ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳು ಹತೋಟಿಗೆ ಸಲಹೆಗಳು

ಬೆಂಗಳೂರು, ಜುಲೈ 10 : ಮುಂಗಾರು ಮಳೆ ವಿವಿಧ ಜಿಲ್ಲೆಗಳಲ್ಲಿ ಜೋರಾಗಿದ್ದು ಹಂಗಾಮಿನ ಕೃಷಿ ಚಟುವಟಿಕೆ ಆರಂಭವಾಗಿದೆ. ಮೆಕ್ಕೆಜೋಳ ಬೆಳೆಯಲ್ಲಿ ಹುಸಿ ಸೈನಿಕ ಹುಳುವಿನ ಭಾದೆಯು ಕಂಡು ಬಂದಿದ್ದು ಇದನ್ನು ನಿಯಂತ್ರಿಸಲು ಕೃಷಿ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.

Recommended Video

      Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

      ರೈತರು ಪ್ರತಿ ಎಕರೆಗೆ 5ರಂತೆ ಮೋಹಕ ಬಲೆಗಳನ್ನು ಇಡುವುದು, ವ್ಯಾಪಕವಾಗಿ ಪೀಡೆ ಸಮೀಕ್ಷೆಯನ್ನು ಕೈಗೊಂಡು ಕೀಟದ ಉಪಸ್ಥಿತಿ ಮತ್ತು ಹರಡುವಿಕೆ ಬಗ್ಗೆ ನಿಗಾ ವಹಿಸಿಸುವ ಮೂಲಕ ಸೈನಿಕ ಹುಳುವಿನ ಕಾಟವನ್ನು ನಿಯಂತ್ರಣಕ್ಕೆ ತರಬಹುದು.

      ಮೆಕ್ಕೆಜೋಳದಲ್ಲಿ ದ್ವಿದಳ ಧಾನ್ಯಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು. ಬೆಳೆಯ ಆರಂಭಿಕ ಹಂತದಲ್ಲಿ ಪಕ್ಷಿಗಳ ಆಕರ್ಷಣೆಗಾಗಿ ಹೊಲದಲ್ಲಿ ಪಕ್ಷಿ ಆಕರ್ಷಕಗಳನ್ನು ಸ್ಥಾಪಿಸುವುದು. ಹುಸಿ ಸೈನಿಕ ಹುಳವಿನ ಆಕರ್ಷಣೆಗಾಗಿ ಬಲೆ ಬೆಳೆಗಳಾದ ನೇಪಿಯರ್ ಹುಲ್ಲು ಬೆಳೆಯನ್ನು 4 ರಿಂದ 5 ಸಾಲುಗಳಲ್ಲಿ ಮೆಕ್ಕೆಜೋಳ ಬೆಳೆಯ ಸುತ್ತಲು ಬೆಳೆಯುವುದು.

      ಬಲೆ ಬೆಳೆಯ ಮೇಲೆ ಕೀಟ ಭಾದೆಯ ಲಕ್ಷಣಗಳು ಗೋಚರಿಸಿದ ತಕ್ಷಣ 5% ಎನ್.ಎಸ್.ಕೆ.ಇ ಅಥವಾ 1500 ಪಿಪಿಎಮ್ ಬೇವಿನ ಎಣ್ಣೆಯನ್ನು 5 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಸಿಂಪಡಿಸಬೇಕು.

      Tips To Control Sainika Hulu In Maize Crop

      ಕೀಟಗಳು ಗುಂಪಾಗಿ ಇಟ್ಟಿರುವ ಮೊಟ್ಟೆ ಹಾಗೂ ಮರಿ ಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸಬಹುದು. ಎಕರೆಗೆ 15ರಂತೆ ಮೋಹಕ ಬಲೆಗಳನ್ನು ಬಳಸಿ ಗಂಡು ಪತಂಗಗಳನ್ನು ಹಿಡಿದು ನಾಶಪಡಿಸಬಹುದಾಗಿದೆ. ಕೀಟಬಾಧೆ ತೀವ್ರತೆ ಕಡಿಮೆ ಇದ್ದರೆ ಅಥವಾ ಮರಿ ಹುಳುಗಳ ನಿರ್ವಹಣೆಗೆ ಜೈವಿಕ ಕೀಟ ನಾಶಕವಾದ ನ್ಯೂಮೋರಿಯಾರಿಲೆ ಶಿಲೀಂದ್ರವನ್ನು 2 ಗ್ರಾಂ, ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು.

      ವಿಷ ಪ್ರಾಷಣ ಬಳಕೆ : 10ಕೆಜಿ ಗೋಧಿ ತವಡು ಅಥವಾ ಅಕ್ಕಿ ತವಡು, 1 ಕೆಜಿ ಬೆಲ್ಲಕ್ಕೆ ಬೇಕಾಗುವಷ್ಟು ತಕ್ಕ ಮಟ್ಟಿಗೆ ನೀರನ್ನು ಬೆರೆಸಿಟ್ಟು ರಾತ್ರಿಯಿಡಿ ಕೊಳೆಯಲು ಬಿಟ್ಟು ಮಾರನೆ ದಿನ 100 ಗ್ರಾಂ ಥಯೋಡಿರ್ಕ್ ಕೀಟನಾಶಕ ಮಿಶ್ರಣ ಮಾಡಿ ಸಂಜೆ 5 ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಉದಿರಿಸಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+