Artificial Intelligence: ಮಾರ್ಕೆಟಿಂಗ್-ಸೇಲ್ಸ್ ಕ್ಷೇತ್ರಗಳ ಮೇಲೆ 'ಎಐ' ಪ್ರಭಾವ, ಅಧ್ಯಯನ ಹೇಳುವುದೇನು?
Artificial Intelligence: ಕೃತಕ ಬುದ್ಧಿಮತ್ತೆಯು (ಎಐ) ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿದೆ. ಇದು ವೃತ್ತಪರರಲ್ಲಿ ಆತಂಕವನ್ನು ಸೃಷ್ಟಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮಾರ್ಕೆಟಿಂಗ್ ಮತ್ತು ಸೇಲ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರ ಮೇಲೆ 'ಎಐ' ಹೆಚ್ಚು ಪರಿಣಾಮ ಬೀರುತ್ತಿದೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ. ಈ ಅಧ್ಯಯನವನ್ನು ಮೈಕ್ರೋಸಾಫ್ಟ್‌ನ 'ಬಿಂಗ್ ಕೋಪೈಲಟ್' ಕೈಗೊಂಡಿದೆ. ಅಧ್ಯಯನದ ಪ್ರಮುಖ ಅಂಶಗಳನ್ನು ತಿಳಿಯಲು ಈ ಲೇಖನವನ್ನು ಓದಿ...
ಜನವರಿ 2024ರಿಂದ ಸೆಪ್ಟೆಂಬರ್ 2024ರ ನಡುವೆ 'ಬಿಂಗ್ ಕೋಪೈಲಟ್' ಅಧ್ಯಯನವನ್ನು ಕೈಗೊಂಡಿದೆ. 2 ಲಕ್ಷ ಬಿಂಗ್ ಕೋಪೈಲಟ್ ಬಳಕೆದಾರರ ಅನುಮೋದಿತ (ಅನಾಮಧೇಯ) ಚರ್ಚೆಗಳನ್ನು ವಿಶ್ಲೇಷಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.

ಮಾರ್ಕೆಟಿಂಗ್ ಹಾಗೂ ಸೇಲ್ಸ್‌ನಲ್ಲಿ ಎಐ ಪಾತ್ರ
'ಎಐ ಅಪ್ಲಿಕೆಬಿಲಿಟಿ ಸ್ಕೋರ್' ಎಂಬ ಮಾನದಂಡದ ಮೂಲಕ, ಮಾರ್ಕೆಟಿಂಗ್ ಹಾಗೂ ಸೇಲ್ಸ್ ಕೆಲಸಗಳಿಗೆ ಎಐ ಎಷ್ಟು ಉಪಯುಕ್ತವಾಗಿದೆ, ಕಾರ್ಯಕ್ಷಮತೆಯು ಎಷ್ಟು ತೀಕ್ಷ್ಣವಾಗಿದೆ ಎಂಬುದನ್ನು ತಿಳಿದುಕೊಳ್ಳಲಾಗಿದೆ.
ಅತಿಯಾಗಿ ಎಐ ಬಳಕೆ ಮಾಡಿಕೊಳ್ಳುತ್ತಿರುವ ಉದ್ಯೋಗಗಳು
- ಮಾರಾಟ ಪ್ರತಿನಿಧಿಗಳು (0.46)
- ಗ್ರಾಹಕ ಸೇವಾ ಪ್ರತಿನಿಧಿಗಳು (0.44)
- ಲೇಖಕರು ಮತ್ತು ಬರಹಗಾರರು (0.45)
- ತಂತ್ರಜ್ಞಾನ ಬರಹಗಾರರು (0.38)
- ಪಬ್ಲಿಕ್ ರಿಲೇಷನ್ಸ್ ತಜ್ಞರು (0.36)
- ಜಾಹೀರಾತು ಮಾರಾಟ ಏಜೆಂಟರು (0.36)
- ಮಾರ್ಕೆಟಿಂಗ್ ವಿಶ್ಲೇಷಕರು (0.35)
ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಕೆಟಿಂಗ್ ಹಾಗೂ ಸೇಲ್ಸ್ ಉದ್ಯೋಗಗಳು ಎಐನಿಂದ ಅತಿಹೆಚ್ಚು ಪ್ರಭಾವಿತವಾಗಿವೆ ಎಂಬುದು ಅಧ್ಯಯನದಿಂದ ಕಂಡುಬಂದಿದೆ.
ಈ ಕ್ಷೇತ್ರಗಳಲ್ಲಿ ಎಐನ ಕಾರ್ಯಗಳೇನು?
- ಮಾಹಿತಿ ಸಂಗ್ರಹ
- ಕಂಟೆಂಟ್ ರೈಟಿಂಗ್ ಹಾಗೂ ಎಡಿಟಿಂಗ್
- ಇತರರಿಗೆ ಮಾಹಿತಿ ನೀಡುವುದು
- ವೃತ್ತಿ ಕ್ಷೇತ್ರಗಳ ಅಧ್ಯಯನದಲ್ಲಿ ಸಹಾಯ ಮಾಡುವುದು
- ದೃಶ್ಯ ವಿನ್ಯಾಸ ಮತ್ತು ಸೃಜನಾತ್ಮಕ ಕೆಲಸಗಳು
- ತಾಂತ್ರಿಕ ಡೇಟಾ ವಿಶ್ಲೇಷಣೆ
ಶಿಕ್ಷಣ, ವೇತನ ಮತ್ತು ಉದ್ಯೋಗ ಭದ್ರತೆ
ಎಐ ಮತ್ತು ವೇತನಗಳ ನಡುವೆ ನೇರ ಸಂಬಂಧವಿದೆ ಎಂಬುದನ್ನು ಬಳಕೆದಾರರು ಹೇಳಿದ್ದಾರೆ. ಹೆಚ್ಚು ಅಥವಾ ಕಡಿಮೆ ವೇತನಕ್ಕೆ ಸಂಬಂಧಿಸದ ಕೆಲಸಗಳ ಸ್ವರೂಪವನ್ನೇ ಎಐ ಬದಲಾಯಿಸುತ್ತಿದೆ ಎಂಬುದು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಬ್ಯಾಚುಲರ್ ಪದವೀಧರ ಉದ್ಯೋಗಗಳಿಗೆ ಎಐ ಬಳಕೆಯ ಸರಾಸರಿ ಸ್ಕೋರ್ (0.27), ಕೆಳ ಹಂತದ ಶಿಕ್ಷಣಕ್ಕೆ ಸಂಬಂಧಿಸಿದ ಉದ್ಯೋಗಗಳ (0.19) ರಷ್ಟಾಗಿದೆ. ಅಂದರೆ, ಎಐ ಹೆಚ್ಚು ಪ್ರಭಾವ ಬೀರುತ್ತಿರುವುದು ಜ್ಞಾನಾಧಾರಿತ ಉದ್ಯೋಗಗಳ ಮೇಲೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ನೀವು ಏನು ಮಾಡಬಹುದು?
ನಿಮ್ಮ ಉದ್ಯೋಗಗಳನ್ನು 'ಎಐ' ಕಿತ್ತುಕೊಳ್ಳುವುದಿಲ್ಲ. ಆದರೆ, ನಿಮ್ಮ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಬದಲಿಸುತ್ತದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. 'ಎಐ' ಬಳಕೆಗೆ ಸಂಪೂರ್ಣವಾಗಿ ಸಿದ್ದರಾಗುವುದು ಅನಿವಾರ್ಯವಾಗಿದೆ.












Click it and Unblock the Notifications