10,000 ಕೋಟಿ ರೂ. ಮೆಟಾ ಆಫರ್ ಬೇಡ ಎಂದ ವ್ಯಕ್ತಿ!
Daniel Francis: ಕೃತಕ ಬುದ್ಧಿಮತ್ತೆ ಬಳಕೆ (Artificial Intelligence) ವಿಶ್ವದಾದ್ಯಂತ ಹೆಚ್ಚಾಗುತ್ತಿದೆ. ಏರ್‌ಟೆಲ್ ಸೇರಿದಂತೆ ಕೆಲವೊಂದು ನೆಟ್‌ವರ್ಕ್ ಕಂಪನಿಗಳು ಸಹ ವಿಶೇಷವಾದ ಆಫರ್‌ಗಳನ್ನು ನೀಡುತ್ತಿವೆ. ಜನರನ್ನು ಸೆಳೆಯುವುದಕ್ಕೆ ಎಐ ಹೊಸ ಅನ್ವೇಷಣೆ ಅಥವಾ ವೇದಿಕೆಯನ್ನು ಕಲ್ಪಿಸಿದೆ ಅಂತಲೇ ಹೇಳಬಹುದು. ಈ ನಡುವೆ ಅಂಗೈನಲ್ಲೇ ಆಕಾಶ ತೋರಿಸುವ Artificial Intelligence ಕ್ಷೇತ್ರದಲ್ಲಿ 10 ಕೋಟಿಯ ವಿಚಾರವೊಂದು ಭಾರೀ ಚರ್ಚೆ ಆಗುತ್ತಿದೆ. ಹೌದು ಒಂದಲ್ಲ ಎರಡಲ್ಲ ಬರೋಬ್ಬರಿ 10 ಕೋಟಿ ರೂಪಾಯಿ ಕೊಟ್ಟರೂ ನಾನು ಆ ಕಂಪನಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ವ್ಯಕ್ತಿಯೊಬ್ಬರು ಭಾರೀ ದೊಡ್ಡ ಆಫರ್ ರಿಜಿಕ್ಟ್ ಮಾಡಿದ್ದಾರೆ. ಎಐ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಬಿಡುವುದಾದರೆ ಮುಂದೆ ಇನ್ನಷ್ಟು ಅವಕಾಶಗಳು ಸಿಗಲಿವೆ ಎಂದರ್ಥವೇ ಅಂತಾ ಚರ್ಚೆ ಶುರುವಾಗಿದೆ.
ಎಐ ಅಭಿವೃದ್ಧಿಯ ಭಾಗವಾಗುತ್ತಿದೆ. ಜಗತ್ತಿನಲ್ಲಿ ಎಐ ಇಲ್ಲದೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈ ರೀತಿ ಇರುವಾಗಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಡೇನಿಯಲ್ ಫ್ರಾನ್ಸಿಸ್ ಎನ್ನುವ ಎಐ ಅನುಭವಿಯೊಬ್ಬರು ಭಾರೀ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡೇನಿಯಲ್ ಭಾರೀ ಸುದ್ದಿಯಲ್ಲಿದ್ದಾರೆ. ಫೇಸ್‌ಬುಕ್ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಇದೀಗ ಎಐ ಹೊಸ ಮಾದರಿಯ ಬಳಕೆಗೆ ಫೇಸ್‌ಬುಕ್ ಮುಂದಾಗಿದೆ.

ಇದರ ಭಾಗವಾಗಿ ಹಲವು ಅನುಭವಿಗಳನ್ನು ಫೇಸ್‌ಬುಕ್ ತನ್ನ ಸಂಸ್ಥೆಗೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ. ಫೇಸ್‌ಬುಕ್ / ಮೆಟಾದ ಎಐಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಅಲ್ಲದೇ ಎಐನಲ್ಲಿ ಹಲವು ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮೆಟಾ ಮುಂದಾಗಿದೆ. ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಹೊಸ ತಂತ್ರಾಂಶ ಅಳವಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಇದೀಗ ಎಐಗಾಗಿ ನಾಲ್ಕು ವರ್ಷಗಳಿಗೆ 1.2 ಬಿಲಿಯನ್ ಡಾಲರ್ ಬರೋಬ್ಬರಿ 10,000 ಕೋಟಿ ರೂಪಾಯಿಗೂ ಹೆಚ್ಚು ಕೊಡುವ ಅವಕಾಶವಿದ್ದರೂ ಆ ವ್ಯಕ್ತಿ ಆಫರ್ ಒಪ್ಪಿಕೊಂಡಿಲ್ಲ.
ಡೇನಿಯಲ್ ಫ್ರಾನ್ಸಿಸ್ ಎಐ ತಜ್ಞನರಾಗಿದ್ದು ಭಾರೀ ಬೇಡಿಕೆ ಇದೆ. ಎಐನಲ್ಲಿ ಈ ಪರಿ ಹಣ ಸುರಿಯುವುದಕ್ಕೆ ಮೆಟಾ ಮುಂದಾಗಿರುವ ಹಿಂದೆ ದೊಡ್ಡ ಲೆಕ್ಕಾಚಾರಗಳು ಇವೆ ಎಂದೂ ಹೇಳಲಾಗುತ್ತಿದೆ. ಡೇನಿ ಅವರು ಅಮೆರಿಕ ಮೂಲದ ಟೆಕ್ ಕಂಪನಿ ಸ್ಥಾಪಕರಾಗಿದ್ದಾರೆ. ವಿಶೇಷವಾದ ಎಐ ಟೆಕ್ನಾಲಜಿ ಅಭಿವೃದ್ಧಿ ಮಾಡಿದ್ದು. ದೊಡ್ಡ ದೊಡ್ಡ ಸಂಸ್ಥೆಗಳು ಕೋಟ್ಯಾಂತರ ರೂಪಾಯಿ ನೀಡುವುದಕ್ಕೆ ಸಿದ್ಧವಾಗಿವೆ.












Click it and Unblock the Notifications