Sep 6, 2021 6:23 PM
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ರಿಸಲ್ಟ್: ವಿಜೇತರ ಪಟ್ಟಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಇಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ, ಪಕ್ಷೇತರರ ನೆರವಿನಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನ ಜಾರಿಯಲ್ಲಿದೆ.
Sep 6, 2021 6:22 PM
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆದ್ದವರ ಪಟ್ಟಿ
ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯಭೇರಿ ಬಾರಿಸಿದೆ. ಬೆಳಗಾವಿ ಜೊತೆಗೆ ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟವಾಗುತ್ತಿದೆ.
Sep 6, 2021 3:20 PM
ಕಲಬುರಗಿ ಅತಂತ್ರ ಫಲಿತಾಂಶ:
ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4 ಇತರೆ 1 ಸ್ಥಾನಗಳಲ್ಲಿ ಗೆಲುವು.
Sep 6, 2021 2:56 PM
ಬೆಳಗಾವಿ ಪಾಲಿಕೆ ಅಂತಿಮ ಫಲಿತಾಂಶ:
ಬಿಜೆಪಿ - 35, ಕಾಂಗ್ರೆಸ್ - 10, ಎಐಎಂಐಎಂ - 1, ಎಂಇಎಸ್ - 2, ಇತರೆ - 10 ಸ್ಥಾನ.
Sep 6, 2021 2:52 PM
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಐಎಂಐಎಂ ಪಕ್ಷಕ್ಕೆ ಒಂದು ಸ್ಥಾನ.
Sep 6, 2021 2:33 PM
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಾತೆ ತೆರೆದ ಜೆಡಿಎಸ್. 42ನೇ ವಾರ್ಡ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಅಲಿಮುದ್ದೀನ್ ಪಟೇಲ್ ಗೆಲುವು.
Sep 6, 2021 1:58 PM
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 36 ವಾರ್ಡ್‌ಗಳಲ್ಲಿ ಮುನ್ನಡೆ ಗೆದ್ದಿದ್ದರೆ, ಕಾಂಗ್ರೆಸ್ 9 ವಾರ್ಡ್‌ಗಳಲ್ಲಿ, ಸ್ವತಂತ್ರ ಅಭ್ಯರ್ಥಿಗಳು 12 ವಾರ್ಡ್‌ಗಳಲ್ಲಿ ಮತ್ತು ಎಐಎಂಐಎಂ 1ರಲ್ಲಿ ಗೆಲುವು ಸಾಧಿಸಿವೆ.
Sep 6, 2021 1:36 PM
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅತಂತ್ರ
ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಪಕ್ಷವು 39 ಸ್ಥಾನ ಪಡೆದಿದ್ದು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಮೂರು ಸ್ಥಾನಗಳ ಕೊರತೆ ಎದುರಿಸಿತು. ಕಾಂಗ್ರೆಸ್ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಕೆಚ್ಚೆದೆಯ ಪ್ರದರ್ಶನ ನೀಡಿದೆ. ಇನ್ನು ಜೆಡಿ(ಎಸ್) ಒಂದು ಸ್ಥಾನ ಗೆದ್ದು ನೀರಸ ಪ್ರದರ್ಶನ ನೀಡಿದೆ. ಮೊದಲ ಬಾರಿಗೆ ಸ್ಪರ್ಧಿಸಿದ AIMIM ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತಮ ಪ್ರದರ್ಶನ ನೀಡಿದೆ. ಆರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
Sep 6, 2021 1:13 PM
ಮೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ವಿಚಾರವಾಗಿ ನಮಗೆ ಸಮಾಧಾನ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Sep 6, 2021 1:07 PM
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿಯ 39 ಅಭ್ಯರ್ಥಿಗಳು ಜಯ ಗಳಿಸಿದ್ದರೆ, ಕಾಂಗ್ರೆಸ್‌ನ 33, ಎಐಎಂಐಎಂ ಪಕ್ಷದ 3, ಜೆಡಿಎಸ್ ಪಕ್ಷದ 1 ಹಾಗೂ 6 ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
Sep 6, 2021 12:59 PM
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಕಾಂಗ್ರೆಸ್- 22 ಗೆಲುವು, ಬಿಜೆಪಿ- 20 ಗೆಲುವು, ಜೆಡಿಎಸ್-3 ಗೆಲುವು ಹಾಗೂ ಪಕ್ಷೇತರ-2 ಗೆಲುವು.
