು ತೊಗೊಬೇಕು ಅಂತಿದೀನಿ ಅಂತ ಎಂದು ಮೂತಿ ಸೊಟ್ಟ ಮಾಡಿಬಿಡ್ತಾಳೆ. ವೃಷಭ ರಾಶಿ ಹೆಣ್ಣು ಸುರಕ್ಷಿತ ಬದುಕಿಗೆ ಆದ್ಯತೆ ಕೊಡ್ತಾಳೆ. ಪ್ರೀತಿ, ಆಸೆ, ಸತ್ಯ, ಕೊಟ್ಟ ಮಾತಿನಂತೆ ನಡೆಯುವುದು, ಒಟ್ಟಾರೆ ಯಾವುದೇ ವಿಷಯ ಆಗಿರಲಿ ಎಲ್ಲವು ಪ್ರಾಮಾಣಿಕವಾಗಿ ಇರಬೇಕು ಎನ್ನುವ ಇಚ್ಛೆ ಆಕೆಯದು. ಆಕೆಯ ಪತಿ ಮೊದಲ ಮೂರಕ್ಕೆ ನ್ಯಾಯ ಒದಗಿಸಬಲ್ಲ, ಆದ್ರೆ...ನಾಲ್ಕನೆಯದು...ಛೇ! ಅದು ಸ್ವಲ್ಪ ಕಷ್ಟ ಬಿಡಿ !!












Click it and Unblock the Notifications