ಶಿಕ್ಷಣ ಸಚಿವಾಲಯದಿಂದಲೇ 5 ಉಚಿತ AI ಕೋರ್ಸ್‌, ಯಾರೆಲ್ಲ ಕಲಿಯಬಹುದು?

ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ವಿದ್ಯಾರ್ಥಿಗಳು ಕಲಿಕಾ ಹಂತದಲ್ಲೇ ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡಲು ಶಿಕ್ಷಣ ಸಚಿವಾಲಯ ಮುಂದಾಗಿದೆ. AI ಕೌಶಲ್ಯಗಳ ಬೇಡಿಕೆಯೊಂದಿಗೆ ವಿದ್ಯಾರ್ಥಿಗಳನ್ನು ಅಪ್‌ಗ್ರೇಡ್‌ ಮಾಡಲು ಶಿಕ್ಷಣ ಸಚಿವಾಲಯವು ಸ್ವಯಂ ಪೋರ್ಟಲ್‌ನಲ್ಲಿ ಉಚಿತ ಕೃತಕ ಬುದ್ಧಿಮತ್ತೆ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ಭವಿಷ್ಯದ ವೃತ್ತಿಜೀವನಕ್ಕೆ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಈ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಶಿಕ್ಷಣ ಸಚಿವಾಲಯವು ಈ ಸ್ವಯಂ ಪೋರ್ಟಲ್‌ನಲ್ಲಿ ಕೃತಕ ಬುದ್ಧಿಮತ್ತೆ ಕೋರ್ಸ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಇದು ಶಾಲಾ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಉಚಿತ ಆನ್‌ಲೈನ್ ಕಲಿಕಾ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಸದ್ಯ ವಿವಿಧ ಕೈಗಾರಿಕೆಗಳಲ್ಲಿ ಎಐಗೆ ಬೇಡಿಕೆ ಹೆಚ್ಚಾಗಿದ್ದು, ತಂತ್ರಜ್ಞಾನ ಹಾಗೂ ಸಂಶೋಧನೆಯಲ್ಲಿ ಭವಿಷ್ಯದ ವೃತ್ತಿಜೀವನಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಈ ಕೋರ್ಸ್‌ಗಳನ್ನು ಪರಿಚಯಿಸಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ swayam-plus.swayam2.ac.in ಮೂಲಕ ಈ ಕೋರ್ಸ್‌ಗಳನ್ನು ಕಲಿಯಬಹುದು.

education-ministry-offers-5-free-ai-courses-who-is-eligible

ಸ್ವಯಂ ಪೋರ್ಟಲ್‌ನಲ್ಲಿ ಲಭ್ಯವಿರುವ ಐದು ಉಚಿತ ಎಐ ಕೋರ್ಸ್‌ಗಳು ಹೀಗಿವೆ. ಎಐ ಬಳಸಿ ಪೈಥಾನ್, ಎಐ ಜೊತೆ ಕ್ರಿಕೆಟ್ ವಿಶ್ಲೇಷಣೆ, ಭೌತಶಾಸ್ತ್ರದಲ್ಲಿ ಎಐ, ಲೆಕ್ಕಪತ್ರ ನಿರ್ವಹಣೆ (ಅಕೌಂಟ್ಸ್‌) ಹಾಗೂ ರಸಾಯನಶಾಸ್ತ್ರದಲ್ಲಿ ಎಐ ಕುರಿತ ಕೋರ್ಸ್‌ಗಳಿವೆ. ಪೈಥಾನ್‌ನಲ್ಲಿ ಎಐ-ಈ ಕೋರ್ಸ್ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ, ಆಪ್ಟಿಮೈಸೇಶನ್ ಮತ್ತು ಡೇಟಾ ದೃಶ್ಯೀಕರಣದ ಮೇಲೆ ಕೇಂದ್ರೀಕರಿಸುತ್ತದೆ. ಇದು ಡೇಟಾ ಸೈನ್ಸ್‌ನಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದಾದ ಪೈಥಾನ್ ಅನ್ನು ಸಹ ಒಳಗೊಂಡಿದೆ. ಈ ಕೋರ್ಸ್‌ನ ಅವಧಿ 36 ಗಂಟೆ.

ಕ್ರಿಕೆಟ್ ವಿಶ್ಲೇಷಣೆ: ಐಐಟಿ ಮದ್ರಾಸ್ ಪ್ರಾಧ್ಯಾಪಕರು ನೀಡುವ ಈ ಕೋರ್ಸ್, ಕ್ರಿಕೆಟ್ ಅನ್ನು ಪ್ರಾಥಮಿಕ ಉದಾಹರಣೆಯಾಗಿಟ್ಟುಕೊಂಡು ಪೈಥಾನ್ ಬಳಸಿ ಕ್ರೀಡಾ ವಿಶ್ಲೇಷಣೆಯ ಮೂಲಭೂತ ಅಂಶಗಳನ್ನು ಕಲಿಸುತ್ತದೆ. ಇದರ ಅವಧಿ 25-ಗಂಟೆಗಳು.

ಭೌತಶಾಸ್ತ್ರ: ಈ ಕೋರ್ಸ್ ಎಐ ಸಹಾಯದಿಂದ ಭೌತಶಾಸ್ತ್ರದ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಒಳಗೊಂಡಿದೆ. ಪ್ರಾಯೋಗಿಕ ಉದಾಹರಣೆಗಳು ಮತ್ತು ಪ್ರಯೋಗಾಲಯದ ಅಂಶಗಳು ಕೂಡ ಒಳಗೊಂಡಿದ್ದು, ಈ ಕೋರ್ಸ್‌ನ ಅವಧಿ 45 ಗಂಟೆಗಳು.

ಅಕೌಂಟ್ಸ್‌: ಕಾಮರ್ಸ್‌ ಹಾಗೂ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಈ ಕೋರ್ಸ್‌ ರೂಪಿಸಲಾಗಿದ್ದು, ಲೆಕ್ಕಪತ್ರ ನಿರ್ವಹಣೆಯಲ್ಲಿ ಎಐ ಅನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ವಿವರಿಸುತ್ತದೆ. 45 ಗಂಟೆಗಳ ಈ ಕೋರ್ಸ್‌ಗೆ ಬಾರೀ ಬೇಡಿಕೆಯೂ ಇದೆ.

ರಸಾಯನಶಾಸ್ತ್ರ (ಕೆಮಿಸ್ಟ್ರಿ): ರಾಸಾಯನಿಕ ಡೇಟಾಸೆಟ್‌ಗಳನ್ನು ಬಳಸಿಕೊಂಡು ಈ ಕೋರ್ಸ್ ಎಐ ಮತ್ತು ಪೈಥಾನ್ ಮಾದರಿ ಪ್ರತಿಕ್ರಿಯೆಗಳು ಇದರಲ್ಲಿ ಸೇರಿವೆ. ಐಐಟಿ ಮದ್ರಾಸ್ ನೀಡುವ ಕೋರ್ಸ್‌ ಸುಮಾರು 45 ಗಂಟೆಗಳ ಕಾಲ ನಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+