AI: ಎಐನಿಂದ ಎಲ್ಲ ಉದ್ಯೋಗ ಹೋಗುತ್ತೆ, ಜನ ತರಕಾರಿ ಬೆಳೆಯಬಹುದು: ಮಸ್ಕ್
ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯಿಂದಾಗಿ ಅನೇಕ ಉದ್ಯೋಗಗಳು ಖಾಲಿ ಆಗುತ್ತಿವೆ. ಲಕ್ಷಾಂತರ ಮಂದಿ ಈಗಾಗಲೇ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಬಹುತೇಕರು ಉದ್ಯೋಗಗಳು ಕಳೆದುಕೊಳ್ಳಲಿದ್ದಾರೆ ಎಂದು ಈಗಾಗಲೇ ಹಲವರು ಭವಿಷ್ಯವೂ ನುಡಿದಿದ್ದಾರೆ. ಇದೀಗ ಟೆಕ್ ಬಿಲಿಯನೇರ್, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡ ಆತಂಕಕಾರಿ ವಿಚಾರವೊಂದನ್ನು ತಿಳಿಸಿದ್ದಾರೆ. ಭವಿಷ್ಯದಲ್ಲಿ ಎಲ್ಲ ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳು ಆಕ್ರಮಿಸಿಕೊಳ್ಳುತ್ತವೆ. ಆಗ ಮಾನವರು ನಿಜವಾಗಿಯೂ ಕೆಲಸ ಮಾಡುವ ಅಗತ್ಯವಿಲ್ಲ, ಅವರು ಬಯಸಿದರೆ ತರಕಾರಿಗಳನ್ನು ಬೆಳೆಯಬಹುದು ಎಂದಿದ್ದಾರೆ.
ಅಮೆಜಾನ್‌ನ ಉದ್ಯೋಗಿಗಳನ್ನು ಎಐ ಮತ್ತು ರೋಬೋಟ್‌ಗಳಿಂದ ಬದಲಾಯಿಸುವ ಯೋಜನೆಗಳ ಕುರಿತು ಇತ್ತೀಚಿನ ವರದಿ ಕುರಿತು ಮಸ್ಕ್ ಈ ರೀತಿ ಉತ್ತರಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ಗೆ ಮಸ್ಕ್ ಉತ್ತರಿಸಿದ್ದಾರೆ. ಅಮೇಜಾನ್ 2027ರ ವೇಳೆಗೆ 1,60,000ಕ್ಕೂ ಹೆಚ್ಚು ಉದ್ಯೋಗಗಳನ್ನು ರೋಬೋಟ್‌ಗಳಿಂದ ಕಡಿತಗೊಳಿಸಲು ಯೋಜನೆ ಹಾಕಿಕೊಂಡಿದೆ. ಇದಕ್ಕೆ ಉತ್ತರಿಸಿರುವ ಮಸ್ಕ್ AI ಮತ್ತು ರೋಬೋಟ್‌ಗಳು ಎಲ್ಲ ಉದ್ಯೋಗಗಳನ್ನು ಕಸಿಯಲಿವೆ ಎಂದು ನೇರವಾಗಿ ಹೇಳಿದ್ದಾರೆ.

ಕೆಲಸ ಮಾಡುವುದು ಆಯ್ಕೆ
ಕತ್ತಲೆಯಾದ ಭವಿಷ್ಯದ ಬದಲು, ಮಾನವೀಯತೆಯು ಪ್ರತಿದಿನ ಕೆಲಸ ಮಾಡಲು ಒತ್ತಾಯಿಸಲ್ಪಡುವುದರಿಂದ ಅದರಿಂದ ಮುಕ್ತವಾಗಲು ಇದು ಒಂದು ಅವಕಾಶವೆಂದು ಮಸ್ಕ್ ಹೇಳಿದ್ದಾರೆ. ಪ್ರತಿಯೊಂದು ಕೆಲಸವನ್ನು ಎಐ ತೆಗೆದುಕೊಳ್ಳುತ್ತದೆ. ಮಾನವರು ತರಕಾರಿಗಳನ್ನು ಅಂಗಡಿಯಿಂದ ಖರೀದಿಸಿ ತರುವ ಬದಲು, ಅದನ್ನು ತಾವೇ ಬೆಳೆಯಲು ಮುಕ್ತರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಎಐ, ರೋಬೋಟ್‌ಗಳು ಎಲ್ಲ ಉದ್ಯೋಗಗಳನ್ನು ಬದಲಿಸಲಿದೆ. ಆಗ ಕೆಲಸ ಮಾಡುವುದು ಒಂದು ಆಯ್ಕೆಯಾಗುತ್ತದೆ. ಆಗ ತರಕಾರಿಯನ್ನು ಅಂಗಡಿಯಿಂದ ಖರೀದಿಸುವ ಬದಲಿಗೆ ತಾವೇ ತರಕಾರಿಗಳನ್ನು ಬೆಳೆಸಿಕೊಳ್ಳುವಂತಾಗುತ್ತದೆ. ವ್ಯಕ್ತಿಗಳು ಬದುಕಲು ಕೆಲಸ ಮಾಡಬೇಕಾದ ಬಾಧ್ಯತೆ ಇನ್ನು ಉಳಿಯುವುದಿಲ್ಲ. ಬದಲಿಗೆ ಕೆಲಸ ಮಾಡುವುದು ವೈಯಕ್ತಿಕ ಇಚ್ಛೆಯಿಂದ ಮಾತ್ರ ನಡೆಯಲಿದೆ ಎಂದಿದ್ದಾರೆ.
ನಾವೆಲ್ಲರೂ ನಮ್ಮ ಜೀವನವನ್ನು ಉಳಿಸಿಕೊಳ್ಳಲು ಹಣ ಸಂಪಾದಿಸಲು ಕೆಲಸ ಮಾಡುತ್ತೇವೆ. ಎಐನಿಂದ ಉದ್ಯೋಗ ನಷ್ಟವಾಗುವ ಭಯಕ್ಕೆ ಇದು ಮುಖ್ಯ ಕಾರಣವಾಗಲಿದೆ. ಮುಂದೆ ಎಐ ಇದ್ದರೆ, ಕೆಲಸ ಮಾಡುವುದು ಮನುಷ್ಯರಿಗೆ ಆಯ್ಕೆಯಾಗಿರಲಿದೆ ಎಂದೂ ಮಸ್ಕ್ ಉಲ್ಲೇಖಿಸಿದ್ದಾರೆ. ಜಗತ್ತು "ಸಾರ್ವತ್ರಿಕ ಹೆಚ್ಚಿನ ಆದಾಯ" ಹೊಂದಿರುತ್ತದೆ. ಮೂಲಭೂತವಾಗಿ ಭವಿಷ್ಯದಲ್ಲಿ ಎಐ ಎಲ್ಲ ಉದ್ಯೋಗಗಳನ್ನು ವಹಿಸಿಕೊಂಡಾಗ, ಮಾನವರು ಹೆಚ್ಚಿನ ಆದಾಯದ ಮಟ್ಟವನ್ನು ಹೊಂದಿರುತ್ತಾರೆ. ಅದು ಕೆಲಸ ಮಾಡದೆಯೇ ತಮ್ಮ ಜೀವನಶೈಲಿಯನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದೂ ಹೇಳಿದ್ದಾರೆ.
ಎಐ ಎಲ್ಲ ಕೆಲಸಗಳನ್ನು ಮಾಡುವ ಮತ್ತು ಮಾನವರು ಜೀವನವನ್ನು ಸರಳವಾಗಿ ಆನಂದಿಸಬಹುದಾದ ಜಗತ್ತು ನಿರ್ಮಿಸಲಿದೆ. ಎಐನಿಂದ ಸರಕು ಮತ್ತು ಸೇವೆಗಳ ಕೊರತೆಯಿಲ್ಲದೆ, ಶೇಕಡಾ 80ರಷ್ಟು ಅವಕಾಶ ಇದೆ ಎಂದು ಹೇಳಿದ್ದರು. ವೈಯಕ್ತಿಕ ರೋಬೋಟ್‌ಗಳ ಮೂಲಕ ಇದನ್ನು ಸಾಧಿಸಬಹುದು. ಪ್ರತಿಯೊಬ್ಬ ಮನುಷ್ಯನೂ "ತಮ್ಮದೇ ಆದ ವೈಯಕ್ತಿಕ ರೋಬೋಟ್ ಹೊಂದಲಿದ್ದಾರೆ ಎಂದೂ ಭವಿಷ್ಯ ನುಡಿದಿದ್ದಾರೆ.












Click it and Unblock the Notifications