Sep 6, 2021 12:51 PM
ಧಾರವಾಡದಲ್ಲಿ ವಾರ್ಡ್ ನಂ.8ರಲ್ಲಿ ಮಾಜಿ ಮೇಯರ್ ಶಿವು ಹಿರೇಮಠ ಗೆಲುವು ಸಾಧಿಸಿದ್ದಾರೆ.
Sep 6, 2021 12:39 PM
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿ 34 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 27 ವಾರ್ಡ್‌ಗಳಲ್ಲಿ, ಕಾಂಗ್ರೆಸ್ 6 ವಾರ್ಡ್‌ಗಳಲ್ಲಿ, ಜೆಡಿಎಸ್ 2 ಮತ್ತು ಎಐಎಂಐಎಂ 2 ರಲ್ಲಿ ಗೆದ್ದಿವೆ.
Sep 6, 2021 12:39 PM
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಜೆಡಿಎಸ್ ಗೆದ್ದು ಖಾತೆ ತೆರೆದಿದೆ. ವಾರ್ಡ್ ನಂ. 25ರಲ್ಲಿ ಲಕ್ಷ್ಮಿ ಹಿಂಡಸಗೇರಿ ಗೆದ್ದಿದ್ದಾರೆ.
Sep 6, 2021 12:12 PM
ಎಐಎಂಐಎಂ ಮೊದಲ ಬಾರಿಗೆ ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ ತನ್ನ ಖಾತೆಯನ್ನು ತೆರೆದಿದೆ. ವಾರ್ಡ್ ನಂ.71ರಲ್ಲಿ ನಜೀರ್ ಹೊಯ್ನಾಲ್ ಗೆಲುವು ಸಾಧಿಸಿದ್ದಾರೆ.
Sep 6, 2021 12:09 PM
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 10 ವಾರ್ಡ್‌ಗಳಲ್ಲಿ ಗೆದ್ದರೆ, ಕಾಂಗ್ರೆಸ್ 19 ವಾರ್ಡ್‌ಗಳಲ್ಲಿ, ಜೆಡಿಎಸ್ 2 ಮತ್ತು ಸ್ವತಂತ್ರ ಅಭ್ಯರ್ಥಿಗಳು 2 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.
Sep 6, 2021 12:08 PM
ಹುಬ್ಬಳ್ಳಿ- ಧಾರವಾಡ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಬಿಜೆಪಿ ಪಕ್ಷದ 32 ಅಭ್ಯರ್ಥಿಗಳು ಜಯ ಗಳಿಸಿದ್ದರೆ, ಕಾಂಗ್ರೆಸ್ ಪಕ್ಷದ 20 ಅಭ್ಯರ್ಥಿಗಳು ಜಯಿಸಿದ್ದರೆ, ಇತರೆ 5 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
Sep 6, 2021 11:57 AM
ಹುಬ್ಬಳ್ಳಿ-ಧಾರವಾಡ ಪಾಲಿಕೆ: ಬಿಜೆಪಿ 29 ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ 17 ವಾರ್ಡ್‌ಗಳಲ್ಲಿ, ಸ್ವತಂತ್ರ ಅಭ್ಯರ್ಥಿಗಳು 4 ವಾರ್ಡ್‌ಗಳಲ್ಲಿ ಜಯಗಳಿಸಿದೆ.
Sep 6, 2021 11:48 AM
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ-31, ಕಾಂಗ್ರೆಸ್-8, ಎಂಇಎಸ್-2, ಪಕ್ಷೇತರ-8 ಗೆದ್ದಿದ್ದಾರೆ. ಇನ್ನು 8 ವಾರ್ಡ್‌ಗಳ ಫಲಿತಾಂಶ ಮಾತ್ರ ಬಾಕಿ ಇದೆ.
Sep 6, 2021 11:45 AM
ಬೆಳಗಾವಿ ಪಾಲಿಕೆಯಲ್ಲಿ 31 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದರೆ, ಕಾಂಗ್ರೆಸ್ 8 ವಾರ್ಡ್‌ಗಳಲ್ಲಿ, 7 ವಾರ್ಡ್‌ಗಳಲ್ಲಿ ಸ್ವತಂತ್ರರು ಮತ್ತು 1 ವಾರ್ಡ್‌ನಲ್ಲಿ ಎಐಎಂಐಎಂ ಗೆದ್ದಿದೆ.
Advertisement
Advertisement
Sep 6, 2021 11:39 AM
ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ.36ರ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಗೆಲುವು ಕಂಡಿದ್ದಾರೆ. ರಜನಿ ಅಣ್ಣಯ್ಯ ಒಟ್ಟು 1997 ಮತಗಳ ಅಂತರದೊಂದಿಗೆ ಗೆಲುವು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಲೀಲಾವತಿ, ಬಿಜೆಪಿಯ ಶೋಭಾ ಸ್ಪರ್ಧಿಸಿದ್ದರು.
Sep 6, 2021 11:34 AM
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು ಮತ್ತು ಬೆಳಗಾವಿಯ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.
Sep 6, 2021 11:24 AM
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ.
Sep 6, 2021 11:22 AM
ಕೆಜಿಎಫ್ ನಗರಸಭೆ ವಾರ್ಡ್ ನಂ.12ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋನಿಶಾ ಗೆದ್ದಿದ್ದಾರೆ. ಅವರು 696 ಪಡೆದುಕೊಂಡಿದ್ದರೆ, ಸ್ವತಂತ್ರ ಅಭ್ಯರ್ಥಿ ಜಯದೇವಿ 338 ಮತ ಪಡೆದರು. ಬಿಜೆಪಿಯ ನಂದಿನಿ ದೇವಿ 293 ಮತ ಪಡೆದಿದ್ದಾರೆ.
Sep 6, 2021 11:19 AM
ಬೆಳಗಾವಿಯ ಮಹಾನಗರ ಪಾಲಿಕೆಯ 29 ವಾರ್ಡ್‌ಗಳ ಫಲಿತಾಂಶವನ್ನು ಘೋಷಿಸಲಾಗಿದ್ದು, ಕಾಂಗ್ರೆಸ್ 6 ವಾರ್ಡ್‌ಗಳಲ್ಲಿ ಗೆದ್ದರೆ, ಬಿಜೆಪಿ 14 ವಾರ್ಡ್‌ಗಳಲ್ಲಿ ಗೆದ್ದಿದೆ. ಇನ್ನು ಸ್ವತಂತ್ರ ಅಭ್ಯರ್ಥಿಗಳು 5 ವಾರ್ಡ್‌ಗಳಲ್ಲಿ ಮತ್ತು ಎಐಎಂಐಎಂ 1 ವಾರ್ಡ್‌ನಲ್ಲಿ ಗೆದ್ದಿದೆ.
Sep 6, 2021 11:16 AM
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಮಯ 11.05ರ ಹೊತ್ತಿಗೆ ಕಾಂಗ್ರೆಸ್- 11, ಬಿಜೆಪಿ- 7, ಜೆಡಿಎಸ್-1 ಹಾಗೂ ಸ್ವತಂತ್ರ- 2 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
Sep 6, 2021 11:14 AM
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಪಕ್ಷ 25 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದಿದೆ ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಜೆಡಿಎಸ್ ಹಾಗೂ ಎಎಪಿ ಇನ್ನೂ ಖಾತೆ ತೆರೆಯಬೇಕಿದೆ.
Sep 6, 2021 11:03 AM
ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಫಲಿತಾಂಶ ಅತಂತ್ರವಾಗಿದೆ. ಬಿಜೆಪಿ-12, ಕಾಂಗ್ರೆಸ್-9, ಜೆಡಿಎಸ್-7, ಇತರೆ-3 ಜಯ ಗಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ BJP ದೊಡ್ಡ ಪಕ್ಷವಾಗಿದ್ದು, ಇದೇ ಮೊದಲ ಬಾರಿ 12 ಸ್ಥಾನಗಳಲ್ಲಿ ಬಿಜೆಪಿ ಜಯ.
Sep 6, 2021 10:57 AM
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪುರಸಭೆ ಕಾಂಗ್ರೆಸ್ ತೆಕ್ಕೆಗೆ. 23 ಕ್ಷೇತ್ರಗಳಲ್ಲಿ 15 ಕ್ಷೇತ್ರ ಗೆದ್ದ ಕಾಂಗ್ರೆಸ್, 7 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ. ತರೀಕೆರೆಯಲ್ಲಿ ಬಿಜೆಪಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಇದು ಹಾಲಿ ಶಾಸಕ ಡಿ.ಎಸ್. ಸುರೇಶ್ ಮುಖಭಂಗ ಅನುಭವಿಸಿದ್ದಾರೆ.
Sep 6, 2021 10:55 AM
ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ, ಕಲಬುರಗಿಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
Sep 6, 2021 10:54 AM
ಹುಬ್ಬಳ್ಳಿ-ಧಾರವಾಡದ ವಾರ್ಡ್ ನಂ.11 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಬಟ್ಟೆಣ್ಣನವರ್ಗೆ ಗೆಲುವು.
Sep 6, 2021 10:52 AM
ಹುಬ್ಬಳ್ಳಿ-ಧಾರವಾಡದ ವಾರ್ಡ್ ನಂ.23 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಬಡುಕುರಿಗೆ ಗೆಲುವು.
Sep 6, 2021 10:52 AM
ಹುಬ್ಬಳ್ಳಿ-ಧಾರವಾಡದ ವಾರ್ಡ್ ನಂ.1 ರಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಚಳಗೇರಿಗೆ ಗೆಲುವು.
Sep 6, 2021 10:30 AM
ಮಾಜಿ ಉಪ ಮೇಯರ್ ಮತ್ತು ಸ್ವತಂತ್ರ ಅಭ್ಯರ್ಥಿ ಲಕ್ಷ್ಮಿ ಉಪ್ಪಾರ್ ಹುಬ್ಬಳ್ಳಿ-ಧಾರವಾಡದ ವಾರ್ಡ್ ನಂ.47 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿಯವರನ್ನು ಸೋಲಿಸಿದರು.
Sep 6, 2021 10:29 AM
ಜೆಡಿಎಸ್ ಅಭ್ಯರ್ಥಿ ವಿಶಾಲ್ ನವರಂಗ್ 34ನೇ ವಾರ್ಡ್‌ನಲ್ಲಿ ಕಲಬುರಗಿ ಪಾಲಿಕೆಯಲ್ಲಿ ಪಕ್ಷಕ್ಕೆ ಮೊದಲ ಯಶಸ್ಸನ್ನು ತಂದರು.
Sep 6, 2021 10:27 AM
ಹುಬ್ಬಳ್ಳಿ- ಧಾರವಾಡದ ಪಾಲಿಕೆಯಲ್ಲಿ 38 ರಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
Sep 6, 2021 10:23 AM
ಕಲಬುರಗಿ: 12 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಗೆದ್ದರೆ, 3 ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು 1 ವಾರ್ಡ್‌ನಲ್ಲಿ ಜೆಡಿಎಸ್ ಗೆದ್ದಿದೆ.
Sep 6, 2021 10:12 AM
ರಾಮನಗರ ನಗರಸಭೆಯ ವಾರ್ಡ್ ನಂ 4ರ ಉಪ ಚುನಾವಣೆಯ ಫಲಿತಾಂಶ ಪ್ರಕಟ. ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಸುರೇಶ್ಗೆ ಗೆಲುವು. ಲೀಲಾ ಗೋವಿಂದರಾಜು ಮೃತರಾಗಿದ್ದ ಹಿನ್ನಲೆ ಉಪಚುನಾವಣೆ ಎದುರಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಗೆ 899 ಮತಗಳ ಅಂತರದಿಂದ ಗೆಲವು. ಜೆಡಿಎಸ್ ಅಭ್ಯರ್ಥಿಗೆ ಕೇವಲ 191 ಮತಗಳು.
Sep 6, 2021 10:09 AM
ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ.36 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಮುನ್ಸೂಚನೆ ದೊರೆತಿದೆ.
Sep 6, 2021 10:07 AM
ಕಲಬುರಗಿ ನಗರದಲ್ಲಿ ಕಾಂಗ್ರೆಸ್ 4, ಬಿಜೆಪಿ 3 ಮತ್ತು ಒಂದು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
Sep 6, 2021 10:05 AM
ಬೆಳಗಾವಿಯಲ್ಲಿ ವಾರ್ಡ್ ಸಂಖ್ಯೆ 21ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಿ ಕಾಮ್ಕರ್ ಗೆಲುವು ಸಾಧಿಸಿದ್ದಾರೆ.
Sep 6, 2021 9:55 AM
ಕರ್ನಾಟಕದ ಹುಬ್ಬಳ್ಳಿಯಲ್ಲಿ 2021ರ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಆರಂಭವಾಗಿದೆ.
Sep 6, 2021 9:54 AM
ಕರ್ನಾಟಕದ ಕಲಬುರಗಿಯಲ್ಲಿ 2021ರ ಮಹಾನಗರ ಪಾಲಿಕೆ ಚುನಾವಣಾ ಮತಗಳ ಎಣಿಕೆ ನಡೆಯುತ್ತಿದೆ.
Sep 6, 2021 9:43 AM
ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರಸಭೆ 29ನೇ ವಾರ್ಡ್ನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಗರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ಗೆ ಮುಖಭಂಗವಾಗಿದೆ.