Gold Silver Price: ಭಾರಿ ಏರಿಕೆ ಕಂಡ ಬಂಗಾರದ ಬೆಲೆ; ನಿಮ್ಮ ನಗರದಲ್ಲಿ ಇಂದಿನ ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ?
ಬೆಂಗಳೂರು: ಮದುವೆ ಹಾಗೂ ಇತರೆ ಸಮಾರಂಭಗಳು ಹರಚ್ಚಿರುವ ಈ ಸಂಧರ್ಭದಲ್ಲಿ ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಓಟ ಮುಂದುವರೆದಿದೆ. ಪ್ರತಿದಿನ ಬದಲಾಗುವ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು (ಮೇ 07, 2026) ಗಣನೀಯ ಏರಿಕೆ ಕಂಡುಬಂದಿದೆ. ಅಮೆರಿಕದ ಡಾಲರ್ ಮೌಲ್ಯದಲ್ಲಿನ ಇಳಿಕೆ, ಹಣದುಬ್ಬರದ ಆತಂಕ ಹಾಗೂ ಜಾಗತಿಕ ರಾಜಕೀಯ ಉದ್ವಿಗ್ನತೆಯ ಪರಿಣಾಮವಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡಿದ್ದಾರೆ.
ಇದರಿಂದಾಗಿ ಎಂಸಿಎಕ್ಸ್(ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್) ವಹಿವಾಟಿನಲ್ಲಿ ಚಿನ್ನದ ಫ್ಯೂಚರ್ಸ್ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ನೀವು ಇಂದು ಮದುವೆ ಅಥವಾ ಇತರೆ ಶುಭ ಕಾರ್ಯಗಳಿಗೆ ಆಭರಣ ಖರೀದಿಸುವ ಯೋಚನೆಯಲ್ಲಿದ್ದರೆ, ಮಾರುಕಟ್ಟೆಯ ನಿಖರ ಬೆಲೆಯ ವಿವರವನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಗ್ರಾಹಕರಿಗೆ ಕೊಂಚ ಬಿಸಿತುಪ್ಪವಾಗಿ ಪರಿಣಮಿಸಿದೆ. ಮಾರುಕಟ್ಟೆಯ ಇಂದಿನ ನಿಖರ ದತ್ತಾಂಶದ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 13,946 ರೂಪಾಯಿ ದಾಖಲಾಗಿದ್ದು 10 ಗ್ರಾಂಗೆ 1,39,460 ರೂಪಾಯಿಯಿದೆ. ಅದೇ ರೀತಿ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 15,214 ರೂಪಾಯಿ ಇದ್ದು, 10 ಗ್ರಾಂಗೆ 1,52,140 ರೂಪಾಯಿಯಿದೆ.
ಬೆಳ್ಳಿಯ ದರ ಕೂಡ ಗಣನೀಯವಾಗಿ ಏರಿಕೆಯಾಗಿದ್ದು, ಇಂದಿನ ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ 2,65,000 ರೂಪಾಯಿಗಳಷ್ಟಿದೆ. ಅಂದರೆ ಪ್ರತಿ ಗ್ರಾಂಗೆ 265 ರೂಪಾರಿಯಷ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ ಚಿನ್ನದ ಬೆಲೆ (ಪ್ರತಿ 1 ಗ್ರಾಂಗೆ):
ಬೆಂಗಳೂರು - 13,946 ರೂಪಾಯಿ
ದೆಹಲಿ - 13,960 ರೂಪಾಯಿ
ಚೆನ್ನೈ - 14,100 ರೂಪಾಯಿ
ಮುಂಬೈ - 13,945 ರೂಪಾಯಿ
ಹೈದರಾಬಾದ್ - 13,945 ರೂಪಾಯಿ
ಅಹಮದಾಬಾದ್ - 13,950 ರೂಪಾಯಿ
ಪುಣೆ - 13,945 ರೂಪಾಯಿ
ಕೋಲ್ಕತ್ತಾ - 13,945 ರೂಪಾಯಿ
ಮೇ 07, 2026 ರ ಮಾರುಕಟ್ಟೆ ವರದಿಗಳ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಏರಿಕೆ ಕಂಡಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ದರ ಪ್ರತಿ ಗ್ರಾಂಗೆ 13,946 ರೂಪಾಯಿ ತಲುಪಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2.65 ಲಕ್ಷ ರೂ. ಮುಟ್ಟಿದೆ. ದೆಹಲಿ, ಚೆನ್ನೈ ಸೇರಿದಂತೆ ದೇಶದ ಇತರೆ ಮಹಾನಗರಗಳಲ್ಲೂ ಚಿನ್ನದ ದರ 14 ಸಾವಿರದ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಆಭರಣ ಪ್ರಿಯರಿಗೆ ಹೊರೆಯಾಗಿ ಪರಿಣಮಿಸಿದೆ.












Click it and Unblock the Notifications