AI: ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಹತ್ವದ ಬದಲಾವಣೆ, ಕಾರಣವೇನು ?
AI: ಬೆಂಗಳೂರು ಎಐ ಬಳಕೆಯ ವಿಚಾರದಲ್ಲೂ ಮುಂಚೂಣಿಯಲ್ಲಿದೆ. ದೇಶದ ಐಟಿ ರಾಜಧಾನಿ ಎನ್ನುವ ಖ್ಯಾತಿಯನ್ನು ಗಳಿಸಿರುವ ಬೆಂಗಳೂರು ಇದೀಗ ಎಐನಲ್ಲೂ ಮುಂಚೂಣಿಯಲ್ಲಿದೆ. ಬೆಂಗಳೂರಿನ ಸಿಗ್ನಲ್‌ಗಳಲ್ಲಿ ಎಐ ಬಳಕೆ ಮಾಡಿಕೊಂಡು ಹಲವು ಹೊಸ ಹಾಗೂ ಪ್ರಯೋಗಿಕವಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದೀಗ ಬೆಂಗಳೂರಿನ ಸಿಗ್ನಲ್‌ಗಳಲ್ಲಿ ಹಾರ್ಟ್ ಸಿಂಬಲ್ ಕಾಣಿಸುವ ಪ್ರಯೋಗ ಜಾರಿಯಲ್ಲಿದೆ. ನೀವು ಬೆಂಗಳೂರಿನಲ್ಲಿ ಗಾಡಿ ಓಡಿಸುವಾಗ ಈ ರೀತಿಯ ಸಿಗ್ನಲ್‌ಗಳು ನಿಮ್ಮ ಕಣ್ಣಿಗೂ ಬಿದ್ದಿರುವ ಸಾಧ್ಯತೆ ಇದೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಕೆಲವೊಂದು ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ರೆಡ್ ಸಿಗ್ನಲ್‌ನಲ್ಲಿ ಹಾರ್ಟ್ ಸಿಂಬಲ್ ಕಾಣಿಸಿಕೊಳ್ಳುತ್ತಿದೆ. ಟ್ರಾಫಿಕ್ ಸಿಗ್ನಲ್ ರೆಡ್‌ಗೆ ಬದಲಾದಾಗ ಈ ಹಾರ್ಟ್ ಸಿಂಬಲ್ ಕಾಣಿಸಿಕೊಳ್ಳುತ್ತಿದೆ. ಇದು ಐಟಿ ರಾಜಧಾನಿಯನ್ನು ಹಾರ್ಟ್ ಸ್ಮಾರ್ಟ್ ಸಿಟಿಯನ್ನಾಗಿ ಬದಲಾಯಿಸುವ ಮೊದಲ ಪ್ರಯತ್ನ ಅಥವಾ ಮೊದಲ ಹೆಜ್ಜೆಯಾಗಿದೆ.

ಬೆಂಗಳೂರಿನಲ್ಲಿ ಈ ಹೊಸ ಬದಲಾವಣೆಗಳು ಸಾರ್ವಜನಿಕರನ್ನು ಅಚ್ಚರಿಗೊಳಿಸಿದೆ. ನಗರದ ಟ್ರಾಫಿಕ್ ಸಿಗ್ನಲ್ ಹಾರ್ಟ್ ಸಿಗ್ನಲ್ ಮಾದರಿಯಲ್ಲಿ ಬದಲಾಗುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ. ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಈ ಹೊಸ ಮಾದರಿಯ ಸಿಗ್ನಲ್‌ಗಳ ಚಿತ್ರವನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇನ್ನೂ ಕೆಲವರು ಏನಿದು ಹೊಸ ಬದಲಾವಣೆ ಹಾಗೂ ಯಾಕೆ ಈ ರೀತಿ ಬದಲಾಗುತ್ತಿದೆ ಎಂದು ಅಚ್ಚರಿಗೆ ಒಳಗಾಗುತ್ತಿದ್ದಾರೆ.
ಈ ಹಾರ್ಟ್ ರೆಡ್ ಸಿಗ್ನಲ್ ಮಣಿಪಾಲ್ ಆಸ್ಪತ್ರೆ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ (ಬಿಬಿಎಂಪಿ) ಮತ್ತು ಬೆಂಗಳೂರು ಸಂಚಾರ ಪೊಲೀಸರ ಸಹಯೋಗದೊಂದಿಗೆ ಬೆದಲಾಗುತ್ತಿದೆ. ವಿಶ್ವ ಹೃದಯ ದಿನದ ಅಭಿಯಾನದ ಭಾಗವಾಗಿ ನಗರದಲ್ಲಿ 15 ಸಿಗ್ನಲ್‌ಗಳನ್ನು ಈ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರನ್ನು ಹಾರ್ಟ್ ಸ್ಮಾರ್ಟ್ ನಗರವಾಗಿಸಲು ಎಂದು ಬರೆಯಲಾಗಿದೆ. ಮಣಿಪಾಲ್ ಆಸ್ಪತ್ರೆಗಳು ಬೆಂಗಳೂರನ್ನು "ಹಾರ್ಟ್ ಸ್ಮಾರ್ಟ್ ಸಿಟಿ"ಯನ್ನಾಗಿ ಮಾಡುವ ಪ್ರಯತ್ನ ಇದಾಗಿದೆ. ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಆಡಿಯೊ ಸಂದೇಶಗಳು ಮತ್ತು ಕರೆ ಮಾಡಲು ಸಂಖ್ಯೆಯನ್ನು ಡಯಲ್ ಮಾಡುವ ಬದಲು ತುರ್ತು ಸೇವೆಗಳನ್ನು ಸುಲಭವಾಗಿ ಪ್ರವೇಶಿಸಲು QR ಕೋಡ್‌ಗಳನ್ನು ಸಹ ಜಾಗೃತಿಯ ಭಾಗವಾಗಿ ಹಂಚಿಕೊಳ್ಳಲಾಗಿದೆ.
ಹೊಸ ಬದಲಾವಣೆ: ಇನ್ನು ಬೆಂಗಳೂರಿನಲ್ಲಿ ಎಐ ಬಳಕೆ ಹೆಚ್ಚಾಗುತ್ತಿದ್ದು, ಇದೀಗ ಟ್ರಾಫಿಕ್ ಸಿಗ್ನಲ್ ಹೊಸ ಹಾಗೂ ಹಾರ್ಟ್ ಜಾಗೃತಿ ಮೂಡಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಈಚೆಗೆ ಎಐ ಬಳಕೆಯಿಂದ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ಗಳ ಹ್ಯಾಂಡಲ್ ಸಹ ಮಾಡಲಾಗುತ್ತಿತ್ತು. ಇದು ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಇಳಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಲಾಭ ಸಿಕ್ಕಿರಲಿಲ್ಲ.
-
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Bengaluru Second Airport: 5 ತಿಂಗಳಲ್ಲಿ ಬೆಂಗಳೂರು 2ನೇ ವಿಮಾನ ನಿಲ್ದಾಣ ಸ್ಥಳ ಫೈನಲ್: 3 ತಾಣಗಳಿಗೆ ಕಾರ್ಯಸಾಧ್ಯತಾ ವರದಿ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ











Click it and Unblock the Notifications