ChatGPT ಹೊಸ ಮಾದರಿ GPT-5 ಬಳಕೆದಾರರಿಗೆ ಉಚಿತ: ಏನೆಲ್ಲಾ ವಿಶೇಷತೆಗಳಿವೆ?
GPT-5: ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿ ಆಗುತ್ತಿದೆ. ಅದರಲ್ಲೂ ಎಐ ಇದೀಗ ಎಲ್ಲಾ ಕ್ಷೇತ್ರಗಳಿಗೂ ಆವರಿಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗೆಯೇ ಇದೀಗ ಎಐ ಭಾಗವಾದ ಚಾಟ್ ಜಿಪಿಟಿ ಬಳಕೆದಾರರಿಗೆ ಉಚಿತವಾಗಿ ಹೊಸ ಮಾದರಿಯನ್ನು ಪರಿಚರಿಸಿದೆ. ಹಾಗಾದ್ರೆ ಇದರ ವಿಶೇಷತೆಗಳು ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾವುದಾದರೂ ಒಂದು ವಿಷಯದ ಕುರಿತು ಮಾಹಿತಿ ಸಂಗ್ರಹಿಸ ಮಾಡಲು ಹೆಚ್ಚಿನ ಜನರು ಎಐ ಭಾಗವಾದ ಚಾಟ್ ಜಿಪಿಟಿ ಬಳಕೆ ಮಾಡುತ್ತಿದ್ದರೆ. ಇದರ ಬಳಕೆದಾರರ ಸಂಖ್ಯೆ ದಿನದಿಂದ ದಿನದಕ್ಕೆ ಹೆಚ್ಚಾಗುತ್ತಲಿದ್ದು, ಈ ಮೂಲಕ ಪ್ರಸಿದ್ಧಿ ಪಡೆಯುತ್ತಲಿದೆ. ಇದೀಗ ಇದರ ಹೊಸ ಮಾದರಿಯನ್ನು ಪರಿಚಯಿಸಲಾಗಿದ್ದು, ಬಳಕೆದಾರರಿಗೆ ಉಚಿತವಾಗಿದೆ. ಮೊದಲಿಗೆ ಇದ್ದ ಚಾಟ್ ಜಿಪಿಟಿ ಕೂಡ ಉಚಿತವಾಗಿತ್ತು. ಆದರೆ, ಹೊಸ ಮಾದರಿ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡಿದೆ.

ChatGPTಯ ಹೊಸ ಮಾದರಿ: ಚಾಟ್ ಜಿಪಿಟಿಯ ಹೊಸ ಮಾದರಿ GPT-5 ಆಗಿದೆ. ಇದನ್ನು ಬಳಕೆದಾರರಿಗೆ ಮಿತಿಯೊಂದಿಗೆ ಉಚಿತವಾಗಿ ನೀಡಲಾಗಿದೆ. ಹಿಂದಿನ ಮಾದರಿಗಿಂತ ಇದು ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡಿದೆ. ಇದರಲ್ಲಿ ಬಳಕೆದಾರರು ಹೊಸ ಕೋಡಿಂಗ್, ಗಣಿತದ ಪ್ರಶ್ನೆಗೆ ಉತ್ತರ, ಯಾವುದೇ ವಿಷಯದ ಕುರಿತು ಮಾಹಿತಿ, ಆರೋಗ್ಯ ಸಂಭಧಿತ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಬಹುದು.
ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಅತೀ ವೇಗವಾಗಿ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಆರ್ಟಿಫಿಯಲ್ ಇಂಟೆಲಿಜೆನ್ಸ್ (AI) ವಲಯದಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ. ಎಐ ತಂತ್ರಜ್ಞಾನ ವಲಯದಲ್ಲಿ ಯುಎಸ್ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆ ಆಗಿದೆ. ಇಲ್ಲಿನ ಜನರು AI ಅನ್ನು ಅಷ್ಟರ ಮಟ್ಟಿಗೆ ಅವಲಂಬಿಸಿ ಹೊಸ ಯೋಜನೆಗಳನ್ನ ರೂಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಅಂತಲೂ ಬಣ್ಣಿಸಿದ್ದಾರೆ.
GPT-5 ಅನ್ನು ಉಚಿತವಾಗಿ ಬಳಸುವ ವಿಧಾನಗಳು
* ಮೊದಲು ChatGPT ಸೈನ್ ಅಪ್ ಅಥವಾ ಲಾಗಿನ್ ಮಾಡಿ.
* GPT-5 ಎಂದು ಬರಕಿದ್ದು, ಅಲ್ಲಿ ಚಾಟ್ ಮಾಡಲು ಪ್ರಾರಂಭಿಸಿ
* ಯಾವುದಾರೂ ಪ್ರಶ್ನೆ ಅಥವಾ ಪ್ರಾಂಪ್ಟ್‌ಗಳನ್ನು ನೀಡಿ ಉತ್ತ ಪಡೆಯಬಹುದು
ಭಾರತಕ್ಕಾಗಿ AI ಅನ್ನು ಸುಧಾರಿಸಲು ಮತ್ತು ಅದನ್ನು ಹೆಚ್ಚು ಜನರಿಗೆ ಕೈಗೆಟುಕುವಂತೆ ಮಾಡಲು ಓಪನ್‌ಐ ಸ್ಥಳೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದರು. ನೀವು GPT-5 ಅನ್ನು ಉಚಿತವಾಗಿ ಬಳಸಬಹುದು. ಆದರೆ, ಬಳಕೆಗೆ ಮಿತಿ ಇರುತ್ತದೆ. ಆಗ ನೀವು ನೀವು ಪ್ರೊ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬಹುದು ಅಂತಲೂ ತಿಳಿಸಿದ್ದಾರೆ.
GPT 5 ಬಳಕೆ ಪ್ರಯೋಜನಗಳು, ವಿಶೇಷತೆಗಳು
* ಬಳಕೆದಾರರು ಹೊಸ ಕೋಡಿಂಗ್, ಗಣಿತದ ಪ್ರಶ್ನೆಗೆ ಉತ್ತರ, ಆರೋಗ್ಯ ಸಂಬಂಧಿತ ಮಾಹಿತಿ ಸೇರಿದಂತೆ ಯಾವುದೇ ವಿಷಯದ ಮಾಹಿತಿಯನ್ನು ಪಡೆಯಬಹುದು
* ಇದು ವೇಗವಾಗಿ ನಿಖರವಾದ ಉತ್ತರಗಳನ್ನು ನೀಡುತ್ತದೆ
* ಮೆಸೇಜ್, ಫೋಟೋ ಮತ್ತು ವಾಯ್ಸ್ ಸೌಲಭ್ಯಗಳನ್ನು ಹೊಂದಿದೆ
* ಹೆಚ್ಚೆಚ್ಚು ಮಾಹಿತಿಯನ್ನು ವೇಗವಾಗಿ ಪಡೆಯಬಹುದು
* ಸೀಮಿತ ಬಳಕೆಗೆ ಮಾತ್ರ ಇದು ಲಭ್ಯ ಇರುತ್ತದೆ












Click it and Unblock the Notifications