Artificial intelligence: ಉಚಿತ.. ಉಚಿತ.. ಬೇಕಾದ ಎಲ್ಲಾ ಮಾಹಿತಿ ನೀಡುವ ಎಐ ಟಾಪ್ 5 ಟೂಲ್‌ಗಳು
AI Top 5 Free Tools: ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕ್ರಾಂತಿ ಆಗುತ್ತಿದೆ. ಇದಕ್ಕೆಲ್ಲ ಕಾರಣ ಎಐ.. ಇದು ಇದೀಗ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಇದರಿಂದ ಬೇಕಾದ ಫೋಟೋಗಳ ಜೊತೆಗೆ ಇಂಚಿಂಚು ಮಾಹಿತಿಯನ್ನು ಪಡೆಯಬಹುದು. ಇದರ ಭಾಗ ಆಗಿರುವ ಟಾಪ್ 5 ಟೂಲ್‌ಗಳು ಬಳಕೆದಾರರಿಗೆ ಸಂಪೂರ್ಣ ಉಚಿತವಾಗಿವೆ. ಹಾಗಾದ್ರೆ ಅವುಗಳು ಯಾವುವು ಹಾಗೂ ಏನೆಲ್ಲಾ ಉಪಯೋಗವಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಐ ಉಚಿತ ಟೂಲ್‌ಗಳು: ChatGpt, Grok, Perplexity, Gemini, DeepSeek ಬಳಕೆದಾರರಿಗೆ ಉಚಿತವಾಗಿ ಮಾಹಿತಿ ಪಡೆಯಲು ಇರುವ ಟಾಪ್ 5 ಎಐ ಟೂಲ್‌ಗಳಾಗಿವೆ. ಇವುಗಳಿಂದ ಬೇಕಾದ ಮಾಹಿತಿಯನ್ನು ತ್ವರಿತವಾಗಿ ಪಡೆಬಹುದು. ಇನ್ನೂ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

AI Top 5 Free Tools
* ChatGpt
* Grok
* Perplexity
* Gemini
* DeepSeek
1. ChatGpt
ಯಾವುದೇ ವಿಷಯದ ಕುರಿತು ಇದರಲ್ಲ ತ್ವರಿತ ಹಾಗೂ ಸ್ಪಷ್ಟ ಮಾಹಿತಿ ಪಡೆಯಬಹುದು. ಅಲ್ಲದೆ, ಎಲ್ಲಾ ಭಾಷೆಗಳ ಅನುವಾದ, ವಾಕ್ಯಗಳ ತಿದ್ದುಪಡಿಯನ್ನು ಕೂಡ ಇದರಲ್ಲಿ ಮಾಡಿಕೊಳ್ಳಬಹುದು. ಜೊತೆಗೆ ಇನ್ನೂ ತುಂಬಾ ಪ್ರಯೋಜನಗಳನ್ನು ಪಡೆಯಬಹುದು.
ಪ್ರಯೋಜನಗಳು
* ಸುದ್ದಿ ರಚನೆ, ಉತ್ತಮ ಶೀರ್ಷಿಕೆ, ಯಾವುದಾದರೂ ಒಂದು ವಿಚಾರ ವರದಿ, ಭಾಷಣ, ಕವಿತೆ ಸೇರಿದಂತೆ ಇತ್ಯಾದಿಗಳನ್ನು ಪಡೆಯಬಹುದು.
* ಹೊಸ ಯೋಜನೆಗಳು, ಮಾರ್ಕೆಟಿಂಗ್ ಐಡಿಯಾಗಳು, ಸಮಸ್ಯೆ ಪರಿಹಾರಕ್ಕೆ ಸಲಹೆ
* ವಿದ್ಯಾಭ್ಯಾಸಕ್ಕೆ ಬೇಕಾದ ಪಠ್ಯದ ಸಾರಾಂಶ, ಟಿಪ್ಪಣಿಗಳು, ಪ್ರಶ್ನೋತ್ತರ ತಯಾರಿ
* ಕೋಡ್ ಬರೆಯುವುದು, ತಪ್ಪುಗಳು ಸರಿಪಡಿಸಬಹುದು.
* ಯಾವಾಗ ಬೇಕಾದರೂ, ಎಲ್ಲೆಂದರಲ್ಲಿ ಉಪಯೋಗಿಸಬಹುದು
* ನಿಮ್ಮಿಷ್ಟದಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಬಹುದು
* ಸಮಯ ಮತ್ತು ವೆಚ್ಚ ಉಳಿತಾಯ
* ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯವಹಾರಗಳಿಗೆ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ
2. Grok ಪ್ರಯೋಜನಗಳು
* ಇತ್ತೀಚಿನ ಮಾಹಿತಿಯನ್ನು ತಕ್ಷಣ ಪಡೆಯಬಹುದು
* ಹಂತ-ಹಂತವಾಗಿ ಪ್ರಶ್ನೆಗಳಿಗೆ ವಿವರವಾದ ಉತ್ತರ ಪಡೆಯಬಹುದು
* ಮಾಹಿತಿ ಅಷ್ಟೇ ಅಲ್ಲದೆ, ಫೋಟೋ ರಚನೆ ಹಾಗೂ ಧ್ವನಿ ಮೂಲಕ ಸಂವಹನದ ಸಾಮರ್ಥ್ಯ ಹೊಂದಿದೆ.
