Artificial intelligence: ಎಐ ಬಳಕೆ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಬಹಿರಂಗಪಡಿಸಿದ ಖ್ಯಾತ ಸಂಗೀತ ನಿರ್ದೇಶಕ
Artificial intelligence: ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ಇದೀಗ ಎಐ ತನ್ನ ಜಾಲವನ್ನು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಣೆ ಮಾಡಿಕೊಳ್ಳುತ್ತಲಿದ್ದು, ಇದರಿಂದ ದೊಡ್ಡ ಬದಲಾವಣೆಗಳೇ ಆಗುತ್ತಿವೆ. ಈ ನಡುವೆಯೇ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಎಐ ಬಳಕ್ಕೆ ಬಗ್ಗೆ ಅಚ್ಚರಿ ಸಂಗತಿಯೊಂದನ್ನು ಹೊರಹಾಕಿದ್ದು, ಇದು ಭಾರೀ ಸದ್ದು ಮಾಡುತ್ತಿದೆ. ಹಾಗಾದ್ರೆ ಅದೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಗಮನಿಸಿ.
ಸಾಮಾನ್ಯವಾಗಿ ಎಐ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿ ಹವಾ ಸೃಷ್ಟಿಸಿದೆ. ಆದರೆ, ಈ ನಡುವೆಯೇ ಇದೀಗ ಖ್ಯಾತ ಸಂಗೀತ ನಿರ್ದೇಶಕರಿಬ್ಬರು ಎಐ ಬಳಕೆ ಬಗ್ಗೆ ಅಚ್ಚರಿ ಮಾಹಿತಿಯೊಂದನ್ನು ಮಾಧ್ಯವೊಂದಕ್ಕೆ ಸಂದರ್ಶನ ನೀಡುವಾಗ ಬಿಚ್ಚಿಟ್ಟಿದ್ದಾರೆ. ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಸಿನಿಮಾ, ಸಂಗೀತ ಕ್ಷೇತ್ರದಲ್ಲಿ ಸಹ ಎಐ (Artificial intelligence) ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಅದನ್ನು ಸ್ವತಃ ಅನಿರುದ್ಧ್ ರವಿಚಂದರ್ ಅವರೇ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ.
ಸ್ಟಾರ್ ನಟರ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ತುಂಬಾ ಪ್ರಸಿದ್ಧಿಯಾಗಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಸವರಿಗೆ ಅವರಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆಯೇ ಹೊರತು, ಕಡಿಮೆಯಂತೂ ಆಗುತ್ತಿಲ್ಲ. ಆದರೆ, ಇದೀಗ ಅವರು ಎಐ ಬಳಕೆ ಬಗ್ಗೆ ನೀಡಿರುವ ಹೇಳಿಕೆ ಎಲ್ಲೆಡೆ ಸೌಂಡ್ ಮಾಡುತ್ತಿದೆ.
ಜವಾನ್, ಜೈಲರ್, ಲಿಯೋ ಸೇರಿದಂತೆ ಹಲವು ಸಿನಿಮಾಗಳ ಹಾಡುಗಳನ್ನು ಕೇಳಿ ಅಭಿಮಾನಿಗಳಂತೂ ಇವರಿಗೆ ಫಿಧಾ ಆಗಿಬಿಟ್ಟಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಕೂಲಿ ಸಿನಿಮಾಗೂ ಸಂಗೀತ ನೀಡಿದ್ದು, ಈ ಸಿನಿಮಾ ಇದೇ ಆಗಸ್ಟ್ 14ರಂದು ತೆರೆಗೆ ಅಪ್ಪಳಿಸಲಿದೆ. ಈ ಹಿನ್ನೆಲೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಚಾಟ್ ಜಿಪಿಟಿ ಬಗ್ಗೆ ಮಾತನಾಡಿದ್ದು, ತಾವು ಸಗ ಎಐ ಬಳಕೆ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಕ್ರಿಯೇಟಿವ್ ಕೆಲಸದಲ್ಲಿ ಚಾಟ್ ಜಿಪಿಟಿ ಬಳುಸುವುದರಲ್ಲಿ ತಪ್ಪೇನಿಲ್ಲ ಇಲ್ಲ ಎಂದು ಅನಿರುದ್ಧ್ ರವಿಚಂದರ್ ಅವರು ಹೇಳಿದ್ದಾರೆ. ನಾನು ಚಾಟ್ ಜಿಪಿಟಿ ಓಪನ್ ಮಾಡಿದೆ. ಇದು ಪೂರ್ತಿ ಸಾಂಗ್. ಆದರೆ 2 ಸಾಲಿನಲ್ಲಿ ನಾನು ನಿಂತಿದ್ದೇನೆ. ಏನು ಮಾಡಲಿ ಅಂತಾ ಚಾಟ್ ಜಿಪಿಟಿಗೆ ಕೇಳಿದೆ. ಇದು ನಿಜ, ಪ್ರಾಮಾಣಿಕವಾಗಿ ಹೇಳುತ್ತೇನೆ. ಕೇವಲ 2 ದಿನಗಳ ಹಿಂದೆ ಈ ರೀತಿಯಾಯಿತು. ಚಾಟ್ ಜಿಪಿಟಿ ಪ್ರೀಮಿಯಮ್ ಸಬ್ಸ್ಕ್ರೈಬ್ ಮಾಡಿದ್ದೆ. ಮುಂದಿನ 2 ಸಾಲಿಗೆ ಕೆಲವು ಐಡಿಯಾ ಎಂದು ಚಾಟ್ ಜಿಪಿಟಿಗೆ ಕೇಳಿದೆ ಎಂದು ಅನಿರುದ್ಧ್ ರವಿಚಂದರ್ ಹೇಳಿದ್ದಾರೆ.
ಆಗ ಚಾಟ್ ಜಿಪಿಟಿ ನನಗೆ 10 ಲೈನ್‌ಗಳನ್ನು ನೀಡಿತು. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಹಾಡನ್ನು ಪೂರ್ಣ ಮಾಡಿದೆ ಎಂದು ಅನಿರುದ್ಧ್ ರವಿಚಂದರ್ ಅವರು ಹೇಳಿದ್ದಾರೆ. ಇದರಿಂದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಕಾಮೆಂಟ್‌ಗಳ ಸರಮಾಲೆಯೇ ಹರಿದುಬರುತ್ತಿದೆ. ಕೋಟಿ.. ಕೋಟಿ ಸಂಭಾವನೆ ಪಡೆದು ಹೀಗೆ ಮಾಡಿದರೆ ಹೇಗೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದ್ದಿದ್ದನ್ನೆ ಒಪ್ಪಿಕೊಂಡಿದ್ದೀರಾ.. ತುಂಬಾ ಖುಷಿಯಾಯಿತು ಎಂದು ಹೇಳಿದ್ದಾರೆ.












Click it and Unblock the Notifications