Microsoft Layoffs: ಮೈಕ್ರೋಸಾಫ್ಟ್ ಮಾರಾಟ ವಿಭಾಗಕ್ಕೆ AI ಎಂಟ್ರಿ, ನೌಕರರಿಗೆ ಗೇಟ್‌ಪಾಸ್...
Massive Layoffs New: ಟೆಕ್ ಕಂಪನಿಗಳ ಪೈಕಿ ದೈತ್ಯವಾದ ಮೈಕ್ರೋಸಾಫ್ಟ್ ಕಂಪನಿಯು (Microsoft) ತನ್ನ ನೌಕರರ ವಲಯದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದೆ. ಕಂಪನಿಯು ತನ್ನ ಮಾರಾಟ ವಿಭಾಗದ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡ ಮತ್ತೊಮ್ಮೆ ಬೃಹತ್ ಉದ್ಯೊಗ ಕಡಿತಕ್ಕೆ ಮುಂದಾಗಿದೆ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇದೇ ಜೂನ್ 30ರಂದು ನೌಕರರ ವಜಾ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ಘೋಷಿಸಲಿದೆ.
ಮೈಕ್ರೋಸಾಫ್ಟ್ ಅಧಿಕೃತ ವಜಾಗೊಳಿಸುವಿಕೆ ಬಗ್ಗೆ ಎಲ್ಲಿಯೂ ಪ್ರತಿಕ್ರಿಯಿಸಿಲ್ಲ. ಹಾಲಿ ಇರುವ ನೌಕರರ ವರ್ಗವನ್ನು ಮರು ಸಂಘಟನೆ ಮಾಡುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ. ಕಂಪನಿಯಲ್ಲಿ ಉದ್ಯೋಗ ವಜಾ ಇದೇನು ಮೊದಲಲ್ಲ. ಈ ಹಿಂದೂ ವಜಾಗೊಳಿಸಿದ್ದ ಕಂಪನಿಯು ಕೆಲವು ವಾರಗಳ ಹಿಂದಷ್ಟೇ ಅಂದರೆ ಮೇ ತಿಂಗಳಲ್ಲಿ ವಿವಿಧ ವಿಭಾಗದ ಸುಮಾರು 6,000 ನೌಕರರನ್ನು ಮನೆಗೆ ಕಳುಹಿಸಿತ್ತು.

ಉದ್ಯೋಗಿಗಳ ಜಾಗಕ್ಕೆ AI ತಂತ್ರಜ್ಞಾನ..
ಅದಾಗಿ ಒಂದು ತಿಂಗಳ ಅಂತರದಲ್ಲಿ ಮತ್ತೆ ಉದ್ಯೋಗ ವಜಾಗೆ ಮುಂದಾಗಿದೆ. ಶೇಕಡಾ ಮೂರರಷ್ಟು ಕಾರ್ಯ ಪಡೆಗೆ ಗೇಟ್ ಪಾಸ್ ನೀಡಲು ಯೋಜಿಸಿದೆ. ಈ ನಿರ್ಧಾರವು ನೇರವಾಗಿ ಮಾರಾಟ ವಿಭಾಗದ ಮೇಲೆ ಬೀಳುತ್ತದೆ. AI ತಂತ್ರಜ್ಞಾನ ತನ್ನ ಕಂಪನಿಯ ಭಾಗವಾಗಲಿದ್ದು, ಅದರ ಪರಿಣಾಮವಾಗಿ ಉದ್ಯೋಗ ವಜಾಗೆ ಮುಂದಾಗಿದೆ ಎನ್ನಲಾಗಿದೆ.
ಸರಿಯಾಗಿ ಈ ಜೂನ್ ತಿಂಗಳಿಗೆ ಒಂದು ವರ್ಷದ ಹಿಂದೆ (2024 ಜೂನ್) ಒಟ್ಟು ಸುಮಾರು 2.28 ಲಕ್ಷ ಜನರನ್ನು ನೇಮಕ ಮಾಡಿಕೊಂಡಿದ್ದ ಮೈಕ್ರೋಸಾಫ್ಟ್ ಕಂಪನಿಯು ಸುಮಾರು 45,000 ಜನರು ಮಾರಾಟ ಮತ್ತು ಮಾರ್ಕೆಟಿಂಗ್‌ನಲ್ಲಿ ವಿಭಾಗಕ್ಕೆ ನಿಯೋಜಿಸಿತ್ತು. ಕೆಲವು ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕಾಲಿಟ್ಟಿದೆ. ನೌಕರರ ಕೆಲಸದ ಜಾಗದಲ್ಲಿ ಎಐ ತಂದು ಕೂರಿಸಲು ಮೈಕ್ರೋಸಾಫ್ಟ್ ಪ್ಲಾನ್ ಮಾಡಿಕೊಂಡಿದೆ. ಮೈಕ್ರೋಸಾಫ್ಟ್‌ನ ಕೆಲವು ವಿಭಾಗಗಳನ್ನು ಮುಂದೆ ಎಐ ಪ್ರತಿನಿಧಿಸಲಿದೆ.
ಮೈಕ್ರೋಸಾಫ್ಟ್ ತನ್ನ ವ್ಯಾಪ್ತಿಯಲ್ಲಿ AI-ವರ್ಧಿತ ವಿಧಾನಗಳ ಮೂಲಕ ಚುರುಕು ಕೆಲಸ ಮಾಡಲಿದೆ. ಈ ಹಿಂದಿನ ಕಾರ್ಯ ವಿಧಾನ ಮರು-ಮೌಲ್ಯಮಾಪನ ಮಾಡುತ್ತಿದೆ. AI ನಾವೀನ್ಯತೆ ಪ್ರಯಾಣ ಹೆಚ್ಚಿಸಲಿದೆ. ಓಪನ್‌ಎಐನಲ್ಲಿ ಕಂಪನಿಯ ಹೆಚ್ಚಿನ ಹೂಡಿಕೆ ಹೊಂದಿದೆ. ಉತ್ಪಾದಕ AI ಕ್ರಾಂತಿಯ ಮುಂಚೂಣಿಯಲ್ಲಿರುಲು ನಿರ್ಧರಿಸಿದೆ. ಮೈಕ್ರೋಸಾಫ್ಟ್ ಹೆಚ್ಚಾಗಿ ಸುವ್ಯವಸ್ಥಿತ ಹಾಗೂ AI ಕಾರ್ಯಚರಣೆಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಉದ್ಯೋಗ ವಜಾಗೆ ಮುಂದಾಗಿದೆ.












Click it and Unblock the Notifications