ತುಲಾ ಮತ್ತು ವೃಶ್ಚಿಕ ರಾಶಿ ಗುಣಸ್ವಭಾವ

* ಧವಳ
ತುಲಾ (Libra) ಸೆಪ್ಟೆಂಬರ್ 24 - ಅಕ್ಟೋಬರ್ 23 : ಗ್ರಹಗತಿಗಳ ಪಂಕ್ತಿಯಲ್ಲಿ ಏಳನೇ ಸ್ಥಾನದಲ್ಲಿರುವ ರಾಶಿ ತುಲಾ. ಈ ಏಳರ ವಿಷಯಕ್ಕೆ ಸಂಬಂಧಪಟ್ಟಂತೆ ಏಳು ಅಂದ್ರೆ ನಮ್ಮಲ್ಲಿ ಒಂದು ನಂಬಿಕೆ ಇದೆ, ಸಾಡೇ ಸಾಥ್, ಏಳರಾಟದ ಶನಿಕಾಟ. ಹೀಗೆ ಅನೇಕ ರೀತಿ ಆ ಸಂಖ್ಯೆಯ ಬಗ್ಗೆ ಕೇವಲವಾಗಿ ಮಾತಾಡ್ತಾರೆ, ಆದರೆ ಎಲ್ಲರೂ ಅಲ್ಲ. ಕನ್ನಡದಲ್ಲಿ ಏಳು ಅನ್ನುವ ಪದ ಎದ್ದೇಳು, ಹೊರಡು, ಯಶಸ್ವಿಯಾಗು, ಗೆಲುವು ಕಾಣು ಎನ್ನುವ ಅರ್ಥವನ್ನು ಹೇಳುತ್ತದೆ.
ಸೊ ಈ ರಾಶಿಯವರು ಜನಪ್ರಿಯರು, ಗೆಲುವಿನ ಪತಾಕೆ ಹಾರಿಸುವುದರಲ್ಲಿ ನಿಸ್ಸೀಮರು ಎಂದು ವಿಶೇಷವಾಗಿ ಬಿಡಿಸಿ ಹೇಳಬೇಕಾಗಿಲ್ಲ. ತುಲಾ ಅಂದ್ರೆ ತಕ್ಕಡಿ, ಎರಡೂ ಕಡೆ ಸಮನಾದ ಪ್ರಪೋರ್ಶನ್ ಇದ್ದಾಗ ಮಾತ್ರ ಆ ತೂಕಕ್ಕೆ ಬೆಲೆ ಸಿಕ್ಕೋದು. ಆ ರೀತಿಯ ಅಂಶವೇ ಈ ರಾಶಿಯವರ ಬೆಸ್ಟ್ ಪಾಯಿಂಟ್. ತುಂಬಾ ಬ್ಯಾಲೆನ್ಸ್ದ್ ಸ್ವಭಾವ ಹೊಂದಿರುತ್ತಾರೆ. ಆದರೆ ಜೀ ಹುಜೂರ್ ಸ್ವಭಾವವೂ ಇವರ ಈ ಗುಣದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಹಾಗೂ ಸೈ, ಹೀಗೂ ಸೈ ಅನ್ನುವ ಗುಣವು ಕೆಲವು ಬಾರಿ ವರ್ಕೌಟ್ ಆಗಲ್ಲ.
ಹಾಗಂತ ಚಿಂತಿಸುವ ಅಗತ್ಯವಿಲ್ಲ ಈ ಜೀ ಹುಜೂರ್ ಗುಣವು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇವರು ಸದಾ ಚಿಯರ್ ಫುಲ್ಲಾಗಿರುತ್ತಾರೆ. ಇವರಿದ್ದ ಕಡೆ ಸದಾ ಖುಷಿ ಖುಷಿ! ಇತರರ ಮನಸ್ಸು ಇವರಿಗೆ ಛಕ್ಕಂತ ಅರ್ಥ ಆಗಿ ಬಿಡುತ್ತದೆ. ಅದಕ್ಕೆ ಹೊಂದಿಕೊಂಡು ಜೊತೆಗಾರರ ಮನವನ್ನು ಉಲ್ಲಾಸಿತರನ್ನಾಗಿ ಮಾಡುತ್ತಾರೆ. ಜನರ ಭಾವನೆಗಳಿಗೆ ಹೆಚ್ಚು ಆದ್ಯತೆ ನೀಡುವ ಇವರು ಅದರಂತೆ ನಡೆಯುತ್ತಾರೆ. ಈ ಗುಣ ಅವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಡುತ್ತದೆ.
ಆಶಾವಾದ ಇವರ ಮತ್ತೊಂದು ಪ್ಲಸ್ ಪಾಯಿಂಟ್. ಈ ಸಂಗತಿಯಿಂದಲೂ ಇವರು ಜನರಿಗೆ ಹೆಚ್ಚು ಹೆಚ್ಚು ಹತ್ತಿರ ಆಗುತ್ತಾರೆ. ಕವಿ, ಲೇಖಕ, ಫ್ಯಾಶನ್ ಡಿಸೈನರ್ ಗಳು, ಇಂಟೀರಿಯರ್ ಡೆಕೊರೇಟರ್ ಗಳು, ಲಾಯರ್, ಸಿವಿಲ್ ಇಂಜಿನಿಯರ್, ಸಿವಿಲ್ ಸರ್ವಿಸ್, ಅಡ್ಮಿನ್ ಗಳು ಆಗಿದ್ರೆ ಸಖತ್ ಸಕ್ಸಸ್ ಪಡೆಯಬಹುದು. ಇಷ್ಟೆಲ್ಲಾ ಒಳ್ಳೆಯ ಅಂಶ ಹೊಂದಿರುವ ತುಲಾ ರಾಶಿಯವರು ನಿರ್ಣಯ ತೆಗೆದುಕೊಳ್ಳುವ ವಿಷಯದಲ್ಲಿ ಆಲಸಿಗರು. ಅದೇನೂ ಹೇಳ್ತಾರಲ್ಲ ಎಲ್ಲಾ ಜಾಣ ತುಸಾ ಕೋಣ ಅನ್ನುವ ಹಾಗೆ..ಬೆಪ್ಪು ತಕ್ಕಡಿ! ಈ ಗುಣ ಅವರ ಬದುಕಿನ ಮೇಲೆ ತುಂಬಾ ಪ್ರಭಾವ ಬೀರುತ್ತದೆ.
ವೃಶ್ಚಿಕ (Scorpio) ಅಕ್ಟೋಬರ್ 24 - ನವೆಂಬರ್ 22 : ಎರಡು ತಲೆಯೋ, ಕೈ ಅಥವಾ ಕಾಲೋ ಅಂತೂ ಸ್ವಲ್ಪ ವಿಚಿತ್ರ ಪ್ರಾಣಿ ಚೇಳು. ಅಡಿ ಕುಟುಕಿದರೆ ಏರುವ ವಿಷವು ಮನುಷ್ಯನನ್ನು ಸ್ವಲ್ಪ ಸಮಯ ನಿಷ್ಕ್ರಿಯಗೊಳಿಸುತ್ತದೆ ಆದರೂ ಮನುಷ್ಯನಿಗೇ ಆ ಜೀವದತ್ತ ವಿಶೇಷ ಆಕರ್ಷಣೆ. ಈ ರಾಶಿಯರ ವಿಶೇಷ ಅಂಶ ಚುಂಬಕ ಶಕ್ತಿಯಂತೆ ಜನರನ್ನು ಆಕರ್ಷಿಸುವುದು. ತುಂಬಾ ಗಾಢವಾಗಿ ಸೆಳೆಯುತ್ತದೆ ಇವರ ಸ್ವಭಾವ. ಮೊದಲೇ ತಿಳಿಸಿದಂತೆ ಇವರ ಗುಣವನ್ನು ಫಕ್ಕನೆ ಡಿಫೈನ್ ಮಾಡುವುದಕ್ಕೆ ಆಗದು. ಇವರು ಕೋಪದಿಂದ ವಿಖ್ಯಾತರು.
ತಾನಾಯಿತು ತನ್ನ ಪಾಡಾಯಿತು ಎಂದು ಸುಮ್ಮನೆ ಇರ್ತಾರೆ, ಆದ್ರೆ ಕೋಪ ಬಂದ್ರೆ ದೂರ್ವಾಸ ಮತ್ತು ಜಮದಗ್ನಿ ಇಬ್ಬರೂ ಇವರ ಮೈ ಮೇಲೆ ಬಂದು ಬಿಡ್ತಾರೆ. ಆಗ ವಾತಾವರಣ ಕುಲಗೆಟ್ಟು ಹಾಳಾಗಿ ಹೋಗುತ್ತದೆ. ನಾನು ಒಳ್ಳೆಯವರಿಗೆ ಒಳ್ಳೆಯವ, ಕೋಪ ಬಂದ್ರೆ ನೋಡು ಮುಖ ಮೂತಿ ನೋಡಲ್ಲ ಅಂತ ಮತ್ತೆಮತ್ತೆ ತಮಗೆ ಸಂಬಂಧಪಟ್ಟವರ ಬಳಿ ಹೇಳ್ತಾ ಇರ್ತಾರೆ. ಈ ಕೋಪದ ಗುಣದಿಂದ ಅವರು ಶಾಶ್ವತವಾಗಿ ಶತ್ರುಗಳನ್ನು ಸೃಷ್ಟಿಸಿಕೊಳ್ತಾರೆ. ಈ ರಾಶಿಯವರ ಇಚ್ಛಾ ಶಕ್ತಿ ದೃಢವಾಗಿರುತ್ತದೆ. ಒಂದು ಸರ್ತಿ ನಿರ್ಧಾರ ತೆಗೆದುಕೊಂಡ್ರೆ ಹಿಂದೆ ಹೋಗಲ್ಲ.
ಗುಟ್ಟು ಗುಟ್ಟಾಗಿ ವಿಷಯಗಳನ್ನು ಬಚ್ಚಿಟ್ಟುಕೊಳ್ಳುವ ಸ್ವಭಾವ ಇವರದು, ಹೆದರುಪುಕ್ಲಗಳು. ಅವರ ಬಗ್ಗೆ ಎಷ್ಟೇ ಆಪ್ತರಾದವರು ಸರಿಯೇ ವಿಶ್ಲೇಷಣೆ ಮಾಡಿದ್ರೆ ಅದನ್ನು ಸ್ವೀಕರಿಸೋಕೆ ಇಷ್ಟ ಆಗಲ್ಲ. ವಿಚಿತ್ರ ಪ್ರಾಣಿ ಚೇಳಿನಂತೆ ವಿಭಿನ್ನ ಮನಸ್ಥಿತಿ. ವಾದಮಾಡುವ ಗುಣ. ಜೊತೆಗೆ ಗೆಲ್ಲಲೇಬೇಕೆಂಬ ಹಠಮಾರಿತನ ಜೊತೆಗೂಡಿರುತ್ತದೆ. ಗೆಲ್ಲುವ ಭರದಲ್ಲಿ ಏನುಬೇಕಾದರೂ ಮಾಡುವ ಮನಸ್ಥಿತಿ ಪಡೆದಿರುತ್ತಾರೆ. ಇವರಿಗೆ ಸಂಶೋಧನೆ, ಅನ್ವೇಷಣೆ, ವಿಶ್ಲೇಷಣೆ ಬಗ್ಗೆ ಸದಾ ಆಸಕ್ತಿ. ಸೊ, ಈ ಕ್ಷೇತ್ರಗಳು ಇವರದಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕೆಲಸದ ವಿಷಯದಲ್ಲಿ ಪರ್ಫೆಕ್ಟ್ ಆಗಿರುವ ಈ ವ್ಯಕ್ತಿತ್ವದವರ ಈ ಗುಣವು ಜೊತೆಗಾರರಿಗೆ ತುಂಬಾ ತಲೆನೋವು ತರಿಸುತ್ತದೆ. ಮೂತ್ರ ವಿಸರ್ಜನೆಯ ನಾಳದ ಊತ, ದೊಡ್ಡ ಕರುಳಿನ ಊತ ಹೆಚ್ಚು ಕಾಡುವ ಸಮಸ್ಯೆಗಳು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications