AI: ಭಾರತದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಿದ್ಧ ಕಲಿಕಾ ಶಿಕ್ಷಣ, ಎಐ ಕೌಶಲ್ಯ ಅಗತ್ಯ
ಬೆಂಗಳೂರು, ಸೆಪ್ಟಂಬರ್ 07: ಪ್ರತಿ ವರ್ಷವು ಭಾರತದಲ್ಲಿ ಲಕ್ಷಾಂತರ ಎಂಜಿನಿಯರಿಂಗ್ ಪದವೀಧರರು ತೇರ್ಗಡೆಯಾಗಿ ಹೊರಬರುತ್ತಾರೆ. ಆದರೆ ಕೇವಲರು ಮಾತ್ರ AI, ಡೇಟಾ ಸೈನ್ಸ್, ಮಷೀನ್ ಲರ್ನಿಂಗ್ ಕ್ಷೇತ್ರಗಳಲ್ಲಿ ಹೊಂದಿಕೊಂಡು ಕೆಲಸ ಮಾಡುತ್ತಾರೆ. ತಂತ್ರಜ್ಞಾನ ದಿನೇದಿನೇ ಬದಲಾಗುತ್ತಿರುವುದರಿಂದ, ಕಾಲೇಜು ಪಠ್ಯಕ್ರಮಗಳು ಅದಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಕಲಿಯುವ ವಿಷಯ ಮತ್ತು ಉದ್ಯಮಗಳಿಗೆ ಬೇಕಾಗುವ ಕೌಶಲ್ಯಗಳ ನಡುವೆ ಅಂತರ ಹೆಚ್ಚಾಗುತ್ತಿದೆ.
AI ನಿಂದ ಭವಿಷ್ಯವಲ್ಲ ಎಂದು ಹೇಳಲಾಗುತ್ತಿದೆ. ಎಐ ತಂತ್ರಜ್ಞಾನ ಈಗಾಗಲೇ ಕೆಲಸದ ಸ್ಥಳದಲ್ಲಿ ಬಳಕೆ ಆಗುತ್ತಿದೆ ಎಂದು ಸ್ಕೇಲರ್ ಮತ್ತು SST (Scaler School of Technology) ಸಹ-ಸ್ಥಾಪಕ ಅಂಶುಮಾನ್ ಸಿಂಗ್ ಹೇಳಿದ್ದಾರೆ. ಯಾವುದೇ ರಂಗದಲ್ಲಿರುವ ವೃತ್ತಿಪರರು AI ಗಿಂತ ಒಂದು ಹೆಜ್ಜೆ ಮುಂದೆ ಇರಬೇಕು. ಅದಕ್ಕಾಗಿ ನೀವು ಹೊಸ ಹೊಸ ವಿಷಯಗಳನ್ನು ಕಲಿಯಬೇಕು, ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಉದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.

ಎಸ್‌ಎಸ್‌ಟಿ ಪಠ್ಯಕ್ರಮವು ಗೂಗಲ್, ಅಮೆಜಾನ್, ಉಬರ್ ಮುಂತಾದ ಕಂಪನಿಗಳ ನೂರಕ್ಕೂ ಹೆಚ್ಚು ತಜ್ಞರ ಸಲಹೆಯಿಂದ ನಿರಂತರವಾಗಿ ನವೀಕರಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಕೇವಲ ಸೈದ್ಧಾಂತಿಕ ಜ್ಞಾನವಲ್ಲ, ನೈಜ ಉದ್ಯಮದಲ್ಲಿ ಬಳಕೆಯಾಗುವ ಸಾಧನಗಳ ಬಗ್ಗೆಯು ತಿಳಿದುಕೊಳ್ಳುತ್ತಾರೆ. ಅದರ ಬಗ್ಗೆ ಈಗಾಗಲೇ ಫಲಿತಾಂಶ ಏನೆಂಬುದು ಗೊತ್ತಾಗಿದೆ. SST ಯ ಮೊದಲ ಬ್ಯಾಚ್‌ಗೆ ಶೇಕಡಾ 96.3 ಇಂಟರ್ನ್‌ಶಿಪ್ ನಿಯೋಜನೆ ದರ ಸಿಕ್ಕಿದೆ. ಬಹುತೇಕರು AI-ಕೇಂದ್ರಿತ ಹುದ್ದೆಗಳನ್ನು ಪಡೆದಿದ್ದಾರೆ. ಗರಿಷ್ಠ ಸ್ಟೈಪೆಂಡ್ ತಿಂಗಳಿಗೆ ₹2,00,070 ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ.
ಅಂಶುಮಾನ್ ಸಿಂಗ್ ಅವರ ಪ್ರಕಾರ, ಪಠ್ಯಕ್ರಮಗಳನ್ನು ಸರ್ಕಾರದ ನಿಯಮಗಳ ಕಾರಣದಿಂದ ತ್ವರಿತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಉದ್ಯಮ-ಸಂಯೋಜಿತ ಕಾರ್ಯಕ್ರಮಗಳು ಬೇಗನೇ ನವೀಕರಿಸುತ್ತವೆ. ವಿದ್ಯಾರ್ಥಿಗಳು ಸೈದ್ಧಾಂತಿಕ ಜ್ಞಾನ ಹೊಂದಿದ್ದರೂ, ಕಾರ್ಯಗತ ಅನುಭವವಿಲ್ಲ. ಅದನ್ನು ಎಸ್‌ಎಸ್‌ಟಿ ನೈಜ ಪ್ರಾಜೆಕ್ಟ್‌ಗಳ ಮೂಲಕ ತುಂಬಲಾಗುತ್ತದೆ ಎಂದು ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಗಳು ಉದ್ಯಮಕ್ಕೆ ಬೇಕಾದ ಸಾಧನ ಮತ್ತು ಪ್ರಾಜೆಕ್ಟ್‌ಗಳನ್ನು ಹೆಚ್ಚು ಸೇರಿಸಿಕೊಳ್ಳಬೇಕು. ಕಂಪನಿಗಳು ಹೆಚ್ಚಿನ ಇಂಟರ್ನ್‌ಶಿಪ್ ನೀಡಬೇಕು, ಸರ್ಕಾರ ಸಹಾಯಧನ ಹಾಗೂ ಗುರುತಿನ ಮೂಲಕ ಉತ್ತೇಜಿಸಬೇಕು. ನಮ್ಮ ವಿದ್ಯಾರ್ಥಿಗಳು ಪದವಿ ಪಡೆಯುವ ಹೊತ್ತಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಪೂರ್ಣ ಸಿದ್ಧರಾಗಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications