77ರಲ್ಲೂ ಸಿದ್ದು ಭರ್ಜರಿ ಫಿಟ್ನೆಸ್: ಜಿಮ್ನಲ್ಲಿ ಕಸರತ್ತಿನ ವಿಡಿಯೋ ವೈರಲ್, ರಾಜಕೀಯದಲ್ಲೂ ಎರಡನೇ ಶಕ್ತಿ ಕೇಂದ್ರ
ಕರ್ನಾಟಕದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ತಮ್ಮ ಆರೋಗ್ಯ ಸುಧಾರಣೆಯ ಕಡೆ ಗಮನ ಹರಿಸಿದ್ದಾರೆ. ಸಿದ್ದರಾಮಯ್ಯ ಅವರು ಮೊದಲಿನಿಂದಲೂ ತಮ್ಮ ಆರೋಗ್ಯಕರ ಜೀವನ ಶೈಲಿಗೆ ಆದ್ಯತೆ ನೀಡಿದ್ದಾರೆ. ವೈಯಕ್ತಿಕವಾಗಿ ಜಿಮ್ ಮಾಡುವುದು - ಉತ್ತಮ ಆಹಾರ ಪದ್ಧತಿಯಿಂದ ಅವರು ತಮ್ಮ 77ನೇ ವಯಸ್ಸಿನಲ್ಲೂ ಅತ್ಯಂತ ಕಟ್ಟುಮಸ್ತಾದ ದೈಹಿಕ ಸದೃಢತೆ ಕಾಪಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ರಾಜೀನಾಮೆ ಕೊಟ್ಟ ಮೇಲೆ ಪೂರ್ಣ ಪ್ರಮಾಣದ ರಾಜಕೀಯ ಹಾಗೂ ಕರ್ನಾಟಕ ಆಡಳಿತ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಅವರು ಎರಡನೇ ಶಕ್ತಿ ಕೇಂದ್ರವಾಗಲಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದರ ನಡುವೆ ಅಧಿಕಾರದ ಕುರ್ಚಿ ಬಿಟ್ಟು ಕೊಟ್ಟ ಮೇಲೆ, ತಮ್ಮ ಆರೋಗ್ಯದ ಕಡೆ ಗಮನ ಹರಿಸಿದ್ದು, ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 77 ವರ್ಷದಲ್ಲೂ ಜಿಮ್ನಲ್ಲಿ ಸಿದ್ದರಾಮಯ್ಯ ಅವರು ದೇಹ ದಂಡಿಸುತ್ತಿರುವುದನ್ನು ನೋಡಿ ಹಲವರು ಹುಬ್ಬೇರಿಸಿದ್ದಾರೆ.
ಕರ್ನಾಟಕದ ರಾಜಕೀಯದಲ್ಲಿ ರಾಜಕೀಯ ಮುತ್ಸದ್ದಿ ವಿಷಯದಲ್ಲಿ, ದೇಹದ ಆರೋಗ್ಯ, ವ್ಯಾಯಾಮ ಹಾಗೂ ಆಹಾರ ಪದ್ಧತಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ನಡುವೆ ಹಲವು ಹೋಲಿಕೆಗಳಿವೆ. ಎಚ್.ಡಿ ದೇವೇಗೌಡ ಅವರ ಗರಡಿಯಲ್ಲಿ ರಾಜಕೀಯ ತಂತ್ರಗಳನ್ನು ಕಲಿತ ಸಿದ್ದರಾಮಯ್ಯ ಅವರು, ದೈಹಿಕ ಕಸರತ್ತಿನಲ್ಲಿಯೂ ಎಚ್.ಡಿ ದೇವೇಗೌಡ ಅವರಂತೆ ದೇಹ ದಂಡಿಸುವುದು ಇದೆ. ಸಿದ್ದರಾಮಯ್ಯ ಅವರು ಈಗ ರಾಜಕೀಯ ಹಾಗೂ ಆಡಳಿತ ಒತ್ತಡಗಳಿಂದ ವಿರಾಮ ಪಡೆದುಕೊಂಡಿದ್ದು, ದೇಹದ ಆರೋಗ್ಯದ ಕಡೆ ಕಾಳಜಿ ವಹಿಸಿದ್ದಾರೆ. ಹಿಂದೆ ಸದನದಲ್ಲಿ ನಿದ್ರೆ ಮಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ನಿದ್ರಾರಾಮಯ್ಯ ಎಂದು ಕೆಲವರು ಟೀಕೆ ಮಾಡಿದ್ದೂ ಇದೆ. ಆದರೆ ಈ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು ತಮಗೆ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನಿದ್ದೆ ಬರುತ್ತದೆ ಎಂದು ಹೇಳಿಕೊಂಡಿದ್ದರು. ನಂತರ ಅವರು ಯೋಗ, ಪ್ರಾಣಾಯಾಮದ ಮೊರೆ ಹೋದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೂಲಕ ತಮ್ಮ ಉಸಿರಾಟದ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದರು.

ಮುಖ್ಯಮಂತ್ರಿ ಆಗಿದ್ದಾಗಲೂ ಜಿಮ್
ಮುಖ್ಯಮಂತ್ರಿ ಆಗಿದ್ದಾಗಲೂ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಜಿಮ್ ಅನ್ನು ಸ್ಥಾಪಿಸಲಾಗಿತ್ತು. ಅವರು ಪ್ರತಿದಿನ ಬೆಳಗ್ಗೆ ಕನಿಷ್ಠ 1 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು. ಆದರೆ ರಾಜಕೀಯ ಹಾಗೂ ಆಡಳಿತ ಒತ್ತಡ ಕಾರಣಕ್ಕೆ ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಆದರೆ ಇದೀಗ ಮುಖ್ಯಮಂತ್ರಿಯಾಗಿ ರಾಜೀನಾಮೆ ಕೊಟ್ಟ ಮೇಲೆ ಜಿಮ್ ವರ್ಕ್ಔಟ್ ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಜಿಮ್ನಲ್ಲಿ ಟ್ರೆಡ್ಮಿಲ್ ಮತ್ತು ಕ್ರಾಸ್ ಟ್ರೈನರ್ನಲ್ಲಿ ವರ್ಕ್ಔಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಿದ್ದರಾಮಯ್ಯ ಮೊರೆ ಹೋದ ಡಿ.ಕೆ ಶಿವಕುಮಾರ್
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 48 ಗಂಟೆ ಅವಧಿಯಲ್ಲಿ ಹಲವು ಸಂಕಷ್ಟಗಳು ಎದುರಾಗಿವೆ. ಅದರಲ್ಲಿ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಕೊಟ್ಟಿರುವುದು ಸಹ ಪ್ರಮುಖವಾಗಿದೆ. ಇದೀಗ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುವಂತೆ ಡಿ.ಕೆ ಶಿವಕುಮಾರ್ ಅವರ ಬಳಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ಎರಡನೇ ಶಕ್ತಿ ಕೇಂದ್ರವಾಗಿದ್ದಾರೆ.












Click it and Unblock the Notifications