3. Perplexity ಪ್ರಯೋಜನಗಳು
* ತ್ವರಿತವಾಗಿ ನಿಖರ ಉತ್ತರಗಳನ್ನು ಪಡೆಬಹುದು
* ಕೇಳಲಾದ ಪ್ರತಿಯೊಂದು ಪ್ರಶ್ನೆಗೂ ಉತ್ತರಗಳನ್ನು ಮೂಲಗಳ ಸಹಿತ ನೀಡುತ್ತದೆ ಹಾಗೂ ಇದನ್ನು ಹೊರತುಪಡಿಸಿಯೂ ನೀಡುತ್ತದೆ. ಈ ಉತ್ತರಗಳು ವಿಶ್ವಾಸಾರ್ಹತೆ ಆಗಿರುತ್ತವೆ.
* ಸರಳ ಪ್ರಶ್ನೆಗಳಿಗೂ ಉತ್ತರ ಪಡೆಯಬಹುದು. ಜೊತೆಗೆ ಬೇಕಾದ ಹೆಚ್ಚಿನ ಮಾಹಿತಿ, ವಿಮರ್ಶೆಗಳು, ವಿವರಣೆಗಳು, ಸಲಹೆಗಳನ್ನು ಕೂಡ ಪಡೆಯಬಹುದು.
* ಪರ್ಪ್ಲೆಕ್ಸಿಟಿ ಕೇಳಲಾದ ಪ್ರಶ್ನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಉತ್ತರ ನೀಡುತ್ತದೆ. ಎಲ್ಲಾ ಭಾಷೆಗಳಲ್ಲಿಯೂ ಉತ್ತರ ಪಡೆಯಬಹುದು.
* ಹೊಸ ಹೊಸ ವಿಚಾರಗಳ ಬಗ್ಗೆಯೂ ಮಾಹಿತಿ ಕಲೆಹಾಕಬಹುದು.
4. Gemini ಪ್ರಯೋಜನಗಳು
* ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಇದನ್ನು ಬಳಸಬಹುದು.
* ಮಾಹಿತಿ, ಧ್ವನಿ, ಫೋಟೋಗಳನ್ನು ಪಡೆಯಬಹುದು.
* Gemini Live ಮೂಲಕ ನೀವು ಧ್ವನಿಯಲ್ಲಿ ನೇರವಾಗಿ ಪ್ರಶ್ನೆ ಕೇಳಬಹುದು ಮತ್ತು ವಿಡಿಯೋ ಹಾಗೂ ಫೋಟೋದಲ್ಲಿನ ವಿವರವನ್ನು ಕೂಡ ಪಡೆಯಬಹುದು.
* ಹಲವಾರು ವೆಬ್‌ಸೈಟ್‌ಗಳನ್ನು ವಿಶ್ಲೇಷಣೆ ಮಾಡಿ ನಿಮಗೆ ಸಮಗ್ರ ಮಾಹಿತಿಯನ್ನು ನೀಡುತ್ತದೆ.
* Gemini Advancedನಲ್ಲಿ ಕಾಂಟೆಕ್ಸ್ ವಿಂಡೋದಿಂದ ಡಾಕ್ಯುಮೆಂಟ್, ವೀಡಿಯೊಗಳನ್ನೂ ವಿಶ್ಲೇಷಿಸಿ ಅಗತ್ಯ ಮಾಹಿತಿ ಪಡೆಯಬಹುದು.
* ವಿವರವಾದ ಸ್ಕ್ರಿಪ್ಟ್‌ಗಳ ರಚನೆಯನ್ನು ಮಾಡಿಕೊಳ್ಳಬಹುದು.
* ಕಲಿಕೆ ಮತ್ತು ಕ್ರಿಯೇಟಿವಿಟಿ ಹೆಚ್ಚಿಸುತ್ತದೆ
* ಇದರ ಬಳಕೆಯಿಂದ ಜ್ಞಾನ ಮತ್ತು ಸಂಶೋಧನ ಸಾಮರ್ಥ್ಯ ಹೆಚ್ಚಳ ಆಗುತ್ತದೆ. ಈ ಮೂಲಕ ನಿಮ್ಮನ್ನು ಕೆಲಸದ ಒತ್ತಡದಿಂದ ಹೊರಗಡೆ ತರುತ್ತದೆ.
5. DeepSeek ಪ್ರಯೋಜನೆಗಳು
* ತ್ವರಿತವಾಗಿ ವಿವರವಾದ ಮಾಹಿತಿಯನ್ನು ಪಡೆಯಬಹುದು.
* ಅನೇಕ ಮೂಲಗಳಿಂದ ಡೇಟಾ ಸಂಗ್ರಹಿಸಿ, ಒಟ್ಟಾಗಿ ವಿಶ್ಲೇಷಣೆಗೆ ಅವಕಾಶ ನೀಡುತ್ತದೆ.
* ವೈಯಕ್ತಿಕ ಸಲಹೆ, ಸೂಕ್ತ ಮಾರ್ಗದರ್ಶನವನ್ನು ಕೂಡ ಪಡೆಯಬಹುದು.
ಒಟ್ಟಿನಲ್ಲಿ ಹೇಳುವುದಾದ್ರೆ ಈ ಎಐ ಟೂಲ್‌ಗಳಿಂದ ತ್ವರಿತವಾಗಿ ಬೇಕಾದ ಮಾಹಿತಿಯನ್ನು ಪಡೆಯಬಹುದು. ಇವುಗಳಿಂದ ಕೆಲಸದ ಒತ್ತಡ ಕಡಿಮೆಯಾಗಲಿದ್ದು, ಬಳಕೆದಾರರಿಗೆ ಉಚಿತವಾಗಿವೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications