AI ಬಂದ್ರೂ ಬಗೆಹರಿಯದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ: Video

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಇಂದು ನಿನ್ನೆಯದಲ್ಲ. ಈ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಅಲ್ಲದೆ ಹೈಟೆಕ್‌ ತಂತ್ರಜ್ಞಾನದ ಟಚ್ ನೀಡಲಾಗಿತ್ತು. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತದೆ ಎಂಬ ಮಾತುಗಳು ಇದ್ದವು. ಆದರೆ AI ಬಂದ್ರೂ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಲೆ ಇದೆ.

ಬೆಂಗಳೂರಿನ ಯಾವುದೇ ರಸ್ತೆಗಳಲ್ಲಿ ಇಳಿದ್ರೂ ದೂರ ದೂರ ಟ್ರಾಫಿಕ್. ಇದನ್ನು ಬಗೆಹರಿಸಲು ಅಟೋಮೆಟಿಕ್‌ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಯಿತು. AI ಬಂದ ಮೇಲೆ ವಾಹನ ಸವಾರರ ಕಿರಿಕಿರಿ ಕಡಿಮೆ ಆಗುತ್ತದೆ ಎಂದೇ ಭಾವಿಸಿದ್ದರು. ಆದರೆ ಕಡಿಮೆ ಆಗುವ ಬದಲು ಈ ಸಮಸ್ಯೆ ಹೆಚ್ಚಾಗಿದೆ. ಈ ಸಂಬಂಧ ಪಟ್ಟ ಹಾಗೆ ಈಗ ಸಾಮಾಜಿಕ ತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ.

Bengaluru s Traffic Woes Worsen Despite AI A Viral Video Highlights Frustration

ವೈರಲ್ ವಿಡಿಯೋ

ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಐ ಆಧಾರಿತ ಟ್ರಾಫಿಕ್ ಸಿಗ್ನಲ್‌ಗಳ ಬಗ್ಗೆ ಕಿಡಿಕಾರಿದ್ದಾರೆ. AI-ಚಾಲಿತ ಟ್ರಾಫಿಕ್ ಸಿಗ್ನಲ್‌ ಗಳು ಹೆಚ್ಚ ಕಾಯುವಿಕೆಗೆ ಕಾರಣವಾಗುತ್ತಿದೆ. ಮತ್ತು ವಹಾನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ. ಇನ್ನು ಮನುಷ್ಯ ಚಾಲಿತ (Manual) ಸಿಗ್ನಲ್‌ಗಳಲ್ಲೂ ಇಂತಹ ಪ್ರಕರಣಗಳು ಸಾಮಾನ್ಯ ಎಂದು ತಿಳಿಸಿದ್ದಾರೆ. ಭಾಸ್ಕರ್ ರಾವ್ ಮೊದಲು ಆಮ್‌ ಆದ್ಮಿ ಪಾರ್ಟಿ ಸೇರಿಕೊಂಡರು. ಬಳಿಕ ಬಿಜೆಪಿಗೆ ಸೇರಿದ್ದಾರೆ. ಭಾಸ್ಕರ್ ರಾವ್‌ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಈ ಪೋಸ್ಟ್‌ನಲ್ಲಿ ಭಾಸ್ಕರ್ ರಾವ್, ಸಾರ್ವಜನಿಕ ಕ್ಷೇತ್ರದಲ್ಲಿ ಡಿಜಿಟಲ್‌ ನಿರ್ವಹಣೆಯ ಕಾರ್ಯ ವಿಧಾನವನ್ನು ಟೀಕಿಸಿದ್ದಾರೆ. ಇದೇ ವೇಳೆ ಭಾಸ್ಕರ್ ರಾವ್‌ ಐಟಿ ಸಚಿವ ಪ್ರಿಯಾಂಕ್ ಖರ್ಗೆರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಂದಾಯ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಿರಂತರ 'ಸರ್ವರ್ ಡೌನ್' ಅನ್ನುವ ಸಮಸ್ಯೆಗೆ ಸಹ ಐಟಿ ಸಚಿವರು ಉತ್ತರ ಕಂಡುಕೊಳ್ಳಬೇಕಿದೆ.

ಇದೇ ಪೋಸ್ಟ್‌ನಲ್ಲಿ ಭಾಸ್ಕರ್ ರಾವ್ ಒಂದು ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಂಡು ಬರುವ ಆಟೋ ಚಾಲಕ ಸಹ ಟ್ರಾಫಿಕ್ ಸಮಸ್ಯೆಯ ಬಗ್ಗೆಯೇ ಮಾತನಾಡಿದ್ದಾರೆ. ಅಲ್ಲದೆ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಈ ವಿಡಿಯೋವನ್ನು 26 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 60ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, 429 ಜನ ಲೈಕ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+