• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ರಿಸಲ್ಟ್: ವಿಜೇತರ ಪಟ್ಟಿ

|
Google Oneindia Kannada News

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಇಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ, ಪಕ್ಷೇತರರ ನೆರವಿನಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನ ಜಾರಿಯಲ್ಲಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಒಟ್ಟು 8,11,537 ಮತದಾರರು ಇದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್‌ಗಳಿದ್ದವು. ಈಗ ವಾರ್ಡ್‌ಗಳ ಪುನರ್ ವಿಂಗಡನೆಯಾಗಿದ್ದು ವಾರ್ಡ್‌ಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ವಾರ್ಡ್‌ಗಳ ಪುನರ್ ವಿಂಗಡನೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಿಗೆ ಸೆ.3 ರಂದು ಚುನಾವಣೆ ಜರುಗಿದ್ದು, 420 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎಲ್ಲ 82 ವಾರ್ಡ್‍ಗಳಲ್ಲಿ ಕಣದಲ್ಲಿದ್ದರು. ಜೆಡಿಎಸ್ 49, ಸಿಪಿಐ (ಎಮ್) 1, ಬಿಎಸ್‍ಪಿ 7, ಎಎಪಿ 1, ಉತ್ತಮ ಪ್ರಜಾಕೀಯ 11, ಕರ್ನಾಟಕ ರಾಷ್ಟ್ರ ಸಮಿತಿ 4, ಎಐಎಮ್‍ಐಎಂ 12, ಎಸ್‍ಡಿಪಿಐ 4, ಕರ್ನಾಟಕ ಶಿವಸೇನೆ 4, ಕರ್ನಾಟಕ ಜನಸೇವೆ ಪಾರ್ಟಿ 1, ಪಕ್ಷೇತರ 122 ಸೇರಿದಂತೆ ಒಟ್ಟು 420 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದರು.

2021ರ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: 82 ವಾರ್ಡ್‌(42 ಮ್ಯಾಜಿಕ್ ನಂಬರ್)
ಬಿಜೆಪಿ : 39
ಕಾಂಗ್ರೆಸ್: 33
ಪಕ್ಷೇತರ: 6
ಎಐಎಂಐಎಂ: 3
ಜೆಡಿಎಸ್: 1

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ 82 ವಾರ್ಡ್(42ಮ್ಯಾಜಿಕ್ ನಂಬರ್)
ವಾರ್ಡ್ ಸಂಖ್ಯೆ ವಿಜೇತರು ಪಕ್ಷ
01 ಅನಿತಾ ಚಳಗೇರಿ ಬಿಜೆಪಿ
02 ಸುರವ್ವ ಪಾಟೀಲ್ ಕಾಂಗ್ರೆಸ್
03 ಈರೇಶ್ ಅಂಚಟಗೇರಿ ಬಿಜೆಪಿ
04 ರಾಜಶೇಖರ ಕಾಂಗ್ರೆಸ್
05 ನಿತಿನ್ ಇಂಡಿ ಬಿಜೆಪಿ
06 ದಿಲ್ಶಾದ್ ಬೇಗಂ ನದಾಫ್ ಕಾಂಗ್ರೆಸ್
07 ದೀಪಾ ನೀರಲಕಟ್ಟಿ ಕಾಂಗ್ರೆಸ್
08 ಶಂಕರ್ ಶೆಳ್ಕೆ ಬಿಜೆಪಿ
09 ರತ್ನಾಬಾಯಿ ನಜಾರೆ ಬಿಜೆಪಿ
10 ಚಂದ್ರಕಲಾ ಕೊಟಬಾಗಿ ಬಿಜೆಪಿ
11 ಮಂಜುನಾಥ ಬಟ್ಟೆಣ್ಣವರ ಬಿಜೆಪಿ
12 ವಿಜಯಾನಂದ ಶೆಟ್ಟಿ ಬಿಜೆಪಿ
13 ಸುರೇಶ್ ಬೆದರೆ ಬಿಜೆಪಿ
14 ಶಂಭುಗೌಡ ಸಾಲ್ಮನಿ ಕಾಂಗ್ರೆಸ್
15 ವಿಷ್ಣುತೀರ್ಥ ಕೊರ್ಲಹಳ್ಳಿ ಬಿಜೆಪಿ
16 ಪರ್ವೀನ್ ದೇಸಾಯಿ ಕಾಂಗ್ರೆಸ್
17 ಗಣೇಶ್ ಮುಧೋಳ ಕಾಂಗ್ರೆಸ್
18 ಶಿವು ಹಿರೇಮಠ ಬಿಜೆಪಿ
19 ಜ್ಯೋತಿ ಪಾಟೀಲ್ ಬಿಜೆಪಿ
20 ಕವಿತಾ ಕಬ್ಬೇರ ಕಾಂಗ್ರೆಸ್
21 ಆನಂದ್ ಯಾವಗಲ್ ಬಿಜೆಪಿ
22 ಬಿಲಕಿಸ ಬಾನು ಮುಲ್ಲಾ ಕಾಂಗ್ರೆಸ್
23 ಮಂಜುನಾಥ ಬಡಕುರಿ ಕಾಂಗ್ರೆಸ್
24 ಡಾ. ಮಯೂರ ಮೋರೆ ಕಾಂಗ್ರೆಸ್
25 ಲಕ್ಷ್ಮಿ ಹಿಂಡಸಗೇರಿ ಜೆಡಿಎಸ್
26 ನೀಲವ್ವ ಅರವಳದ ಬಿಜೆಪಿ
27 ಸುನಿತಾ ಮಾಳವದಕರ್ ಬಿಜೆಪಿ
28 ಚಂದ್ರಶೇಖರ ಮನಗುಂಡಿ ಬಿಜೆಪಿ
29 ಮಂಜುನಾಥ ಬುರ್ಲಿ ಪಕ್ಷೇತರ
30 ರಾಮಣ್ಣ ಬಡಿಗೇರ ಬಿಜೆಪಿ
31 ಶಂಕ್ರಪ್ಪ ಹರಿಜನ ಕಾಂಗ್ರೆಸ್
32 ಸತೀಶ್ ಹಾನಗಲ್ ಬಿಜೆಪಿ
33 ಇಮ್ರಾನ್ ಎಲಿಗಾರ ಕಾಂಗ್ರೆಸ್
34 ಮಂಗಳ ಗೌರಿ ಕಾಂಗ್ರೆಸ್
35 ಮಲ್ಲಿಕಾರ್ಜುನ ಗುಂಡೂರ ಬಿಜೆಪಿ
36 ರಾಜಣ್ಣ ಕೊರವಿ ಬಿಜೆಪಿ
37 ಉಮೇಶಗೌಡ ಕೌಜಗೇರಿ ಬಿಜೆಪಿ
38 ತಿಪ್ಪಣ್ಣ ಮಜಗಿ ಬಿಜೆಪಿ
39 ಸೀಮಾ ಮೊಗಲಿಶೆಟ್ಟರ್ ಬಿಜೆಪಿ
40 ಶಿವಕುಮಾರ್ ರಾಯನಗೌಡರ್ ಕಾಂಗ್ರೆಸ್
41 ಸಂತೋಷ್ ಚೌಹಾಣ್ ಬಿಜೆಪಿ
42 ಮಹಾದೇವಪ್ಪ ನರಗುಂದ ಬಿಜೆಪಿ
43 ಬೀರಪ್ಪ ಖಂಡೇಕರ್ ಬಿಜೆಪಿ
44 ಉಮಾ ಮುಕ್ಕುಂದ ಬಿಜೆಪಿ
45 ಪ್ರಕಾಶ್ ಕುರಟ್ಟಿ ಕಾಂಗ್ರೆಸ್
46 ವೀರಣ್ನ ಸವಡಿ ಬಿಜೆಪಿ
47 ರೂಪಾ ಶೆಟ್ಟಿ ಬಿಜೆಪಿ
48 ಕಿಶನ್ ಬೆಳಗಾವಿ ಪಕ್ಷೇತರ
49 ವೀಣಾ ಬಾರದ್ವಾಡ್ ಬಿಜೆಪಿ
50 ಮಂಗಳಮ್ಮ ಹಿರೇಮನಿ ಕಾಂಗ್ರೆಸ್
51 ಸೆಂದಿಲ್ ಕುಮಾರ್ ಕಾಂಗ್ರೆಸ್
52 ಪಕ್ಷೇತರ
53 ಮಹ್ಮದ್ ಇಸ್ಮಾಯಿಲ್ ಭದ್ರಾಪೂರ ಕಾಂಗ್ರೆಸ್
54 ಸರಸ್ವತಿ ಧೊಂಗಡಿ ಬಿಜೆಪಿ
55 ಇಕ್ಬಾಲ್ ನವಲೂರು ಕಾಂಗ್ರೆಸ್
56 ಚಂದ್ರಿಕಾ ಮೇಸ್ತ್ರಿ ಪಕ್ಷೇತರ
57 ಮೀನಾಕ್ಷಿ ವಂಟಮೂರಿ ಬಿಜೆಪಿ
58 ಶ್ರುತಿ ಚಲವಾದಿ ಕಾಂಗ್ರೆಸ್
59 ಸುವರ್ಣ ಕಾಂಗ್ರೆಸ್
60 ರಾಧಾಬಾಯಿ ಬಿಜೆಪಿ


ವಿಜಯೋತ್ಸವ ಆಚರಣೆಗೆ ಬ್ರೇಕ್:
ಮತ ಎಣಿಕೆ ಸಂದರ್ಭದಲ್ಲಿ ಅಥವಾ ಮತಗಳ ಎಣಿಕೆ ಕಾರ್ಯದ ಮುಕ್ತಾಯದ ನಂತರ ಹಾಗೂ ಫಲಿತಾಂಶ ಘೋಷಣೆಯಾದ ತರುವಾಯ ವಿಜಯಶಾಲಿಯಾದ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ಆಚರಿಸುವ ಸಂಭವಗಳಿದ್ದು ಮತ್ತು ಈ ಸಮಯದಲ್ಲಿ ಪರಾಭವಗೊಂಡ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ಹಾಗೂ ವಿಜಯಶಾಲಿ ಅಭ್ಯರ್ಥಿಯ ಕಾರ್ಯಕರ್ತರು ಮತ್ತು ಬೆಂಬಲಿಗರ ವೈಮನಸ್ಸು, ಜಗಳ ಮತ್ತು ಘರ್ಷಣೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಮತ್ತು ಶಾಂತಿಯುತ ಮತ ಎಣಿಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತಿಯ ದಂಡ ಸಹಿಂತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶದಲ್ಲಿ ತಿಳಿಸಿದ್ದಾರೆ.

Hubballi Dharwad Municipal Election Results 2021: List of Winners

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಧಾರವಾಡ ತಾಲೂಕು ಹುಬ್ಬಳ್ಳಿ ತಾಲೂಕು ಮತ್ತು ಹುಬ್ಬಳ್ಳಿ ನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ 1973 ಕಲಂ 144 ರನ್ವಯ ಸೆಪ್ಟೆಂಬರ್ 5 ರ ಸಾಯಂಕಾಲ 6 ಗಂಟೆಯಿಂದ ಪ್ರಾರಂಭಿಸಿ, ಸೆಪ್ಟೆಂಬರ್ 6ರ ಸಾಯಂಕಾಲ 7 ಗಂಟೆಯವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ: ಮತ ಎಣಿಕಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಕರೂ ಸಹಕಾರ ನೀಡಬೇಕು. ಮತ ಎಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಹಾನಗರ ಫೊಲೀಸ್ ಆಯುಕ್ತ ಲಾಬುರಾಮ ಅವರ ನೇತೃತ್ವದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

   6ರಿಂದ 8ನೇ ತರಗತಿಗಳು ಆರಂಭ-ವಿದ್ಯಾರ್ಥಿಗಳಿಗೆ ಹೂ, ಸಿಹಿ ನೀಡಿದ ಶಿಕ್ಷಕರು| Oneindia Kannada
   English summary
   Hubballi Dharwad Municipal Election Results 2021: Here is the list of Winners and Losers. Take a look.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X